ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರ್ಷದಲ್ಲೇ ಅತಿ ದೊಡ್ಡ ಕುಸಿತ ಕಂಡ ಷೇರು ಪೇಟೆ; 770 ಅಂಶಗಳಷ್ಟು ಇಳಿಕೆ

By ಅನಿಲ್ ಆಚಾರ್
|
Google Oneindia Kannada News

ಮುಂಬೈ, ಸೆಪ್ಟೆಂಬರ್ 3: ಬಿಎಸ್ ಇ ಸೆನ್ಸೆಕ್ಸ್ ಸೂಚ್ಯಂಕವು ಮಂಗಳವಾರದಂದು 770 ಅಂಶಗಳಷ್ಟು ಕುಸಿತ ಕಂಡಿದೆ. ಈ ವರ್ಷದಲ್ಲೇ ಇದು ಅತ್ಯಂತ ಹೆಚ್ಚಿನ ಕುಸಿತ ಆಗಿದೆ. ಇನ್ನು ನಿಫ್ಟಿ ಸೂಚ್ಯಂಕವು 225 ಅಂಶಗಳಗಿಂತ ಹೆಚ್ಚು ಕುಸಿದಿದೆ. ಆರ್ಥಿಕ ಹಿಂಜರಿತದ ಆತಂಕ ಹಾಗೂ ಜಾಗತಿಕ ವ್ಯಾಪಾರ ಸಮರದ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಹೂಡಿಕೆದಾರರು ಎಲ್ಲ ವಲಯದ ಷೇರುಗಳ ಮಾರಾಟ ಮಾಡಿದ್ದಾರೆ.

ಈಚೆಗೆ ಬಿಡುಗಡೆ ಆದ ಜಿಡಿಪಿ (ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ದತ್ತಾಂಶಗಳು, ಮುಖ್ಯ ವಲಯಗಳು, ವಾಹನ ಮಾರಾಟದಲ್ಲಿನ ಇಳಿಕೆ ಇವೆಲ್ಲವೂ ದೇಶದ ಅರ್ಥವ್ಯವಸ್ಥೆಯು ಬೇರು ಮಟ್ಟದಲ್ಲೇ ಕುಸಿತದ ಹಾದಿಯಲ್ಲಿ ಇದೆ ಎಂಬುದನ್ನು ಸೂಚಿಸುತ್ತದೆ. ಮಂಗಳವಾರದಂದು ಹೂಡಿಕೆದಾರರ 2.61 ಲಕ್ಷ ಕೋಟಿ ರುಪಾಯಿ ಸಂಪತ್ತು ಕರಗಿದೆ.

ಕೆಟ್ಟ ಸುದ್ದಿ, ವಾತಾವರಣದ ಭಾರಕ್ಕೆ ಕುಸಿದ ಭಾರತೀಯ ಷೇರು ಮಾರುಕಟ್ಟೆಕೆಟ್ಟ ಸುದ್ದಿ, ವಾತಾವರಣದ ಭಾರಕ್ಕೆ ಕುಸಿದ ಭಾರತೀಯ ಷೇರು ಮಾರುಕಟ್ಟೆ

ದಿನದ ಕನಿಷ್ಠ ಮಟ್ಟ ಅಂದರೆ 867 ಅಂಶಗಳಷ್ಟು ಸೆನ್ಸೆಕ್ಸ್ ಕುಸಿದಿತ್ತು. ಆ ನಂತರ ಚೇತರಿಸಿಕೊಂಡು, ದಿನದ ಕೊನೆಗೆ 768.88 ಅಂಶಗಳು ಕುಸಿಯುವ ಮೂಲಕ 36,562.91 ಅಂಶ ತಲುಪಿತು. ಇನ್ನು ನಿಫ್ಟಿ ಕೂಡ 225.35 ಅಂಶ ಇಳಿಕೆ ಕಂಡು, 10,797.90 ಅಂಶವನ್ನು ತಲುಪಿತು.

Sensex Biggest Fall In The Year Due To Economy Slow Down And Other Factors

ಐಸಿಐಸಿಐ ಬ್ಯಾಂಕ್, ಟಾಟಾ ಸ್ಟೀಲ್, ವೇದಾಂತ, ಎಚ್ ಡಿಎಫ್ ಸಿ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಟಾಟಾ ಮೋಟಾರ್ಸ್, ರಿಲಯನ್ಸ್, ಒಎನ್ ಜಿಸಿ ಕಂಪೆನಿ ಷೇರುಗಳು 4.45 ಪರ್ಸೆಂಟ್ ತನಕ ಇಳಿಕೆ ಕಂಡವು.

ಕೇವಲ ಎರಡು ಐ.ಟಿ. ಷೇರುಗಳು ಮಾತ್ರ ಸ್ವಲ್ಪ ಏರಿಕೆ ಕಂಡವು. ಅದು ಕೂಡ ಅಮೆರಿಕದ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಇಳಿಕೆ ಆದ ಕಾರಣದಿಂದ. ಭಾರತದ ರುಪಾಯಿ ಮೌಲ್ಯ 90 ಪೈಸೆ ಇಳಿಕೆಯಾಗಿ (ಇಂಟ್ರಾ ಡೇ) ರು. 72.27 ರಲ್ಲಿ ವ್ಯವಹಾರ ನಡೆಯುತ್ತಿದೆ.

ಇನ್ನು ಸೆನ್ಸೆಕ್ಸ್ ನ ವಿವಿಧ ವಲಯದ ಷೇರುಗಳು ಇಳಿಕೆ ಕಂಡಿವೆ. ಜಿಡಿಪಿಯಲ್ಲಿ ಭಾರೀ ಇಳಿಕೆ ಕಂಡ ಹಿನ್ನೆಲೆಯಲ್ಲಿ ಅದು ಕೂಡ ಪರಿಣಾಮ ಬೀರಿದೆ. ಇನ್ನು 10 ಗ್ರಾಮ್ ನ 24 ಕ್ಯಾರೆಟ್ ನ ಚಿನ್ನದ ಬೆಲೆ 40,360 ತಲುಪಿದೆ.

English summary
BSE Sensex biggest fall in the year and Nifty down more than 200 points on Tuesday. Here is the complete story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X