ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಷೇರುಪೇಟೆ ಚೇತರಿಕೆ: ಸತತ 5ನೇ ದಿನ ಏರಿಕೆ

|
Google Oneindia Kannada News

ನವದೆಹಲಿ, ಅಕ್ಟೋಬರ್ 07: ಭಾರತೀಯ ಷೇರುಪೇಟೆಯು ಕಳೆದ ಹಲವು ವಹಿವಾಟುಗಳಲ್ಲಿ ಚೇತರಿಕೆ ಸಾಧಿಸಿದ್ದು, ಬುಧವಾರವೂ ಏರಿಕೆ ಕಂಡಿದೆ. ಮುಂಬೈ ಷೇರು ಪೇಟೆ ಸೆನ್ಸೆಕ್ಸ್ 304.38 ಅಂಕ ಏರಿಕೆ ಕಂಡು 39,878.95 ಅಂಕಗಳಿಗೆ ದಿನದ ವಹಿವಾಟು ಮುಗಿಸಿತು. ಈ ಮೂಲಕ ಸತತ ಐದನೇ ದಿನ ಏರಿಕೆ ದಾಖಲಿಸಿದೆ.

ರಾಷ್ಟ್ರೀಯ ಷೇರು ಪೇಟೆ ಸೂಚ್ಯಂಕ ನಿಫ್ಟಿ ಕೂಡ 76.45 ಅಂಕಗಳ ಏರಿಕೆಯೊಂದಿಗೆ 11,738.85 ಅಂಕಗಳಿಗೆ ದಿನದ ವಹಿವಾಟು ಅಂತ್ಯಗೊಳಿಸಿತು.

ದಾಖಲೆಯ ಏರಿಕೆ ಕಂಡ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಷೇರುಗಳು: 3 ದಿನದಲ್ಲಿ ಸುಮಾರು 900 ರೂ. ಏರಿಕೆದಾಖಲೆಯ ಏರಿಕೆ ಕಂಡ ಡಾ.ರೆಡ್ಡೀಸ್ ಲ್ಯಾಬೊರೇಟರೀಸ್ ಷೇರುಗಳು: 3 ದಿನದಲ್ಲಿ ಸುಮಾರು 900 ರೂ. ಏರಿಕೆ

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ನಲ್ಲಿ ಬುಧವಾರ ಟೈಟಾನ್ ಕಂಪನಿ ಷೇರುಗಳು ಅತಿ ಹೆಚ್ಚು ಏರಿಕೆ ದಾಖಲಿಸಿತು. ನಂತರದಲ್ಲಿ ಅಂಬುಜಾ ಸಿಮೆಂಟ್, ಬಜಾಜ್‌ ಆಟೋ, ಮಾರುತಿ, ರಿಲಯನ್ಸ್‌ ಇಂಡಸ್ಟ್ರೀಸ್‌, ಅಲ್ಟ್ರಾಟೆಕ್ ಸಿಮೆಂಟ್, ಒಎನ್‌ಜಿಸಿ ಷೇರುಗಳು ಶೇ. 2ಕ್ಕಿಂತ ಹೆಚ್ಚಿನ ಏರಿಕೆ ದಾಖಲಿಸಿದವು. ಇದೇ ವೇಳೆ ಬಜಾಜ್‌ ಫೈನಾನ್ಸ್‌, ಪವರ್‌ ಗ್ರಿಡ್‌, ಸನ್‌ ಫಾರ್ಮಾ, ಟಾಟಾ ಸ್ಟ್ರೀಲ್,ಎನ್‌ಟಿಪಿಸಿ ಷೇರುಗಳು ಮಂದಗತಿಯ ವಹಿವಾಟು ನಡೆಸಿದವು.

Sensex And Nifty Up: Gainers And Loosers Here

ಇನ್ನು ರಾಷ್ಟ್ರೀಯ ಷೇರುಪೇಟೆ ನಿಫ್ಟಿಯಲ್ಲಿ ಟೈಟಾನ್‌ ಕಂಪನಿ, ಬಜಾಜ್‌ ಆಟೋ, ಹೀರೊ ಮೋಟೊಕಾಪ್, ಮಾರುತಿ ಸುಜುಕಿ, ರಿಲಯನ್ಸ್, ಶ್ರೀ ಸಿಮೆಂಟ್, ಅಲ್ಟ್ರಾಟೆಕ್ ಸಿಮೆಂಟ್, ಈಚರ್ ಮೋಟಾರ್ಸ್, ಒಎನ್‌ಜಿಸಿ, ಹೆಚ್‌ಡಿಎಫ್‌ಸಿ ಬ್ಯಾಂಕ್ ಷೇರುಗಳು ಏರಿಕೆ ದಾಖಲಿಸಿದೆ.

ರಿಸರ್ವ್‌ ಬ್ಯಾಂಕ್‌ ಅಕ್ಟೋಬರ್‌ 9ರಂದು ಹಣಕಾಸು ನೀತಿ ಬಿಡುಗಡೆ ಮಾಡಲಿದೆ. ಈ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯಲ್ಲಿ ಸತತ ಐದನೇ ದಿನವೂ ಏರಿಕೆ ದಾಖಲಿಸಿದೆ.

English summary
India's share market up on wednesday sensex strait fifth day up and nifty back above 11,700
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X