ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಷೇರುಪೇಟೆಯಲ್ಲಿ ಮುಂದುವರಿದ ಗೂಳಿ ಓಟ: ದಾಖಲೆಯ ಮಟ್ಟಕ್ಕೆ ತಲುಪಿದ ಸೆನ್ಸೆಕ್ಸ್, ನಿಫ್ಟಿ

|
Google Oneindia Kannada News

ನವದೆಹಲಿ, ಜನವರಿ 04: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಸೋಮವಾರ ಹೂಡಿಕೆದಾರರ ಸಂತೋಷಕ್ಕೆ ಪಾರವಿಲ್ಲದಂತಾಗಿದೆ. ಕಾರಣ ಭಾರತವು ಕೋವಿಡ್-19 ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನೀಡಿದ ಬಳಿಕ ಷೇರುಪೇಟೆಯು ಮತ್ತೊಂದು ಹಂತಕ್ಕೆ ತಲುಪಿದೆ. ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ 300ಕ್ಕೂ ಅಧಿಕ ಪಾಯಿಂಟ್ಸ್‌ಗಳಿಸಿದರೆ, ರಾಷ್ಟ್ರೀಯ ಷೇರುಪೇಟೆ ನಿಫ್ಟಿಯು 14,100ರ ಗಡಿ ದಾಟಿದೆ.

ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 307.82 ಅಥವಾ ಶೇ. 0.64ರಷ್ಟು ಏರಿಕೆಗೊಂಡು 48,176.80 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 114.40 ಪಾಯಿಂಟ್ಸ್‌ ಅಥವಾ 0.82ರಷ್ಟು ಏರಿಕೆಗೊಂಡು 14,132.90 ಪಾಯಿಂಟ್ಸ್‌ಗೆ ತಲುಪಿದೆ. ಇಂದು 2,061 ಷೇರುಗಳು ಏರಿಕೆ ಕಂಡಿದ್ದು, 973 ಷೇರುಗಳು ಇಳಿಕೆ ಸಾಧಿಸಿದೆ ಮತ್ತು 158 ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

ಮೊದಲ ಬಾರಿಗೆ 14,000 ಗಡಿ ದಾಟಿ ವಹಿವಾಟು ಮುಗಿಸಿದ ನಿಫ್ಟಿ, ಸೆನ್ಸೆಕ್ಸ್ ಕೂಡ ಏರಿಕೆಮೊದಲ ಬಾರಿಗೆ 14,000 ಗಡಿ ದಾಟಿ ವಹಿವಾಟು ಮುಗಿಸಿದ ನಿಫ್ಟಿ, ಸೆನ್ಸೆಕ್ಸ್ ಕೂಡ ಏರಿಕೆ

ಇಂದು ಟಾಟಾ ಸ್ಟೀಲ್, ಹಿಂಡಾಲ್ಕೊ, ಈಚರ್ ಮೋಟಾರ್ಸ್, ಒಎನ್‌ಜಿಸಿ ಮತ್ತು ಟಿಸಿಎಸ್, ಹೆಚ್‌ಸಿಎಲ್ ಟೆಕ್ನಾಲಜೀಸ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾಗಿದ್ದು, ಹೀರೋ ಮೊಟೊಕಾರ್ಪ್, ಕೊಟಕ್ ಮಹೀಂದ್ರಾ ಬ್ಯಾಂಕ್, ಬಜಾಜ್ ಫೈನಾನ್ಸ್, ಅದಾನಿ ಪೋರ್ಟ್ಸ್ ಮತ್ತು ಏಷ್ಯನ್ ಪೇಂಟ್ಸ್ ನಷ್ಟ ಅನುಭವಿಸಿವೆ.

Sensex And Nifty End At Record Highs: Nifty Above 14,100

ಬ್ಯಾಂಕ್ ಹೊರತುಪಡಿಸಿ ಲೋಹ, ಐಟಿ, ಆಟೋ ಮತ್ತು ಫಾರ್ಮಾ ಷೇರುಗಳು ಹಸಿರು ಬಣ್ಣದಲ್ಲಿ ಕೊನೆಗೊಂಡಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 1 ಪ್ರತಿಶತದಷ್ಟು ಜಿಗಿದವು.

ಇದರ ನಡುವೆ ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಮೌಲ್ಯ ಡಾಲರ್ ಎದುರು 10 ಪೈಸೆ ಹೆಚ್ಚಳಗೊಂಡು ಪ್ರತಿ ಡಾಲರ್‌ಗೆ 73.02 ಕ್ಕೆ ತಲುಪಿದೆ. ಇಂದು 72.90-73.03 ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು.

English summary
Benchmark indices ended at record closing level with Nifty above 14,100 and Sensex above 48,000 level.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X