ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ನಾಗರಿಕರಿಗೆ ವಿಶೇಷ ಎಫ್‌ಡಿ ಯೋಜನೆಗಳು: ಯಾವ ಬ್ಯಾಂಕ್‌ನಲ್ಲಿ ಎಷ್ಟಿದೆ ಬಡ್ಡಿ?

|
Google Oneindia Kannada News

ನವದೆಹಲಿ, ಜುಲೈ 28: ಕಷ್ಟಪಟ್ಟು ಹಣ ಉಳಿತಾಯ ಮಾಡಿ, ಭವಿಷ್ಯಕ್ಕೆ ಉಪಯೋಗಕ್ಕೆ ಬರಬಹುದು ಎಂದು ಹಣವನ್ನು ನಿಶ್ಚಿತ ಠೇವಣಿ(ಫಿಕ್ಸೆಡ್ ಡೆಪಾಸಿಟ್) ಮಾಡುವುದು ಸಾಮಾನ್ಯ. ಅದರಲ್ಲೂ ಹಿರಿಯ ನಾಗರಿಕರು ತಮ್ಮ ಹಣವನ್ನು ಸುರಕ್ಷಿತವಾಗಿ ಆದಾಯ ಬರುವಂತೆ ಹೂಡಿಕೆ ಮಾಡುವುದು ನಿಶ್ಚಿತ ಠೇವಣಿಗಳಲ್ಲಿ.

ಭಾರತದ ಬಹುತೇಕ ಎಲ್ಲಾ ಬ್ಯಾಂಕುಗಳು ನಿಶ್ಚಿತ ಠೇವಣಿ ಮೇಲೆ ನೀಡುವ ಬಡ್ಡಿ ದರವು ಸಾಮಾನ್ಯ ಗ್ರಾಹಕರಿಗಿಂತ ಸ್ವಲ್ಪ ಹೆಚ್ಚು ಎಂಬಂತೆ ಹಿರಿಯ ನಾಗರಿಕರಿಗೆ ಹೆಚ್ಚುವರಿ 0.50 ಪರ್ಸೆಂಟ್ ಬಡ್ಡಿ ದರವನ್ನು ಹೊಂದಿವೆ. ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಇತರೆ ಬ್ಯಾಂಕುಗಳು ಹಿರಿಯ ನಾಗರಿಕರಿಗೆ 0.50 ಪರ್ಸೆಂಟ್ ಹೆಚ್ಚುವರಿ ಬಡ್ಡಿ ಕೊಡುವುದು ಸಾಮಾನ್ಯ.

SBI ಫಿಕ್ಸೆಡ್ ಡೆಪಾಸಿಟ್ ಆನ್‌ಲೈನ್‌ನಲ್ಲಿ ತೆರೆಯುವುದು ಹೇಗೆ?SBI ಫಿಕ್ಸೆಡ್ ಡೆಪಾಸಿಟ್ ಆನ್‌ಲೈನ್‌ನಲ್ಲಿ ತೆರೆಯುವುದು ಹೇಗೆ?

ಇತ್ತೀಚೆಗೆ ಆರ್‌ಬಿಐ ರೆಪೋ ದರ ಇಳಿಕೆ ಮಾಡಿದ ಬಳಿಕ ಬ್ಯಾಂಕ್‌ನ ಬಡ್ಡಿ ದರಗಳಲ್ಲಿ ಬದಲಾವಣೆ ಆಗಿದೆ. ಎಸ್‌ಬಿಐ, ಬ್ಯಾಂಕ್ ಆಫ್ ಬರೋಡಾ, ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕರ ವಿಶೇಷ ಎಫ್‌ಡಿ ಯೋಜನೆಯ ಕೆಲವು ಸಾಮಾನ್ಯ ಲಕ್ಷಣಗಳು ಇಲ್ಲಿವೆ.

ಎಸ್‌ಬಿಐ ವಿಶೇಷ ಎಫ್‌ಡಿ ಯೋಜನೆ

ಎಸ್‌ಬಿಐ ವಿಶೇಷ ಎಫ್‌ಡಿ ಯೋಜನೆ

ಹಿರಿಯ ನಾಗರಿಕರಿಗಾಗಿ ಎಸ್‌ಬಿಐ ವಿಶೇಷ ಎಫ್‌ಡಿ ಯೋಜನೆಯನ್ನು 'ಎಸ್‌ಬಿಐ ವಿ ಕೇರ್' ಎಂದು ಕರೆಯಲಾಗುತ್ತದೆ.

ಹೊಸ ಬಡ್ಡಿ: 80 ಬಿಪಿಎಸ್ ಹೆಚ್ಚು

ಬಡ್ಡಿದರ: ಹಿರಿಯ ನಾಗರಿಕರು ವಿಶೇಷ ಎಫ್‌ಡಿ ಯೋಜನೆಯಡಿ ನಿಶ್ಚಿತ ಠೇವಣಿ ಇಟ್ಟರೆ, ಎಫ್‌ಡಿಗೆ ಅನ್ವಯವಾಗುವ ಬಡ್ಡಿದರ ಶೇ. 6.20ರಷ್ಟು ಆಗಿರುತ್ತದೆ. ಈ ದರಗಳು ಮೇ 27 ರಿಂದ ಅನ್ವಯವಾಗುತ್ತವೆ.

 ಬ್ಯಾಂಕ್ ಆಫ್ ಬರೋಡಾ

ಬ್ಯಾಂಕ್ ಆಫ್ ಬರೋಡಾ

ಕೋವಿಡ್-19 ತಂದ ಪ್ರಸ್ತುತ ಸವಾಲಿನ ಪರಿಸ್ಥಿತಿಯಲ್ಲಿ, ಭಾರತೀಯ ಹಿರಿಯ ನಾಗರಿಕರಿಗೆ "5 ವರ್ಷಕ್ಕಿಂತ ಮೇಲ್ಪಟ್ಟ 10 ವರ್ಷಗಳು" ಅವಧಿಯಲ್ಲಿ ಹೆಚ್ಚುವರಿ ಬಡ್ಡಿದರವನ್ನು ಪಾವತಿಸಲು ಬ್ಯಾಂಕ್ ಒಪ್ಪಿದೆ ಮತ್ತು ಇದು 30.09.20 ರವರೆಗೆ ಮಾನ್ಯವಾಗಿರುತ್ತದೆ.

ಹೊಸ ಬಡ್ಡಿ: 100 ಬಿಪಿಎಸ್ ಹೆಚ್ಚು

ಬಡ್ಡಿದರ: ಹಿರಿಯ ನಾಗರಿಕರು ವಿಶೇಷ ಎಫ್‌ಡಿ ಯೋಜನೆಯಡಿ ನಿಶ್ಚಿತ ಠೇವಣಿ ಇಟ್ಟರೆ, ಎಫ್‌ಡಿಗೆ ಅನ್ವಯವಾಗುವ ಬಡ್ಡಿದರ ಶೇ. 6.30ರಷ್ಟು ಆಗಿರುತ್ತದೆ. 7 ದಿನಗಳಿಂದ 10 ವರ್ಷಗಳಲ್ಲಿ ಪಕ್ವವಾಗುವ ಠೇವಣಿಗಳ ಮೇಲೆ, ಬ್ಯಾಂಕ್ ಆಫ್ ಬರೋಡಾ ಹಿರಿಯ ನಾಗರಿಕರಿಗೆ ಶೇ. 3.40 ರಿಂದ 6.30ರವರೆಗೆ ಪಾವತಿಸುತ್ತದೆ.

ಫಿಕ್ಸೆಡ್ ಡೆಪಾಸಿಟ್‌ ಮೊರೆ ಹೋದ ಅನಿವಾಸಿ ಭಾರತೀಯರು: ಏನು ಉಪಯೋಗ?ಫಿಕ್ಸೆಡ್ ಡೆಪಾಸಿಟ್‌ ಮೊರೆ ಹೋದ ಅನಿವಾಸಿ ಭಾರತೀಯರು: ಏನು ಉಪಯೋಗ?

ಠೇವಣಿ ಬ್ಯಾಂಕಿನಲ್ಲಿ ಉಳಿದಿರುವ ಅವಧಿಗೆ ಮುನ್ನ ತೆಗೆದುಕೊಂಡ ಹಣಕ್ಕೆ ಬಡ್ಡಿದರದ ಮೇಲೆ ಶೇ. 1.5% ದಂಡ

ಹೆಚ್‌ಡಿಎಫ್‌ಸಿ ಬ್ಯಾಂಕ್

ಹೆಚ್‌ಡಿಎಫ್‌ಸಿ ಬ್ಯಾಂಕ್

ಹಿರಿಯ ನಾಗರಿಕರಿಗಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ವಿಶೇಷ ಎಫ್‌ಡಿ ಯೋಜನೆಯನ್ನು ಎಚ್‌ಡಿಎಫ್‌ಸಿ ಹಿರಿಯ ನಾಗರಿಕ ಆರೈಕೆ ಎಂದು ಕರೆಯಲಾಗುತ್ತದೆ.

ಹೊಸ ಬಡ್ಡಿ: 75 ಬಿಪಿಎಸ್ ಹೆಚ್ಚು

ಬಡ್ಡಿದರ: ಹಿರಿಯ ನಾಗರಿಕರು ಎಚ್‌ಡಿಎಫ್‌ಸಿ ಬ್ಯಾಂಕ್ ಹಿರಿಯ ನಾಗರಿಕ ಆರೈಕೆ ಎಫ್‌ಡಿ ಅಡಿಯಲ್ಲಿ ನಿಶ್ಚಿತ ಠೇವಣಿ ಇಟ್ಟರೆ, ಎಫ್‌ಡಿಗೆ ಅನ್ವಯವಾಗುವ ಬಡ್ಡಿದರ ಶೇ. 6.25ರಷ್ಟು ಆಗಿರುತ್ತದೆ. ಈ ಹೊಸ ಉತ್ಪನ್ನದಡಿಯಲ್ಲಿ, ಹಿರಿಯ ನಾಗರಿಕರಿಗೆ ಹೆಚ್ಚುವರಿ 25 ಬಿಪಿಎಸ್ ಪ್ರೀಮಿಯಂ ಪಾವತಿಸಲಾಗುವುದು. ಈ ದರಗಳು ಜೂನ್ 12 ರಿಂದ ಅನ್ವಯವಾಗುತ್ತವೆ.

ಅಕಾಲಿಕ ಹಿಂತೆಗೆದುಕೊಳ್ಳುವಿಕೆ: 5 ವರ್ಷಗಳಲ್ಲಿ ಅಥವಾ ಮೊದಲು ಹಿಂತೆಗೆದುಕೊಂಡರೆ ಶೇ. 1ರಷ್ಟು ದಂಡ

ಐಸಿಐಸಿಐ ಬ್ಯಾಂಕ್ ವಿಶೇಷ ಎಫ್‌ಡಿ ಯೋಜನೆ

ಐಸಿಐಸಿಐ ಬ್ಯಾಂಕ್ ವಿಶೇಷ ಎಫ್‌ಡಿ ಯೋಜನೆ

ಹಿರಿಯ ನಾಗರಿಕರಿಗಾಗಿ ಐಸಿಐಸಿಐ ಬ್ಯಾಂಕ್ ವಿಶೇಷ ಎಫ್‌ಡಿ ಯೋಜನೆಯನ್ನು ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಂದು ಕರೆಯಲಾಗುತ್ತದೆ.

ಹೊಸ ಬಡ್ಡಿ: 80 ಬಿಪಿಎಸ್ ಹೆಚ್ಚು

ಬಡ್ಡಿದರ: ಐಸಿಐಸಿಐ ಬ್ಯಾಂಕ್ ಗೋಲ್ಡನ್ ಇಯರ್ಸ್ ಎಫ್‌ಡಿ ಯೋಜನೆಯು ಹಿರಿಯ ನಾಗರಿಕರಿಗೆ ವಾರ್ಷಿಕ ಶೇ. 6.30ರಷ್ಟು ಬಡ್ಡಿದರವನ್ನು ನೀಡುತ್ತದೆ.

ಅಕಾಲಿಕ ಹಿಂತೆಗೆದುಕೊಳ್ಳುವಿಕೆ: 5 ವರ್ಷ 1 ದಿನದ ಮೊದಲು ಹಿಂತೆಗೆದುಕೊಂಡರೆ ಶೇ. 1ರಷ್ಟು ದಂಡ

English summary
State Bank of India (SBI), Bank of Baroda and private lenders HDFC Bank, and ICICI Bank have special fixed deposit (FD) scheme for senior citizens. Know more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X