ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಪ್ಪೊ F9 Proನಲ್ಲಿ ಸೆಲ್ಫಿ ಜತೆಗೆ ಎಷ್ಟೊಂದು ಹೊಸ ವಿಶೇಷ!

Google Oneindia Kannada News

ಎಂಥ ದೀರ್ಘ ಪಯಣ ಇದು! 2003ರಲ್ಲಿ ಮೊದಲ ಫ್ಲಿಪ್ ಮೊಬೈಲ್ ಫೋನ್, 0.3 ಪಿಕ್ಸೆಲ್ ಕ್ಯಾಮೆರಾ ಜತೆ ಬಂದಿದ್ದು, ಕರೆ ಮಾಡುವವರ ಮುಖಕ್ಕೆ ಹಿಡಿಯುವಂಥ ಕ್ಯಾಮೆರಾ ಇದ್ದ ಫೋನ್ ಅದು. ಫ್ರಂಟ್ ಕ್ಯಾಮೆರಾ ಒಳಗೊಂಡಿದ್ದ ಮೊದಲ ಮೊಬೈಲ್ ಫೋನ್ ಜನ್ಮ ಪಡೆದಿತ್ತು.

ಫ್ರಂಟ್ ಕ್ಯಾಮೆರಾ ಎಂಬ ಸರಳ ಫೀಚರ್ ಇರುವ ಫೋನ್ ಅನಿಸಿದ್ದರೂ ಸೆಲ್ಫಿ ಯುಗದ ಆರಂಭಕ್ಕೆ ಅದು ಕಾರಣ ಆಗಬಹುದು ಎಂಬ ಸಣ್ಣ ಸುಳಿವಾದರೂ ಆ ಫೋನ್ ನ ರೂಪಿಸಿದವರಿಗೆ ಇದ್ದಿರಲಿಕ್ಕಿಲ್ಲ. ಸಾಮಾಜಿಕ ಜಾಲತಾಣಗಳಂತೂ "ಸೆಲ್ಫಿ" ಎಂಬ ಶತಮಾನದ ಹೊಸ ಪದವೊಂದು ಜಗತ್ತಿನಾದ್ಯಂತ ಪಸರಿಸಿದವು.

"ಸೆಲ್ಫಿ" ಎಂಬುದು 2013ರಲ್ಲಿ ಆಕ್ಸ್ ಫರ್ಡ್ ನಿಂದ ಗುರುತಿಸಿದ ವರ್ಷದ ಪದ ಆಯಿತು. ಸೆಲಿಬ್ರಿಟಿಗಳು, ಪ್ರಭಾವಿಗಳು ಮತ್ತು ಇನ್ ಸ್ಟಾಗ್ರಾಮ್ ಹೀಗೆ ದೊಡ್ಡ ಸಮೂಹವೇ ತಮ್ಮ ಪರ್ ಫೆಕ್ಸ್ ಸೆಲ್ಫಿಗಾಗಿ ಪೋಸ್ ನೀಡುವ ಟ್ರೆಂಡ್ ಗೆ ಇದರ ಮೇಲೆ ಅವಲಂಬಿಸುವ ಟ್ರೆಂಡ್ ಬಂತು. ಎಲ್ಲರೂ ಮಾಡೆಲ್ ಗಳಾದರು, ಫೋಟೋಗ್ರಾಫರ್ ಗಳಾದರು, ಕಲಾ ನಿರ್ದೇಶಕರಾದರು.

Selfies Are Cool, But How About Smartphones That Are As Vibrant As Fabric?

ತಮ್ಮ ಫೋಟೋಗಳನ್ನು ತಿದ್ದಿ, ಪಬ್ಲಿಷ್ ಮಾಡಲು ಶುರು ಆಯಿತು. ನಾವು ತುಂಬ ದೂರ ಸಾಗಿ ಬಂದಿದ್ದೇವೆ. ಈ ಮಧ್ಯೆ ಬಹಳ ಬದಲಾವಣೆ ಕೂಡ ಆಗಿದೆ. ನಾವಿಗಿನ್ನೂ 2000ನೇ ಇಸವಿಯ ಮೊದಲ ದಶಕದಲ್ಲಿಲ್ಲ. ಈಗ 2018. ಫ್ರಂಟ್ ಕ್ಯಾಮೆರಾ ಇನ್ನಷ್ಟು ಪರಿಣಾಮಕಾರಿಯಾಗಿದೆ ಮತ್ತು ಚರ್ಮವನ್ನು ಮತ್ತಷ್ಟು ನುಣುಪು ಕಾಣುವಂತೆ ಮಾಡುತ್ತದೆ.

ಈಗಂತೂ ಸ್ಮಾರ್ಟ್ ಫೋನ್ ಅಂದರೆ ಬರೀ ರೆಸಲ್ಯೂಷನ್, ಸ್ಪಷ್ಟನೆ ಇರುವ "ಸೆಲ್ಫಿ" ಕ್ಯಾಮೆರಾ ಮಾತ್ರವಲ್ಲ. ಮೊಬೈಲ್ ಫೋನ್ ನ ಪ್ಲಾಟ್ ಫಾರ್ಮ್, ಅಪ್ಲಿಕೇಷನ್, ಕೈಯಲ್ಲಿ ಹಿಡಿದಾಗ ಹೇಗೆ ಅನಿಸುತ್ತದೆ, ನಿರ್ದಿಷ್ಟ ಬಣ್ಣಗಳ ಹೊಂದಾಣಿಕೆ, ಕಲಾತ್ಮಕತೆ ಎಲ್ಲವೂ ಮುಖ್ಯವಾಗುತ್ತದೆ. ಮತ್ತು ಅವೆಲ್ಲವನ್ನೂ ಒಳಗೊಂಡಿದೆ ಒಪ್ಪೊ F9 Pro.

F9 Pro ಜತೆಗೆ ದೃಷ್ಟಿಯಲ್ಲೇ ಬದಲಾವಣೆ

ಈ ಆಗಸ್ಟ್ ನಲ್ಲಿ ಒಪ್ಪೊ F9 Pro ಬಿಡುಗಡೆಗೆ ಎಲ್ಲ ಸಜ್ಜಾಗಿದೆ. ತುದಿತುದಿಯಿಂದ ತುದಿವರೆಗೆ ವಾಟರ್ ಡ್ರಾಪ್ ಡಿಸ್ ಪ್ಲೇ ಇರುವ ಈ ಮೊಬೈಲ್ ಫೋನ್ ಬಗ್ಗೆ ವಿಶಿಷ್ಟ ಎನಿಸುವ ಲಕ್ಷಣ ಇದು. ಸ್ಕ್ರೀನ್ ಟು ಬಾಡಿ ರೇಷಿಯೋ 90.8 ಪರ್ಸೆಂಟ್ ಇದೆ. ಅದ್ಭುತವಾಗಿ ಕಾಣುತ್ತದೆ.

Selfies Are Cool, But How About Smartphones That Are As Vibrant As Fabric?

ಒಪ್ಪೊ F9 Proನಲ್ಲಿ ಒಪ್ಪೊ VOOC ಫ್ಲ್ಯಾಷ್ ಚಾರ್ಜ್ ಸಾಮರ್ಥ್ಯ ಇದೆ. ಏನಿದರ ಅರ್ಥ? ಐದು ನಿಮಿಷಗಳ ಕಾಲ ಚಾರ್ಜ್ ಮಾಡಿದರೆ ಎರಡು ಗಂಟೆಗಳ ಕಾಲ ಮಾತನಾಡಬಹುದು. ಬಿಡುಗಡೆ ಆಗಬೇಕಾದ ಒಪ್ಪೊ F9 Proನಲ್ಲಿ ಕಣ್ಸೆಳೆಯುವಂಥದ್ದು ಢಾಳಾದ ಬಣ್ಣ, ಮನಸಿಗೆ ಇಷ್ಟವಾಗುವ ಹೊರನೋಟ. ಇದರ ಜೊತೆಗೆ ತುಂಬ ಹೊಸ ತಂತ್ರಜ್ಞಾನ ಬಳಸಲಾಗಿದೆ.

ಒಪ್ಪೊ F9 Pro ಮೂರು ಪ್ರಾಥಮಿಕ ಬಣ್ಣಗಳಲ್ಲಿ ಬರುತ್ತದೆ. ಸ್ಟಾರಿ ಪರ್ಪಲ್, ಸನ್ ರೈಸ್ ರೆಡ್, ಟ್ವಿಲೈಟ್ ಬ್ಲೂ. ಎಲ್ಲವೂ ಮನಸಿಗೆ ಖುಷಿ ಕೊಡುವ ಮಾದರಿಯಲ್ಲೇ ಇರುತ್ತವೆ. ಕೆಂಪು ಮತ್ತು ನೀಲಿ ಮಾದರಿಗಳಲ್ಲಿ ಹಿಂಭಾಗಕ್ಕೆ ವಜ್ರದ ಆಕಾರದಲ್ಲಿ ಇರುತ್ತದೆ. ನೇರಳೆ ಬಣ್ಣದ್ದು ರಾತ್ರಿ ಆಕಾಶದಲ್ಲಿ ನಕ್ಷತ್ರಗಳು ಒಳಗೊಂಡಂತೆ ಗೋಚರಿಸುತ್ತದೆ.

ಒಪ್ಪೊ F9 Proನ ಸೊಗಸಾದ ಬಣ್ಣದಿಂದ ಸ್ಫೂರ್ತಿಗೊಂಡಿರುವ ಭಾರತದ ಫ್ಯಾಷನ್ ವಲಯದಲ್ಲಿ ಖ್ಯಾತರಾದ ಮನೀಶ್ ಅರೋರಾ ದಿರಿಸುಗಳನ್ನು ರೂಪಿಸಿದ್ದಾರೆ. ಕಸ್ಟಮೈಸ್ಡ್ ಆದ ಟೀ ಷರ್ಟ್ ವೊಂದನ್ನು ಟ್ರೆಂಡ್ ಗೆ ತಕ್ಕ ಹಾಗೆ ರೂಪಿಸಿದ್ದಾರೆ.

Selfies Are Cool, But How About Smartphones That Are As Vibrant As Fabric?

ಒಪ್ಪೊ ಇಂಡಿಯಾ ಬ್ರ್ಯಾಂಡ್ ನಿರ್ದೇಶಕ ವಿಲ್ ಯಾಂಗ್ ಮಾತನಾಡಿ, ಒಪ್ಪೊದ ತಾಂತ್ರಿಕ ಸಾಮರ್ಥ್ಯ ಹಾಗೂ ಮನೀಶ್ ಅರೋರಾ ಸ್ಟೈಲಿಷ್ ಡಿಸೈನ್ ಎರಡೂ ಅತ್ಯುತ್ತಮ ಕಾಂಬಿನೇಷನ್ ಆಗುತ್ತದೆ ಎಂದಿದ್ದಾರೆ.

ಸಾಧಾರಣ ಎಂಬ ಆಲೋಚನೆಯಿಂದ ಆಚೆ ಯೋಚಿಸುವಂತೆ ಮಾಡಬಲ್ಲ ಒಪ್ಪೊ F9 Pro

ಒಪ್ಪೊ ತನ್ನನ್ನು ಹಾಗೂ ತನ್ನೆಲ್ಲ ಉತ್ಪನ್ನಗಳನ್ನು "ಸೆಲ್ಫಿ ಎಕ್ಸ್ ಪರ್ಟ್" ಅಂತಲೇ ಬಿಂಬಿಸಿಕೊಂಡು ಬಂದಿದೆ. ಒಪ್ಪೊ F9 Proನ ಮೂಲಕ ಕೂಡ ಭಾರತೀಯ ಯುವ ಸಮುದಾಯದಲ್ಲಿ ಹೆಚ್ಚುತ್ತಿರುವ ಫ್ಯಾಷನ್ ಹಾಗೂ ಲೈಫ್ ಸ್ಟೈಲ್ ಆಸಕ್ತಿಯಲ್ಲಿ ಹೊಂದಿಕೆ ಆಗುತ್ತ್ತದೆ. ಈ ಹಿಂದಿನ ಒಪ್ಪೊ ಮೊಬೈಲ್ ಫೋನ್ ಗಳಂತೆಯೇ ಒಪ್ಪೊ F9 Proನಲ್ಲಿ ಕೂಡ ಮುಂದಿನ ತಲೆಮಾರಿನ ಹಲುವು ತಂತ್ರಜ್ಞಾನಗಳಿವೆ.

ಅದು ಪ್ರೊಸೆಸರ್ ನಿಂದ ಚಾರ್ಜರ್ ವರೆಗೆ ಮತ್ತು ಕ್ಯಾಮೆರಾದಿಂದ ಡಿಸ್ ಪ್ಲೇವರೆಗೆ. ಒಪ್ಪೊ F9 Pro ಸಾಬೀತು ಪಡಿಸೇ ಪಡಿಸುತ್ತದೆ. ಇಂದಿನ ಮಾರುಕಟ್ಟೆಯಲ್ಲಿ ಸೆಲ್ಫಿ ಕ್ಯಾಮೆರಾ ಮಾತ್ರ ಅತಿ ದೊಡ್ಡ ಅಗತ್ಯ ಅಲ್ಲ. ಫೋನ್ ನ ಫೀಚರ್ ಹಾಗೂ ಹೇಗೆ ಕಾಣುತ್ತದೆ ಎಂಬುದರ ಆಚೆಗೆ ಜನರು ಸ್ಮಾರ್ಟ್ ಫೋನ್ ನಿಂದ ನಿರೀಕ್ಷೆ ಮಾಡುತ್ತಿದ್ದಾರೆ.

ಒಂದೊಳ್ಳೆ ಸ್ಮಾರ್ಟ್ ಫೋನ್ ಆಯ್ಕೆ ಮಾಡಿಕೊಳ್ಳುವುದು ಅಂದರೆ ಒಳಗಿಂದ ಅದ್ಭುತವಾದ ತಾಂತ್ರಿಕತೆ ಹಾಗೂ ಹೊರಗಿನಿಂದ ಕಣ್ಣು ಕುಕ್ಕುವ ಸೌಂದರ್ಯ- ಇವೆರಡರ ಚತುರ ಮಿಶ್ರಣ ಇದ್ದರಷ್ಟೇ ಎಂಬುದಕ್ಕೆ ಇದೊಳ್ಳೆ ಉದಾಹರಣೆ ಆಗಬಲ್ಲದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X