• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹರೀಶ್ ಹಂದೆ ಸ್ಥಾಪಿತ ಸೆಲ್ಕೋಗೆ 'ಸ್ಕೋಲ್' ಪ್ರಶಸ್ತಿ

By Prasad
|

ಭಾರತದ ಸಾಮಾಜಿಕ ಉದ್ಯಮಿ, ಸೌರಶಕ್ತಿಯ ಹರಿಕಾರ ಎಂದೇ ಹೆಸರಾಗಿರುವ ಡಾ.ಹರೀಶ್ ಹಂದೆಯವರು ಸ್ಥಾಪಿಸಿದ ಸೆಲ್ಕೋ ಸಂಸ್ಥೆ, ಜಾಗತಿಕ ಮಟ್ಟದ ಸ್ಕೋಲ್ ಫೌಂಡೇಶನ್ ಕೊಡಮಾಡುವ 'ವಿಶ್ವ ಸಾಮಾಜಿಕ ಉದ್ಯಮ ಸ್ಕೋಲ್' ಪ್ರಶಸ್ತಿಗೆ ಆಯ್ಕೆಯಾಗಿದೆ.

ಸಾಮಾಜಿಕ ಉದ್ಯಮಶೀಲತೆಗಾಗಿ ಕೊಡಮಾಡುವ ಈ ಪ್ರಶಸ್ತಿಯು ಸ್ಕೋಲ್ ಫೌಂಡೇಶನ್‌ನ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು, ಬಡತನದ ನಿವಾರಣೆಗೆ ಸುಸ್ಥಿರ ಶಕ್ತಿಯ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಿದ ಸೆಲ್ಕೋದ ಡಾ. ಹರೀಶ್ ಹಂದೆಯವರ ಸಾಮಾಜಿಕ ಕಾರ್ಯವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಬೆಂಗಳೂರಿನ ಒಳಿತಿಗೆ ಶ್ರಮಿಸಿದ ಆರು ಸಾಧಕರಿಗೆ 'ನಮ್ಮ ಬೆಂಗಳೂರು ಪ್ರಶಸ್ತಿ'

ಸ್ಕೋಲ್ ಫೌಂಡೇಶನ್ ಪ್ರತಿವರ್ಷ ಜಾಗತಿಕವಾಗಿ ಸಾಮಾಜಿಕ ಉದ್ಯಮಶೀಲತೆಗಾಗಿ ಕೆಲಸ ಮಾಡಿದವರಿಗಾಗಿ ಈ ಪ್ರಶಸ್ತಿಯನ್ನು ನೀಡುತ್ತ ಬಂದಿದೆ. ಇದೊಂದು ಸಾಮಾಜಿಕ ಉದ್ಯಮಿಗಳ ಸಮೂಹವಾಗಿದ್ದು ಈಗಾಗಲೇ ವಿಶ್ವದ ಪ್ರಚಲಿತದಲ್ಲಿರುವ ಸಮಸ್ಯೆಗಳ ಮೇಲೆ ಪರಿಣಾಮಕಾರಿಯಾಗಿ ಪರಿಹಾರವನ್ನು ಕಂಡು ಹಿಡಿದವರಿಗಾಗಿ ಈ ಪ್ರಶಸ್ತಿಯನ್ನು ನೀಡುತ್ತದೆ.

SELCO founded by Harish Hande wins Skoll Award

ಏಪ್ರಿಲ್ 12ರಂದು ಇಂಗ್ಲೆಂಡಿನಲ್ಲಿ ಪ್ರಶಸ್ತಿ ಪ್ರದಾನ

ಈ ಪ್ರತಿಷ್ಠಿತ ಪ್ರಶಸ್ತಿಗೆ ಜಾಗತಿಕವಾಗಿ 2,000ಕ್ಕೂ ಅಧಿಕ ಉದ್ಯಮಿಗಳ ಹೆಸರು ನಾಮನಿರ್ದೇಶನಗೊಂಡಿದ್ದು, ಅಂತಿಮ ಘಟ್ಟಕ್ಕೆ ತಲುಪಿದವರು 6. ಈ ಪೈಕಿ ಅಂತಿಮವಾಗಿ ಡಾ.ಹರೀಶ್ ಹಂದೆಯವರ ಸೆಲ್ಕೋ ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯನ್ನು ಏಪ್ರಿಲ್ 12, ಗುರುವಾರ ಇಂಗ್ಲೆಂಡ್ ನಲ್ಲಿ ಪ್ರದಾನ ಮಾಡಲಾಗುತ್ತಿದೆ.

ಪ್ರಶಸ್ತಿ ಪುರಸ್ಕೃತರು ತಮ್ಮ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು 3 ವರ್ಷಗಳ ಕಾಲ ಸಂಪೂರ್ಣ ಬೆಂಬಲವನ್ನು ಸ್ಕೋಲ್ ಫೌಂಡೇಶನ್‌ನಿಂದ ಪಡೆಯುತ್ತಾರೆ. ಈ 3 ವರ್ಷದ ಅವಧಿಯಲ್ಲಿ ಸ್ಕೋಲ್ ವೇದಿಕೆಯ ಮೂಲಕ ದೂರದೃಷ್ಟಿಯುಳ್ಳ ಜಾಗತಿಕ ನಾಯಕರೊಂದಿಗೆ ಮತ್ತು ಹೊಸತನದ ಹರಿಕಾರರೊಂದಿಗೆ ದೀರ್ಘಕಾಲದ ಭಾಗವಹಿಸುವ ಮೂಲಕ ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುತ್ತಾರೆ.

ತುಳು ಸಾಹಿತ್ಯ ಅಕಾಡೆಮಿಯ 2017ನೇ ಸಾಲಿನ ಗೌರವ ಪ್ರಶಸ್ತಿ ಪ್ರಕಟ

ಡಾ.ಹರೀಶ್ ಹಂದೆ ಮತ್ತು ಅವರ ಸಂಸ್ಥೆಯ ಸಾಮಾಜಿಕ ಕಾರ್ಯಗಳಾದ ಪರಿಸರ ಸುಸ್ಥಿರತೆ, ಶಿಕ್ಷಣ, ಆರ್ಥಿಕ ಅವಕಾಶಗಳು, ಆರೋಗ್ಯ ಮತ್ತು ಗ್ರಾಮೀಣ ಉದ್ಯಮಶೀಲತೆ, ಮುಂತಾದ ಕ್ಷೇತ್ರಗಳಲ್ಲಿ ಕಾರ್ಯಚಟುವಟಿಕೆಗಳನ್ನು ಗುರುತಿಸಿ ಸ್ಕೋಲ್ ತಂಡವು 2018ರ ಈ ಪ್ರಶಸ್ತಿಯನ್ನು ನೀಡಿದೆ.

SELCO founded by Harish Hande wins Skoll Award

ನನ್ನ ಮೇಲಿನ ಜವಾಬ್ದಾರಿ ಹೆಚ್ಚಿದೆ - ಡಾ.ಹರೀಶ್ ಹಂದೆ

ಈ ಪ್ರಶಸ್ತಿ ನನ್ನ ಮೇಲಿನ ಜವಾಬ್ದಾರಿಯನ್ನು ಇನ್ನೂ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ನವೀಕರಿಸಬಹುದಾದ ಇಂಧನದ ಮೂಲಕ ಬಡತನದ ನಿವಾರಣೆ ಸಾಧ್ಯ ಎಂಬುದನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ನಾವು ಕೆಲಸ ಮಾಡಲು ಬದ್ಧರಾಗಿದ್ದೇವೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುವುದು ಮತ್ತು ಅವರ ಬದುಕಿನ ಸುಧಾರಣೆ ಮಾಡುವತ್ತ ನಮ್ಮ ಕಾರ್ಯಗಳು ಇನ್ನೂ ತ್ವರಿತಗತಿಯಲ್ಲಿ ನಡೆಯಲು ಇವೆಲ್ಲ ಸಹಕಾರಿಯಾಗಬಲ್ಲುದು ಎಂದು ಈ ಪ್ರಶಸ್ತಿಯ ಕುರಿತು ಡಾ.ಹರೀಶ್ ಹಂದೆಯವರು ಹೇಳಿದರು.

ಸ್ಕೋಲ್ ಕುರಿತು

ಸ್ಕೋಲ್ ಫೌಂಡೇಶನ್‌ನ್ನು 1999ರಲ್ಲಿ ಜೆಫ್ ಸ್ಕೋಲ್ ಎಂಬುವರು ಸ್ಥಾಪಿಸಿದ್ದು, ಇವರು ಮೊದಲು ಇಬೇ ಉದ್ಯಮ ಸಂಸ್ಥೆಯ ಮೊದಲ ಅಧ್ಯಕ್ಷರಾಗಿದ್ದು, ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿದವರು. ನಂತರ ಸ್ಕೋಲ್ ಸಂಸ್ಥೆಯನ್ನು ಸ್ಥಾಪಿಸಿ, ವಿಶ್ವದ ಪ್ರಚಲಿತ ಸಮಸ್ಯೆಗಳಿಗೆ ಹೊಸ ಮಾದರಿಯ ಪರಿಹಾರಗಳನ್ನು ಕಂಡುಹಿಡಿದ ಸಾಮಾಜಿಕ ಉದ್ಯಮಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಈ ಸಂಸ್ಥೆ ಶ್ರಮಿಸುತ್ತದೆ.

1999ರಿಂದಲೂ ಸ್ಕೋಲ್ ಫೌಂಡೇಶನ್ ವಿಶಾದ್ಯಂತ ಅಂದಾಜು 400 ಮಿಲಿಯನ್ ಡಾಲರ್ ಹಣವನ್ನು ಹೂಡಿದ್ದು, ಇದರಲ್ಲಿ 5 ಖಂಡಗಳಲ್ಲಿ 100 ಸಂಸ್ಥೆಗಳು, 122 ಸಾಮಾಜಿಕ ಉದ್ಯಮಿಗಳು ಸೇರಿ ವಿಶ್ವಾದ್ಯಂತ ಇರುವ ಸಾಮಾಜಿಕ ಉದ್ಯಮಿಗಳಿಗೆ ಮತ್ತು ಅದರ ಸಹಭಾಗಿದಾರರಿಗೆ, ನಿರಂತರವಾಗಿ ಬೆಂಬಲ ನೀಡುವ ಸಲುವಾಗಿ ಈ ಪ್ರಶಸ್ತಿಯನ್ನು ನೀಡುತ್ತ ಬಂದಿದೆ.

SELCO founded by Harish Hande wins Skoll Award

ಸ್ಕೋಲ್ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಜೋಯ್ ಮಡಿಯಾತ್ (ಗ್ರಾಮ್ ವಿಕಾಸ್), ಗೋಪಿ ಗೋಪಾಲಕೃಷ್ಣನ್ (ವಿಶ್ವ ಆರೋಗ್ಯ ಸಂಸ್ಥೆಯ ಪಾಲುದಾರರು), ಜಾಕಿನ್ ಆರ್ಪುಥಮ್ (ಸ್ಲಮ್ ಡ್ವೆಲ್ಲರ್ಸ್ ಇಂಟರ್‌ನ್ಯಾಷನಲ್) ಮಲ್ಲಿಕಾದತ್ ಮತ್ತು ಸೊನಾಲಿ ಖಾನ್ (ಬ್ರೇಕ್‌ಥ್ರೂ), ಜಗದೀಶ್ ರಾವ್ ಪಪ್ಪಲಾ (ಇಕಲಾಜಿಕಲ್ ಸೆಕ್ಯುರಿಟಿ ಫೌಂಡೇಶನ್), ಅರವಿಂದ್ ಸಿಂಗ್ (ನಿದಾನ್), ಅಮಿತಾಬ್ ಸದಾಂಗಿ (ಇಂಟರ್‌ನ್ಯಾಷನಲ್ ಡೆವೆಲಪ್‌ಮೆಂಟ್ ಎಂಟರ್‌ಪ್ರೈಸಸ್), ಅನ್‌ಕಾಟನ್ (ಕ್ಯಾಂಪ್‌ಫೆಡ್) ಮತ್ತು ಆಂಡ್ರೂಯೂನ್ (ಒನ್‌ಎಕ್ರೆ ಫಂಡ್).

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Skoll Foundation has awarded its prestigious annual Skoll Award for Social Entrepreneurship for the year 2018 to SELCO founded by Harish Hande for revolutionizing the concept of bringing sustainable energy solutions to the poor.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more