ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುತೂಹಲ ಕೆರಳಿಸಿದ ಎರಡನೇ ದಿನದ 5ನೇ ಸುತ್ತಿನ 5ಜಿ ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆ

|
Google Oneindia Kannada News

ನವದೆಹಲಿ, ಜುಲೈ 27: ಭಾರತದಲ್ಲಿ ನಡೆಯುತ್ತಿರುವ 5ಜಿ ಸ್ಪೆಕ್ಟ್ರಮ್ ಸಂಬಂಧಿಸಿದಂತೆ ಹರಾಜಿನ ಮೊದಲ ದಿನದ ಬಿಡ್‌ಗಳು ಎಲ್ಲಾ ನಿರೀಕ್ಷೆಗಳನ್ನು ಮೀರಿದ್ದು, 2015ರ ದಾಖಲೆಗಳನ್ನು ಹಿಂದಿಕ್ಕಿದೆ. ದೇಶದ ಅತಿದೊಡ್ಡ ಸ್ಪೆಕ್ಟ್ರಮ್ ಹರಾಜಿಗೆ ಐದನೇ ಸುತ್ತಿನ ಬಿಡ್ಡಿಂಗ್ ಬುಧವಾರ ನಡೆಯಲಿದೆ.

ಉದ್ಯಮಿ ಮುಖೇಶ್ ಅಂಬಾನಿ, ಸುನಿಲ್ ಭಾರ್ತಿ ಮಿತ್ತಲ್ ಮತ್ತು ಗೌತಮ್ ಅದಾನಿ ನಡೆಸುತ್ತಿರುವ ಸಂಸ್ಥೆಗಳು ಮಂಗಳವಾರ ಪ್ರಾರಂಭದ ದಿನದಂದು ಐದನೇ ತಲೆಮಾರಿನ (5G) ತರಂಗಾಂತರವನ್ನು ಖರೀದಿಸಲು ಸುಮಾರು 1.45 ಲಕ್ಷ ಕೋಟಿ ರೂಪಾಯಿ ಬಿಡ್ ಮಾಡಿದರು.

ಮೊದಲು ಓದಿ: ಭಾರತದಲ್ಲಿ 5ಜಿ ಸೇವೆಗಳು ಪ್ರಾರಂಭವಾಗೋದು ಯಾವಾಗ?ಮೊದಲು ಓದಿ: ಭಾರತದಲ್ಲಿ 5ಜಿ ಸೇವೆಗಳು ಪ್ರಾರಂಭವಾಗೋದು ಯಾವಾಗ?

ಎಲ್ಲಾ ಹರಾಜಿನಲ್ಲಿ ವಿವಿಧ ಕಡಿಮೆ (600 MHz, 700 MHz, 800 MHz, 900 MHz, 1,800 MHz, 2,100 MHz, 2,300 MHz), ಮಧ್ಯಮ (3,300 MHz) ಮತ್ತು ಹೆಚ್ಚಿನ (26 GHz) ಆವರ್ತನದಲ್ಲಿ ಸ್ಪೆಕ್ಟ್ರಮ್‌ಗಾಗಿ ಹರಾಜು ನಡೆಸಲಾಗುತ್ತಿದೆ. ಕನಿಷ್ಠ 4.3 ಲಕ್ಷ ಕೋಟಿ ಮೌಲ್ಯದ ಒಟ್ಟು 72 GHz (gigahertz) ರೇಡಿಯೋವೇವ್‌ಗಳು ಬಿಡ್ಡಿಂಗ್‌ನಲ್ಲಿವೆ. ಬುಧವಾರವೂ ಹರಾಜು ಪ್ರಕ್ರಿಯೆ ಮುಂದುವರಿಯಲಿದ್ದು, ನಾಳೆಗೆ ಈ ಪ್ರಕ್ರಿಯೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

ಸಕ್ರಿಯವಾಗಿ ಹರಾಜಿನಲ್ಲಿ ಭಾಗವಹಿಸಿದ ಕಂಪನಿಗಳು

ಸಕ್ರಿಯವಾಗಿ ಹರಾಜಿನಲ್ಲಿ ಭಾಗವಹಿಸಿದ ಕಂಪನಿಗಳು

ಅಂಬಾನಿಯ ರಿಲಯನ್ಸ್ ಜಿಯೋ, ಮಿತ್ತಲ್‌ನ ಭಾರ್ತಿ ಏರ್‌ಟೆಲ್, ವೊಡಾಫೋನ್ ಐಡಿಯಾ ಮತ್ತು ಅದಾನಿ ಸಮೂಹ ಸಂಸ್ಥೆಯು 5G ಸ್ಪೆಕ್ಟ್ರಮ್‌ನ ಹರಾಜಿನಲ್ಲಿ ಸಕ್ರಿಯವಾಗಿ ಭಾಗವಹಿಸಿದೆ. ಇದು ಅಲ್ಟ್ರಾ-ಹೈ ಸ್ಪೀಡ್ ಆಗಿದ್ದು, 4ಜಿಗೆ ಹೋಲಿಸಿದರೆ ಅದಕ್ಕಿಂತ 10ಪಟ್ಟು ಹೆಚ್ಚು ವೇಗವನ್ನು ಹೊಂದಿರುತ್ತದೆ. ಇದು ಲ್ಯಾಗ್-ಫ್ರೀ ಸಂಪರ್ಕವನ್ನು ನೀಡುತ್ತದೆ. ಇದರಿಂದ ನೈಜ ಸಮಯದಲ್ಲಿ ಡೇಟಾವನ್ನು ಹಂಚಿಕೊಳ್ಳಲು ಶತಕೋಟಿ ಸಂಪರ್ಕಿತ ಸಾಧನಗಳನ್ನು ಸಕ್ರಿಯಗೊಳಿಸಬಹುದು.

80,000 ಕೋಟಿ ಅಂದಾಜಿಗಿಂತಲೂ ಹೆಚ್ಚಳ

80,000 ಕೋಟಿ ಅಂದಾಜಿಗಿಂತಲೂ ಹೆಚ್ಚಳ

5ಜಿ ಸ್ಪೆಕ್ಟ್ರಮ್ ಹರಾಜಿನಲ್ಲಿ ಮೊದಲ ದಿನ ಕಂಡುಬಂದ ಬೇಡಿಕೆಯು ಸರ್ಕಾರದ ಆಂತರಿಕ ಅಂದಾಜಿನ 80,000 ಕೋಟಿಗಿಂತ ಶೇ.80ರಷ್ಟು ಹೆಚ್ಚಳವಾಗಿದೆ. ಈ ಪ್ರತಿಕ್ರಿಯೆ "ನಮ್ಮ ನಿರೀಕ್ಷೆಗಳನ್ನು ಮೀರಿದೆ" ಎಂಬುದನ್ನು ಸಚಿವರೇ ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಭಾಗವಹಿಸುವಿಕೆಯ ಮಟ್ಟವನ್ನು ಅನುಸರಿಸಿದರೆ, ಹರಾಜುಗಳು ಬಜೆಟ್ ನಿಬಂಧನೆಗಳನ್ನು ಮೀರಿಸುತ್ತದೆ ಎಂದು ಅವರು ಹೇಳಿದ್ದಾರೆ.

2015ರ ಎಲ್ಲಾ ದಾಖಲೆಗಳೂ ಉಡೀಸ್

2015ರ ಎಲ್ಲಾ ದಾಖಲೆಗಳೂ ಉಡೀಸ್

5ಜಿ ಸ್ಪೆಕ್ಟ್ರಮ್ ಹರಾಜಿನ ಮೊದಲ ದಿನದ ಹರಾಜು ಪ್ರಕ್ರಿಯೆಗೆ ಸಂಬಂಧಿಸಿದಂತೆ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯೆ ನೀಡಿದ್ದಾರೆ. ಮೊದಲ ದಿನದ ಪ್ರತಿಕ್ರಿಯೆ ಎಲ್ಲಾ ನಿರೀಕ್ಷೆಗಳನ್ನು ಮೀರಿದ್ದು, ಈ ಹಿಂದೆ ಹರಾಜಿನಿಂದ 1.09 ಲಕ್ಷ ಕೋಟಿ ಆದಾಯ ಸಂಗ್ರಹವಾದ 2015ರ ದಾಖಲೆಗಳನ್ನು ಮೀರಿಸುತ್ತದೆ. 2016 ಮತ್ತು 2021ರ ಹರಾಜಿನಲ್ಲಿ ಯಾವುದೇ ಟೇಕರ್‌ಗಳನ್ನು ನೋಡದ 700 MHz ಬ್ಯಾಂಡ್ ಕೂಡ ಈ ಬಾರಿ ಬಿಡ್‌ಗಳನ್ನು ಸ್ವೀಕರಿಸಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

5ಜಿ ಹರಾಜು ಗೆಲ್ಲುವುದಕ್ಕೆ ಉದ್ಯಮಿಗಳ ಪೈಪೋಟಿ

5ಜಿ ಹರಾಜು ಗೆಲ್ಲುವುದಕ್ಕೆ ಉದ್ಯಮಿಗಳ ಪೈಪೋಟಿ

ನವದೆಹಲಿಯಲ್ಲಿ ನಡೆಯುತ್ತಿರುವ 5ಜಿ ಹರಾಜು ಪ್ರಕ್ರಿಯೆಯಲ್ಲಿ 1.1 ಟ್ರಿಲಿಯನ್ (14 ಶತಕೋಟಿ ಡಾಲರ್) ಮೂಲಕ ಹಕ್ಕು ಪಡೆದುಕೊಳ್ಳಲು ಮುಖೇಶ್ ಅಂಬಾನಿಯ ರಿಲಾಯನ್ಸ್ ಸಂಸ್ಥೆ ಕಚ್ಚೆಕಟ್ಟಿಕೊಂಡು ನಿಂತಿದೆ. ಜುಲೈ 18ರಂದು ಟೆಲಿಕಾಂ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, ಅದಕ್ಕಾಗಿಯೇ ರಿಲಯನ್ಸ್ ಜಿಯೋ 14,000 ಕೋಟಿ ರೂಪಾಯಿಗಳ ಇಎಮ್‌ಡಿಯನ್ನು ಸಲ್ಲಿಸಿದೆ. ಆದರೆ ಅಂಬಾನಿ ಜೊತೆಗೆ ಪೈಪೋಟಿಗೆ ಇಳಿದಿರುವ ಅದಾನಿ ಸಂಸ್ಥೆಯು 100 ಕೋಟಿ ರೂಪಾಯಿಗಳಷ್ಟು ಇಎಮ್‌ಡಿಯನ್ನು ಸಲ್ಲಿಸಿದೆ.

ಆನ್‌ಲೈನ್‌ನಲ್ಲಿ ಪ್ರಾರಂಭವಾಗಿರುವ 5G ಸ್ಪೆಕ್ಟ್ರಮ್ ಹರಾಜು ಪ್ರಕ್ರಿಯೆಯಲ್ಲಿ ರಿಲಾಯನ್ಸ್ ಜಿಯೋ, ಅದಾನಿ ಗ್ರೂಪ್, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಕಂಪನಿಗಳು ಪ್ರಮುಖ ಬಿಡ್ ದಾರರಾಗಿ ಭಾಗವಹಿಸಿವೆ. ಆದರೆ ಈ ನಾಲ್ಕು ಕಂಪನಿಗಳ ಪೈಕಿ ಅಂಬಾನಿಯ ರಿಲಾಯನ್ಸ್ ಕಂಪನಿಯು ಅತಿಹೆಚ್ಚು ಇಎಮ್‌ಡಿಯನ್ನು ಸಲ್ಲಿಸಿರುವುದು ಗೊತ್ತಾಗಿದೆ.

English summary
Second Day 5G Spectrum Auction: Bidding for Fifth Round to Begin Today; Jio, Airtel, Adani Pour Rs 1.45 Lakh Cr Bids on First Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X