ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂಡೆನ್‌ಬರ್ಗ್ ವರದಿ: ಅದಾನಿ ಮೇಲೆ ತೂಗುಕತ್ತಿ, ಅವ್ಯವಹಾರಗಳ ತನಿಖೆಗೆ ಹೆಚ್ಚಿದ ಒತ್ತಡ, SEBI ಪರಿಶೀಲನೆ- ಮಾಹಿತಿ, ವಿವರ

ಮಾರುಕಟ್ಟೆ ನಿಯಂತ್ರಕ ಸೆಬಿ ಕಳೆದ ವರ್ಷದಲ್ಲಿ ಅದಾನಿ ಗ್ರೂಪ್‌ನ ವ್ಯವಹಾರಗಳ ಪರಿಶೀಲನೆಯನ್ನು ಹೆಚ್ಚಿಸಿದೆ. ಗೌತಮ್‌ ಅದಾನಿ ವಿರುದ್ಧ ಕೇಳಿಬಂದಿರುವ ಆರೋಪಗಳೇನು? ಇಲ್ಲಿದೆ ವರದಿ

|
Google Oneindia Kannada News

ಮುಂಬೈ, ಜನವರಿ 27: ಮಾರುಕಟ್ಟೆ ನಿಯಂತ್ರಕ ಸೆಬಿ ಕಳೆದ ವರ್ಷದಲ್ಲಿ ಅದಾನಿ ಗ್ರೂಪ್‌ನ ವ್ಯವಹಾರಗಳ ಪರಿಶೀಲನೆಯನ್ನು ಹೆಚ್ಚಿಸಿದೆ. ಅದಾನಿ ಗ್ರೂಪ್‌ನ ವಿದೇಶಿ ಬಂಡವಾಳ ಹೂಡಿಕೆದಾರರ ಬಗ್ಗೆ ತನ್ನದೇ ಆದ ಪ್ರಾಥಮಿಕ ತನಿಖೆಯನ್ನು ಸೆಬಿ ನಡೆಸುತ್ತಿದೆ. ಹಿಂಡೆನ್‌ಬರ್ಗ್ ರಿಸರ್ಚ್ ನೀಡಿದ ವರದಿಯನ್ನು ಅಧ್ಯಯನ ಮಾಡುತ್ತಿದೆ ಎಂದು ಎರಡು ಮೂಲಗಳು ತಿಳಿಸಿವೆ. ಈ ಬಗ್ಗೆ ಸುದ್ದಿಸಂಸ್ಥೆ ರಾಯಟರ್ಸ್‌ ವರದಿ ಮಾಡಿದೆ. ಅದಾನಿ ಗ್ರೂಪ್‌ನ ಕಡಲಾಚೆಯ ತೆರಿಗೆ ವ್ಯವಸ್ಥೆಯ ಅಸಮರ್ಪಕ ಬಳಕೆ ಮತ್ತು ಹೆಚ್ಚಿನ ಸಾಲದ ಬಗ್ಗೆ ಸೆಬಿ ಕಳವಳ ವ್ಯಕ್ತಪಡಿಸಿದೆ.

'ಅದಾನಿ ಗ್ರೂಪ್ ನಡೆಸುತ್ತಿರುವ ಎಲ್ಲಾ ವಹಿವಾಟುಗಳನ್ನು ಸೆಬಿಯು ಪರಿಶೀಲಿಸುತ್ತಿದೆ. ಈ ವಿಷಯವು ಗೌಪ್ಯವಾಗಿದೆ' ಎಂದು ತಿಳಿದುಬಂದಿದೆ.

Hindenburg report on Adani: ಅದಾನಿ ವಿರುದ್ಧ ಸೆಬಿ ತನಿಖೆಗೆ ಕಾಂಗ್ರೆಸ್‌ ಒತ್ತಾಯ Hindenburg report on Adani: ಅದಾನಿ ವಿರುದ್ಧ ಸೆಬಿ ತನಿಖೆಗೆ ಕಾಂಗ್ರೆಸ್‌ ಒತ್ತಾಯ

ಕಳುಹಿಸಲಾದ ಇಮೇಲ್ ಪ್ರಶ್ನೆಗಳು ಮತ್ತು ಫೋನ್ ಕರೆಗಳಿಗೆ ಅದಾನಿ ಗ್ರೂಪ್‌ ಉತ್ತರಿಸಿಲ್ಲ ಎಂದು ಸೆಬಿ ಆರೋಪಿಸಿದೆ.

SEBI increases scrutiny of Adani Group after Hindenburg report

ಅದಾನಿ ಈ ವಾರದ ಆರಂಭದಲ್ಲಿ ಹಿಂಡೆನ್‌ಬರ್ಗ್ ವರದಿಯನ್ನು ಆಧಾರರಹಿತ ಎಂದು ತಳ್ಳಿಹಾಕಿದ್ದಾರೆ. ನ್ಯೂಯಾರ್ಕ್ ಮೂಲದ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೇ ಎಂಬುದನ್ನು ಪರಿಗಣಿಸುವುದಾಗಿ ಅದಾನಿ ಹೇಳಿದ್ದಾರೆ.

ಕಂಪನಿಯ ನಿರ್ದಿಷ್ಟ ವಿಷಯಗಳು ಮತ್ತು ನಡೆಯುತ್ತಿರುವ ತನಿಖೆಗಳ ಬಗ್ಗೆ ಮಾಧ್ಯಮಗಳೊಂದಿಗೆ ಚರ್ಚಿಸುವುದಿಲ್ಲ ಎಂದು SEBI ವಕ್ತಾರರು ತಿಳಿಸಿದ್ದಾರೆ.

ಅಂಬುಜಾ ಸಿಮೆಂಟ್ಸ್ ಲಿಮಿಟೆಡ್ ಮತ್ತು ಎಸಿಸಿ ಲಿಮಿಟೆಡ್‌ನಲ್ಲಿ ಸ್ವಿಟ್ಜರ್ಲೆಂಡ್ ಮೂಲದ ಹೋಲ್ಸಿಮ್ ಲಿಮಿಟೆಡ್‌ನ ಪಾಲನ್ನು ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಂಡತ್ತು. ಆ ಸಂದರ್ಭದಲ್ಲಿ, ನಿಯಂತ್ರಕರು ವಹಿವಾಟಿಗೆ ಬಳಸಿದ ಕಡಲಾಚೆಯ ವಿಶೇಷ ಉದ್ದೇಶದ ಎಸ್‌ಪಿವಿಯನ್ನು ಪರಿಶೀಲಿಸಿಲಿಸಲಾಗಿದೆ ಎಂದು ಸೆಬಿ ಹೇಳಿದೆ.

SEBI increases scrutiny of Adani Group after Hindenburg report

ಈ SPV ಯ ಬಳಕೆಯನ್ನು ಮೇ 2022 ರಲ್ಲಿ ಸ್ವಾಧೀನಪಡಿಸಿಕೊಳ್ಳುವ ಘೋಷಣೆಯ ಭಾಗವಾಗಿ ಅದಾನಿ ಗ್ರೂಪ್‌ ಬಹಿರಂಗಪಡಿಸಿದೆ. ವಹಿವಾಟಿನ ಧನಸಹಾಯದಲ್ಲಿ ಒಳಗೊಂಡಿರುವ 17 ವಿದೇಶಿ ಕಡಲಾಚೆಯ ಘಟಕಗಳನ್ನು ಸೆಬಿ ಕಂಡುಹಿಡಿದಿದೆ.

ಕಳೆದ ವರ್ಷ ಕ್ಲಿಯರೆನ್ಸ್‌ಗಾಗಿ ಅದಾನಿ ಗ್ರೂಪ್‌ ಸಂಪರ್ಕಿಸಿದಾಗ ಈ ಘಟಕಗಳ ಬಗ್ಗೆ ಸ್ಪಷ್ಟತೆ ಕೇಳಲಾಗಿತ್ತು. ಈ ಪ್ರತಿಕ್ರಿಯೆಗಳು ಪರೀಕ್ಷೆಯಲ್ಲಿವೆ ಎಂದು ಸೆಬಿ ತಿಳಿಸಿದೆ.

SEBI increases scrutiny of Adani Group after Hindenburg report

ಅದಾನಿ ಗ್ರೂಪ್‌ ಕುರಿತು ಹಿಂಡೆನ್‌ಬರ್ಗ್‌ನ ವರದಿಯು ಗ್ರೂಪ್‌ನ ಪ್ರಮುಖ ಕಂಪನಿಯಾದ ಅದಾನಿ ಎಂಟರ್‌ಪ್ರೈಸಸ್‌ನಿಂದ $2.45 ಶತಕೋಟಿ ದ್ವಿತೀಯ ಷೇರು ಮಾರಾಟದ ನಡುವೆ ಬಂದಿದೆ. ಶುಕ್ರವಾರ, ಅದಾನಿ ಎಂಟರ್‌ಪ್ರೈಸಸ್‌ನ ಷೇರುಗಳು ನೀಡಲಾಗುತ್ತಿರುವ ಬೆಲೆಗಿಂತ ಕಡಿಮೆಯಾಗಿದೆ.

English summary
Markets regulator Sebi has stepped up scrutiny of the Adani Group's dealings over the past year,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X