ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಯೂಚರ್- ರಿಲಯನ್ಸ್ ವ್ಯವಹಾರವನ್ನು ಸೆಬಿ ತಡೆಯುವಂತಿಲ್ಲ: ಹೈ ಕೋರ್ಟ್

|
Google Oneindia Kannada News

ನವದೆಹಲಿ, ಡಿ. 21: ಕಂಪೆನಿ ಕಾಯ್ದೆಯ ಕಾನೂನು ನಿಯಮಗಳು ಮತ್ತು ಸೆಬಿ ನಿಬಂಧನೆಗಳಿಗೆ ಎಲ್ಲಿಯ ತನಕ ಫ್ಯೂಚರ್ ರೀಟೇಲ್ ಲಿಮಿಟೆಡ್ (FRL) ಸಲ್ಲಿಸಿದ ಯೋಜನೆ (ಸ್ಕೀಮ್) ಒಳಪಟ್ಟಿರುತ್ತದೋ ಅದನ್ನು ಸೆಬಿ ಮಂಜೂರು ಮಾಡಲೇಬೇಕು. ಅಮೆಜಾನ್ ಸಲ್ಲಿಸಿರುವ ಆಕ್ಷೇಪವು ಸೆಬಿಯನ್ನು ಸ್ಕೀಮ್‌ಗೆ ಮಂಜೂರು ಮಾಡುವುದರಿಂದ ತಡೆಯುವುದಕ್ಕೆ ಸಾಧ್ಯವಿಲ್ಲ ಎಂದು ದೆಹಲಿ ಹೈಕೋರ್ಟ್ ಆದೇಶದಲ್ಲಿ ಸೋಮವಾರ ತಿಳಿಸಿದೆ.

ಎಫ್ ಆರ್ ಎಲ್ ಮಂಡಳಿಯು ನಿರ್ಣಯ ತೆಗೆದುಕೊಂಡು, ಸ್ಕೀಮ್‌ಗೆ ಒಪ್ಪಿಕೊಂಡಿದೆ ಮತ್ತು ರಿಲಯನ್ಸ್ ಗೆ ವ್ಯವಹಾರ ಮಾರಾಟ ಮಾಡುವುದು ನ್ಯಾಯಬದ್ಧವಾಗಿದೆ ಮತ್ತು ಕಾನೂನು ನಿಯಮಾವಳಿಗೆ ಅನುಸಾರವಾಗಿದೆ- ಅಮೆಜಾನ್ ವಾದಿಸುತ್ತಿರುವಂತೆ ಕಾನೂನಿಗೆ ವಿರುದ್ಧವಾಗಿಲ್ಲ.

ಫ್ಯೂಚರ್ ಜೊತೆ ಡೀಲ್, ಮಧ್ಯಂತರ ಆದೇಶದ ಬಗ್ಗೆ RIL ಪ್ರತಿಕ್ರಿಯೆ

ಅಮೆಜಾಮನ್‌ನಿಂದ ಫೆಮಾ ಮತ್ತು ಎಫ್ ಡಿಐ ನಿಯಮಾವಳಿ ಉಲ್ಲಂಘನೆ ಆಗಿದೆ. ಷೇರುದಾರರ ಒಪ್ಪಂದವನ್ನು ಒಟ್ಟಾಗಿ ನೋಡಿದರೆ, ಎಫ್ ಆರ್ ಎಲ್ ಮೇಲೆ "ಹತೋಟಿ" ಸಾಧಿಸಿರುವುದು ತಿಳಿಯುತ್ತದೆ. ಸರ್ಕಾರದ ಅನುಮತಿ ಇಲ್ಲದೆ ಇದು ಫೆಮಾ ಮತ್ತು ಎಫ್ ಡಿಐ ನಿಯಮಾವಳಿಗೆ ವ್ಯತಿರಿಕ್ತವಾಗಿದೆ.

SEBI has to approve scheme by FRL, Amazon Objection not valid

ಅಮೆಜಾಮನ್‌ನಿಂದ ಎಫ್ ಆರ್ ಎಲ್ ಹಾಗೂ ರಿಲಯನ್ಸ್ ವಿರುದ್ಧ ಸಿವಿಲ್ ತಪ್ಪಾಗಿದೆ. ಒಂದು ವೇಳೆ ಇದರಿಂದ ನಷ್ಟ ಏರ್ಪಟ್ಟಲ್ಲಿ ಆ ಎರಡೂ ಕಂಪೆನಿಗಳು ಅಮೆಜಾನ್ ವಿರುದ್ಧ ಕ್ರಮ ತೆಗೆದುಕೊಳ್ಳಬಹುದು. ಕಾನೂನು ಪ್ರಾಧಿಕಾರಗಳು- ಸೆಬಿಗೆ ಅರ್ಜಿ/ ಆಕ್ಷೇಪಣೆಗೆ ಕಾನೂನು ಅನ್ವಯ ತೀರ್ಮಾನ ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ.

RRVL ಮತ್ತು ಫ್ಯೂಚರ್ ಗ್ರೂಪ್ ನಡುವಿನ ಒಪ್ಪಂದಕ್ಕೆ ಸಿಸಿಐ ಅನುಮೋದನೆ: ಅಮೆಜಾನ್‌ಗೆ ಹಿನ್ನಡೆRRVL ಮತ್ತು ಫ್ಯೂಚರ್ ಗ್ರೂಪ್ ನಡುವಿನ ಒಪ್ಪಂದಕ್ಕೆ ಸಿಸಿಐ ಅನುಮೋದನೆ: ಅಮೆಜಾನ್‌ಗೆ ಹಿನ್ನಡೆ

ಈ ಮೇಲ್ಕಂಡ ಆದೇಶವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಫ್ಯೂಚರ್ಸ್ ರೀಟೇಲ್ ಲಿಮಿಟೆಡ್ ನಿಂದ ಕಾನೂನು ನಿಯಮಗಳು ಹಾಗೂ ಕಂಪೆನಿ ಕಾಯ್ದೆ ಅನುಸಾರದಂತೆ ಸಲ್ಲಿಸಿರುವ ಯೋಜನೆಗೆ ಸೆಬಿ ಮಂಜೂರಾತಿ ಮಾಡಬೇಕಿದೆ. ಈ ಯೋಜನೆಗೆ ಅನುಮತಿ ನೀಡುವುದಕ್ಕೆ ಇನ್ನು ಮುಂದೆ ಅಮೆಜಾನ್ ಆಕ್ಷೇಪಣೆ ಪ್ರಸ್ತುತ ಅಲ್ಲ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

English summary
Sebi has to approve the scheme submitted by Future Retail Limited (FRL) so long as the scheme is in compliance with statutory provisions of Companies act and other Sebi regulations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X