ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SBI, LIC, ಬರೋಡಾ ಬ್ಯಾಂಕ್ ಮೇಲೆ ದಂಡ ವಿಧಿಸಿದ ಸೆಬಿ

|
Google Oneindia Kannada News

ನವದೆಹಲಿ, ಆಗಸ್ಟ್‌ 15: ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ), ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಹಾಗೂ ಬ್ಯಾಂಕ್ ಆಫ್ ಬರೋಡಾ ಮೇಲೆ ಷೇರು ಪೇಟೆ ನಿಯಂತ್ರಕ(ಸೆಬಿ) ತಲಾ 10 ಲಕ್ಷ ದಂಡ ವಿಧಿಸಿದೆ.

ಷೇರು ಪೇಟೆ ನಿಯಮಗಳನ್ನು ಪಾಲಿಸದೆ, ತಮ್ಮ ಪಾಲನ್ನು ಕಡಿಮೆ ಮಾಡದ ವಿಫಲವಾದ ಕಾರಣ ಎಲ್‌ಐಸಿ, ಎಸ್‌ಬಿಐ ಹಾಗೂ ಬರೋಡಾಗೆ ಈ ದಂಡ ವಿಧಿಸಲಾಗಿದೆ. ಎಮ್ಎಫ್ ರೆಗ್ಯುಲೇಷನ್ಸ್‌ನ ರೆಗ್ಯುಲೇಶನ್ 7 ಬಿ ಅನ್ನು ಪಾಲಿಸದಿದ್ದಕ್ಕಾಗಿ ನಿಯಂತ್ರಕವು ಮೂರು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ವಿರುದ್ಧ ಪ್ರತ್ಯೇಕ ಆದೇಶಗಳನ್ನು ನೀಡಿತು. ಈ ನಿಯಮಾವಳಿಯಡಿಯಲ್ಲಿ, ಯಾವುದೇ ಮ್ಯೂಚುವಲ್ ಫಂಡ್ ಅಥವಾ ಟ್ರಸ್ಟಿ ಸಂಸ್ಥೆಯ ಶೇಕಡಾ 10 ಕ್ಕಿಂತ ಹೆಚ್ಚು ಹಣವನ್ನು ಹೊಂದಲು ಎಮ್ಎಫ್‌ನ ಯಾವುದೇ ಪ್ರಾಯೋಜಕರಿಗೆ ಅವಕಾಶವಿಲ್ಲ.

ಎಸ್‌ಬಿಐ ತ್ರೈಮಾಸಿಕ ಲಾಭ ಶೇ. 81ರಷ್ಟು ಏರಿಕೆ: 4,189.4 ಕೋಟಿ ದಾಖಲುಎಸ್‌ಬಿಐ ತ್ರೈಮಾಸಿಕ ಲಾಭ ಶೇ. 81ರಷ್ಟು ಏರಿಕೆ: 4,189.4 ಕೋಟಿ ದಾಖಲು

ಇವು ಈ ಮ್ಯೂಚುವಲ್ ಫಂಡ್ ಕಂಪನಿಗಳಲ್ಲಿ ಶೇಕಡಾ 10ರಷ್ಟಕ್ಕಿಂತ ಹೆಚ್ಚಿನ ಪಾಲನ್ನು ಹೊಂದಿವೆ.

Sebi Fines SBI, LIC BOB For Cutting Stake In UTI MF Below 10 Percent

ಯುಟಿಐ ಎಂಎಫ್‌ನ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಸೆಪ್ಟೆಂಬರ್ ಮೊದಲ ವಾರದಲ್ಲಿ ತೆರೆಯಲಿದೆ ಎಂದು ಮೂರು ಸಂಸ್ಥೆಗಳು ಸೆಬಿಗೆ ತಿಳಿಸಿವೆ. ಐಪಿಒ ಮೂಲಕ, ಮೂರು ಕಂಪನಿಗಳು ತಮ್ಮ ಹೆಚ್ಚುವರಿ ಹಿಡುವಳಿಗಳನ್ನು ಬಿಟ್ಟುಬಿಡುತ್ತವೆ.

English summary
The Securities and Exchange Board of India (Sebi) on Friday imposed a penalty of Rs 10 lakh each on LIC, SBI and BoB for failing to reduce their stake in UTI Mutual Fund (MF) below 10 per cent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X