ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಬ್ರೊತೊ ರಾಯ್ 62,600 ಕೋಟಿ ಠೇವಣಿ ಇಡುವಂತೆ ಸುಪ್ರೀಂ ಕೋರ್ಟ್‌ಗೆ ಸೆಬಿ ಅರ್ಜಿ

|
Google Oneindia Kannada News

ನವದೆಹಲಿ, ನವೆಂಬರ್ 20: ಕೋಟ್ಯಾಂತರ ರೂಪಾಯಿಗಳನ್ನು ಠೇವಣಿ ಇಡದೇ ದಿನದೂಡುತ್ತಿರುವ ಸಹಾರಾ ವಿರುದ್ಧ ಸೆಬಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸಹಾರಾ ಸಂಘಟನೆಯ ಮುಖ್ಯಸ್ಥ ಸುಬ್ರೊತೊ ರಾಯ್ ಮತ್ತು ಅವರ ಎರಡು ಕಂಪೆನಿಗಳು 62,600 ಕೋಟಿ ರೂ. (8.4 ಬಿಲಿಯನ್ ಡಾಲರ್) ಠೇವಣಿ ಇಡಲು ನಿರ್ದೇಶಿಸುವಂತೆ ತಿಳಿಸಿದೆ.

ರಾಯಿಟರ್ಸ್ ನೋಡಿದ ಅರ್ಜಿದಾರರ ಪ್ರತಿ ಪ್ರಕಾರ, 2012 ಮತ್ತು 2015 ರ ನ್ಯಾಯಾಲಯದ ಆದೇಶಗಳ ಪ್ರಕಾರ ಹೂಡಿಕೆದಾರರಿಂದ ಸಂಗ್ರಹಿಸಿದ ಸಂಪೂರ್ಣ ಮೊತ್ತವನ್ನು ಶೇ. 15ರಷ್ಟು ವಾರ್ಷಿಕ ಬಡ್ಡಿಯೊಂದಿಗೆ ಠೇವಣಿ ಇಡಲು ಸಹಾರಾ ವಿಫಲವಾಗಿದೆ ಎಂದು ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಸುಪ್ರೀಂ ಕೋರ್ಟ್‌ಗೆ ಬುಧವಾರ ತಿಳಿಸಿದೆ.

ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಪ್ರಾಯೋಜಕರಾಗಿದ್ದ ಸಹಾರಾ

ಒಂದು ಕಾಲದಲ್ಲಿ ಟೀಮ್ ಇಂಡಿಯಾದ ಪ್ರಾಯೋಜಕರಾಗಿದ್ದ ಸಹಾರಾ

ಹೌದು ಒಂದು ಕಾಲದಲ್ಲಿ ಸಹಾರಾ ಸಮೂಹ ಟೀಮ್ ಇಂಡಿಯಾ ಕ್ರಿಕೆಟ್ ತಂಡದ ಪ್ರಮುಖ ಪ್ರಾಯೋಜಕರಾಗಿತ್ತು. ಆದರೆ ಸೆಬಿ ಜೊತೆಗಿನ ಸಂಘರ್ಷದಲ್ಲಿ ಸಿಲುಕಿಕೊಂಡಿದ್ದು, ತಮ್ಮ ಹಣವನ್ನು ಬಾಂಡ್ ಯೋಜನೆಯಲ್ಲಿ ಇಟ್ಟ ಹೂಡಿಕೆದಾರರಿಗೆ, ಶತಕೋಟಿ ಡಾಲರ್‌ಗಳನ್ನು ಮರುಪಾವತಿಸುವ ಬಗ್ಗೆ ಕಾನೂನು ಹೋರಾಟ ನಡೆಸುತ್ತಿದೆ.

ಸಹಾರಾ ಸಂಸ್ಥೆ ಟೌನ್ ಶಿಪ್ ಹರಾಜಿಗೆ, 37 ಸಾವಿರ ಕೋಟಿ ರು ನಿಗದಿ!ಸಹಾರಾ ಸಂಸ್ಥೆ ಟೌನ್ ಶಿಪ್ ಹರಾಜಿಗೆ, 37 ಸಾವಿರ ಕೋಟಿ ರು ನಿಗದಿ!

ಸುಬ್ರೊತೊ ರಾಯ್ ಬಂಧನವಾಗಿತ್ತು

ಸುಬ್ರೊತೊ ರಾಯ್ ಬಂಧನವಾಗಿತ್ತು

ಶತಕೋಟಿ ಡಾಲರ್‌ಗಳನ್ನು ಮರುಪಾವತಿಸಲು ವಿಫಲವಾಗಿದ್ದ ಕಾರಣ ಸುಬ್ರೊತೊ ರಾಯ್ ಅವರನ್ನು ಮಾರ್ಚ್ 2014 ರಲ್ಲಿ ಬಂಧಿಸಲಾಯಿತು ಮತ್ತು 2016 ರಿಂದ ಅವರು ಜಾಮೀನಿನಲ್ಲಿದ್ದಾರೆ. ಈಗಲೂ ಅವರು ತಮ್ಮ ಯಾವುದೇ ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ.

ಎಂಟು ವರ್ಷಗಳಿಂದ ಸೆಬಿಗೆ ದೊಡ್ಡ ಹೊಡೆತ

ಎಂಟು ವರ್ಷಗಳಿಂದ ಸೆಬಿಗೆ ದೊಡ್ಡ ಹೊಡೆತ

ಕಳೆದ ಎಂಟು ವರ್ಷಗಳಿಂದ ಸೆಬಿಗೆ ನೀಡಬೇಕಾದ ಹಣವನ್ನು ಸಹಾರಾ ಹಿಂತಿರುಗಿಸದೇ ಇರುವುದು ಸೆಬಿಗೆ ದೊಡ್ಡ ಅನಾನುಕೂಲತೆಯನ್ನು ಸೃಷ್ಟಿಸಿದೆ. ಈ ಮೊತ್ತವನ್ನು ಸಹಾರಾ ಠೇವಣಿ ಮಾಡಲು ವಿಫಲಗೊಂಡರೆ, ಇದಕ್ಕೆ ಸಂಬಂಧಪಟ್ಟವರನ್ನು ವಶಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದೆ.

ಷೇರು ಹೂಡಿಕೆದಾರ ರಾಕೇಶ್ ಝುಂಝುನ್ ವಾಲಾ ಮೇಲೆ 'ಸೆಬಿ' ಕಣ್ಣುಷೇರು ಹೂಡಿಕೆದಾರ ರಾಕೇಶ್ ಝುಂಝುನ್ ವಾಲಾ ಮೇಲೆ 'ಸೆಬಿ' ಕಣ್ಣು

ಇದರ ಜೊತೆಗೆ ಕೋರ್ಟ್‌ನ ಆದೇಶ ಮತ್ತು ನಿರ್ದೇಶನಗಳನ್ನು ಅನುಸರಿಸುವ ಯಾವುದೇ ಪ್ರಯತ್ನಗಳನ್ನು ಸಹಾರಾ ಸಮೂಹ ಮಾಡಿಲ್ಲ ಎಂದು ಸೆಬಿ ನ್ಯಾಯಾಲಯಕ್ಕೆ ದೂರಿದೆ. ಅಲ್ಲದೆ ಕಾಲನಂತರದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಜನರು ಹೆಚ್ಚುತ್ತಿದ್ದು ಮತ್ತು ಬಂಧನದಿಂದ ಬಿಡುಗಡೆಯಾಗುತ್ತಿದ್ದಾರೆ ಎಂದು ತಿಳಿಸಿದೆ.

ಬಾಕಿ 626 ಶತಕೋಟಿ ರೂಪಾಯಿಗಳಿಗೆ ಏರಿಕೆ

ಬಾಕಿ 626 ಶತಕೋಟಿ ರೂಪಾಯಿಗಳಿಗೆ ಏರಿಕೆ

ಸಹಾರಾ ಈಗಾಗಲೇ ಅಸಲು ಮೊತ್ತದ ಒಂದು ಭಾಗವನ್ನು ಮಾತ್ರ ಠೇವಣಿ ಇಟ್ಟಿದೆ. ಆದರೆ ಬಡ್ಡಿಯೊಂದಿಗೆ ಬಾಕಿಯು 626 ಶತಕೋಟಿ ರೂಪಾಯಿಗಳಿಗೆ ಏರಿದೆ ಎಂದು ಸೆಬಿ ಹೇಳಿದೆ.

ರಾಯಿಟರ್ಸ್‌ನ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಹಾರಾ ವಕ್ತಾರರು, ಕಂಪನಿಯು ಈಗಾಗಲೇ ಸುಮಾರು 220 ಶತಕೋಟಿ ರೂಪಾಯಿಗಳನ್ನು ಸೆಬಿಗೆ ಜಮಾ ಮಾಡಿದೆ ಎಂದು ಹೇಳಿದೆ. ಸಹಾರಾ ಈ ಹಿಂದೆ ನ್ಯಾಯಾಲಯಕ್ಕೆ ಈ ರೀತಿಯಾಗಿ ತಿಳಿಸಿದ್ದು, ಹೂಡಿಕೆದಾರರಿಂದ ಸಂಗ್ರಹಿಸಿದ ಹೆಚ್ಚಿನ ಹಣವನ್ನು ತಾನು ಮರುಪಾವತಿಸಿದ್ದೇನೆ ಮತ್ತು ಸಂಬಂಧಿತ ದಾಖಲೆಗಳನ್ನು ಸೆಬಿಗೆ ಸಲ್ಲಿಸಿದ್ದೇನೆ, ಆದರೆ ಅವುಗಳನ್ನು ಪರಿಶೀಲಿಸುತ್ತಿಲ್ಲ ಎಂದು ಆರೋಪಿಸಿತ್ತು.

ಸೆಬಿ ಸುಮಾರು 150 ಪತ್ರಿಕೆಗಳಲ್ಲಿ ಜಾಹೀರಾತುಗಳ ಮೂಲಕ ಹಕ್ಕುದಾರರನ್ನು ಆಹ್ವಾನಿಸಿತ್ತು. ಆದರೆ ಹೂಡಿಕೆದಾರರಿಗೆ ಕೇವಲ 1 ಬಿಲಿಯನ್ ರೂಪಾಯಿಗಳನ್ನು ಮರುಪಾವತಿಸಿದೆ ಎಂದು ಸಹಾರಾ ವಕ್ತಾರರು ಇಮೇಲ್‌ನಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ಯಾವುದೇ ಹೆಚ್ಚಿನ ಹಕ್ಕುಗಳನ್ನು ಪಡೆಯುವುದಿಲ್ಲ ಎಂದು ಸೆಬಿ ಹೇಳಿದೆ.

English summary
India's market regulator has filed a petition with the Supreme Court asking it to direct embattled Sahara conglomerate chief Subrata Roy and two of his companies to deposit Rs 62,600 crore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X