ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯೂಚುವಲ್ ಫಂಡ್ ಮಾರುಕಟ್ಟೆಯಿಂದ ಸಹಾರಾ ಔಟ್

|
Google Oneindia Kannada News

ಮುಂಬೈ, ಜು. 29: ಷೇರು ಪೇಟೆಯಲ್ಲಿ ಹೊಸ ಬದಲಾವಣೆ ಆರಂಭವಾಗಿದೆ. ಷೇರು ಪೇಟೆ ನಿಯಂತ್ರಣ ಸಂಸ್ಥೆ ನಿಯಂತ್ರಣ ಸಂಸ್ಥೆ ಸೆಬಿ ಮಂಗಳವಾರ ಸಹಾರಾ ಕಂಪನಿಯ ಮ್ಯೂಚ್ಯುಯಲ್ ಫಂಡ್​ನ ಪರವಾನಗಿ ರದ್ದುಮಾಡಿದೆ.

ಈ ಮಹತ್ವದ ತೀರ್ಮಾನ ಮಾರುಕಟ್ಟೆಯ ಮೇಲೆ ಇನ್ನು ಮುಂದೆ ಪರಿಣಾಮ ಬೀರಲಿದೆ. ಸೆಬಿಯೊಂದಿಗೆ ಸಹಾರಾ ಸಂಸ್ಥೆ ಅನೇಕ ತಿಂಗಳುಗಳಿಂದ ಕಾನೂನು ಸಮರ ನಡೆಸುತ್ತಿತ್ತು. ಆದರೆ ಈಗ ಸಹಾರಾ ಮ್ಯೂಚ್ಯುಯಲ್ ಫಂಡ್​ಗಳು ವ್ಯವಹಾರ ಯೋಗ್ಯವಾಗಿಲ್ಲದ ಕಾರಣ ಅವುಗಳ ಮಾರಾಟವನ್ನು ನಿಲ್ಲಿಸಬೇಕು ಎಂದು ಸೆಬಿ ಸ್ಪಷ್ಟ ಸೂಚನೆ ನೀಡಿದೆ.[ಸಹಾರಾ ಅವ್ಯವಹಾರದ ಸಂಪೂರ್ಣ ವಿವರ]

sebi

ತಕ್ಷಣದಿಂದಲೇ ಮ್ಯೂಚ್ಯುವಲ್ ಫಂಡ್​ನಲ್ಲಿ ಸಾರ್ವಜನಿಕ ಹೂಡಿಕೆ ಪಡೆದುಕೊಳ್ಳುವುದನ್ನು ನಿಲ್ಲಿಸಬೇಕು. ಇನ್ನು ಆರು ತಿಂಗಳಲ್ಲಿ ಎಲ್ಲ ಗ್ರಾಹಕರಿಗೂ ತಕ್ಕುದಾದ ಪರಿಹಾರ ಒದಗಿಸಬೇಕು ಎಂದು ಸೆಬಿ ತಿಳಿಸಿದೆ.[ಆನ್ ಲೈನ್ ನಲ್ಲಿ ಮ್ಯೂಚುವಲ್ ಫಂಡ್ ಖಾತೆ ತೆರೆಯೋದು ಹೇಗೆ?]

ಮಾರುಕಟ್ಟೆಯಲ್ಲಿ 134 ಕೋಟಿ ರು. ಗೂ ಅಧಿಕ ಬಂಡವಾಳ ಹೊಂದಿರುವ ಸಹಾರಾ ಕಂಪನಿ 44 ಪ್ರಮುಖ ಕಂಪನಿಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದೆ. ಅಲ್ಲದೇ ನೀಡುತ್ತಿರುವ ಜಾಹೀರಾತುಗಳನ್ನು ಹಿಂಪಡೆದುಕೊಳ್ಳುವಂತೆ ತಿಳಿಸಿದೆ.

ಸೆಬಿಯ ಕಾನೂನುಗಳನ್ನು ಉಲ್ಲಂಘಿಸಿ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿದ ಆರೋಪಕ್ಕೆ ಸಹಾರಾ ಗುರಿಯಾಗಿತ್ತು. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗದಿರುವ ತನ್ನ ಎರಡು ಕಂಪನಿಗಳ ಮೂಲಕ ರೂ. 24,029 ಕೋಟಿ ನಿಯಮ ಉಲ್ಲಂಘಿಸಿ ಸಂಗ್ರಹಿಸಿದ ಆರೋಪ ಹೊತ್ತಿದ್ದ ಸಂಸ್ಥೆ ತನ್ನ ಆಸ್ತಿ ಮಾರಾಟಕ್ಕೂ 2014 ರಲ್ಲಿ ಮುಂದಾಗಿತ್ತು. ಇದೀಗ ಸಂಸ್ಥೆಗೆ ಸೆಬಿ ಮತ್ತೊಂದು ಆಘಾತ ನೀಡಿದೆ.

English summary
Share market regulator Sebi on Tuesday cancelled the registration of Sahara Mutual Fund saying it was no longer 'fit and proper' to carry out this business and ordered transfer of its operations to another fund house. In the latest order, Sebi directed cancellation of Sahara Mutual Fund's certificate of registration on expiry of a six-month period from today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X