ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಯೂಚರ್ ಗ್ರೂಪ್‌ ಸಿಇಒ ಕಿಶೋರ್ ಬಿಯಾನಿಗೆ 1 ವರ್ಷ ನಿಷೇಧ ಹೇರಿದ ಸೆಬಿ

|
Google Oneindia Kannada News

ನವದೆಹಲಿ, ಫೆಬ್ರವರಿ 03: ಫ್ಯೂಚರ್ ಗ್ರೂಪ್ ಸಿಇಒ ಕಿಶೋರ್ ಬಿಯಾನಿ ಅವರಿಗೆ ಸೆಕ್ಯುರಿಟೀಸ್ ಮಾರುಕಟ್ಟೆಯನ್ನು ಪ್ರವೇಶಿಸುವುದನ್ನು 1 ವರ್ಷದ ಅವಧಿಗೆ ಸೆಬಿ ಬುಧವಾರ ನಿಷೇಧಿಸಿದೆ.

ಫ್ಯೂಚರ್ ರಿಟೇಲ್ ಲಿಮಿಟೆಡ್ (ಎಫ್‌ಆರ್‌ಎಲ್) ನ ಸೆಕ್ಯೂರಿಟಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ, ಯಾವುದೇ ರೀತಿಯಲ್ಲಿ, 2 ವರ್ಷಗಳ ಅವಧಿಗೆ ಖರೀದಿಸುವುದು, ಮಾರಾಟ ಮಾಡುವುದು ಅಥವಾ ವ್ಯವಹರಿಸುವುದನ್ನು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನಿರ್ಬಂಧಿಸಿದೆ.

2017 ರಲ್ಲಿ ಎಫ್‌ಆರ್‌ಎಲ್‌ನ ಷೇರುಗಳಲ್ಲಿ ವಹಿವಾಟು ನಡೆಸಲು ಅಪ್ರಸ್ತುತ ಬೆಲೆ ನಿರ್ಧರಿಸಲು, ಸೂಕ್ಷ್ಮ ಮಾಹಿತಿಯನ್ನು ಬಳಸಿದ ತನಿಖೆಗೆ ಸಂಬಂಧಿಸಿದಂತೆ ಸೆಬಿಯಿಂದ ಈ ಆದೇಶ ಬಂದಿದೆ.

 Sebi Bars Kishore Biyani Accessing Securities Market For 1 Year

ಫ್ಯೂಚರ್ ಕಾರ್ಪೊರೇಟ್ ರಿಸೋರ್ಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಅನಿಲ್ ಬಿಯಾನಿಯವರೊಂದಿಗೆ ಕಿಶೋರ್ ಬಿಯಾನಿ ಅವರು 2020 ರ ಏಪ್ರಿಲ್ 20 ರಿಂದ ಇಲ್ಲಿಯವರೆಗೆ ವಾರ್ಷಿಕ ಶೇಕಡಾ 12ರ ದರದಲ್ಲಿ ಬಡ್ಡಿಯೊಂದಿಗೆ 17.78 ಕೋಟಿ ರೂ. ಪಾವತಿ ಮಾಡುವಂತೆ ಸೆಬಿ ಆದೇಶಿಸಿದೆ.

ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಒಡೆತನದ ಆರ್‌ಆರ್‌ವಿಎಲ್‌ ಹಾಗೂ ಫ್ಯೂಚರ್ ಗ್ರೂಪ್ ನಡುವಿನ ಸಾವಿರಾರು ಕೋಟಿ ರೂಪಾಯಿ ಡೀಲ್‌ಗೆ ದೆಹಲಿ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದ್ದು, ಅಂಬಾನಿಗೆ ಭಾರೀ ಹಿನ್ನಡೆಯಾಗಿದೆ.

ಕಿಶೋರ್ ಬಿಯಾನಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಆರ್ಆರ್‌ವಿಎಲ್‌ ಹಾಗೂ ಫ್ಯೂಚರ್ ಗ್ರೂಪ್ ನಡುವಿನ ಡೀಲ್‌ಗೆ ಅಮೆಜಾನ್ ಆಕ್ಷೇಪ ವ್ಯಕ್ತಪಡಿಸಿತ್ತು. ರಿಲಯನ್ಸ್ ಇಂಡಸ್ಟ್ರೀಸ್ ಅಂಗ ಸಂಸ್ಥೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (RRVL) ಫ್ಯೂಚರ್‌ ಗ್ರೂಪ್‌ನ ಬಿಗ್‌ ಬಜಾರ್‌ ಅನ್ನು ಖರೀದಿಗೆ ಸರಾಸರಿ 24,713 ಕೋಟಿ ರುಪಾಯಿ ಒಪ್ಪಂದ ಮಾಡಿಕೊಂಡಿದೆ.

English summary
Market regulator Sebi on Wednesday prohibited Future Group CEO Kishore biyani and his brother from being associated with securities market in any manner for a period of 1 year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X