ಭಾರತಕ್ಕಾಗಿ ಗೂಗಲ್ ಕಂಡಿರುವ ಕನಸುಗಳ ಅನಾವರಣ

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 05: ಗೂಗಲ್ ಸಂಸ್ಥೆ ಸಿಇಒ ಸುಂದರ್ ಪಿಚ್ಚೈ ಅವರು ದೆಹಲಿಯಲ್ಲಿ ಭಾರತಕ್ಕಾಗಿ ಗೂಗಲ್ ಕಂಡಿರುವ ಕನಸುಗಳು ಅನಾವರಣಗೊಳುತ್ತಿದೆ.

ಇಂಟರ್ನೆಟ್, ಆಂಡ್ರಾಯ್ಡ್, ಅತ್ಯಾಧುನಿಕ ಸಾಧನಗಳು, ದೈನಂದಿನ ಬಳಕೆಗೆ ಗೂಗಲ್ ತಂತ್ರಜ್ಞಾನ ಬಳಕೆ, ಆಪರೇಟಿಂಗ್ ಸಿಸ್ಟಮ್ ಹಾಗೂ ಸ್ಥಳೀಯ ಭಾಷೆ ಅಳವಡಿಕೆ ಸೇರಿದಂತೆ ಹತ್ತು ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಲಾಗಿದೆ.

ಗೂಗಲ್ ತೇಝ್ -ಮೊಬೈಲ್ ವ್ಯಾಲೆಟ್ ಏನು? ಎತ್ತ?

ಗ್ರಾಮೀಣ ಭಾಗಗಳಿಗೆ ಇಂಟರ್ನೆಟ್ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಅಗತ್ಯ ತಾಂತ್ರಿಕ ನೆರವನ್ನು ಒದಗಿಸಲು ಗೂಗಲ್ ಸಿದ್ಧವಾಗಿದೆ ಎಂದು ಗೂಗಲ್ ನ ಉತ್ಪನ್ನ ನಿರ್ವಹಣಾ ವಿಭಾಗದ ಉಪಾಧ್ಯಕ್ಷ ಸೀಸರ್ ಸೇನ್ ಗುಪ್ತ ಅವರು ಹೇಳಿದರು.

ಸುಂದರ್ ಪಿಚೈ ಹಂಚಿಕೊಂಡ ಕನಸುಗಳೇನು?

ಗೂಗಲ್ ಫಾರ್ ಇಂಡಿಯಾ ತಾಂತ್ರಿಕ ಮೇಳದ ಉದ್ಘಾಟನಾ ಸಮಾವೇಶ(2015)ದಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಪಾಲ್ಗೊಂಡಿದ್ದರು. ರೈಲ್ವೆ ನಿಲ್ದಾಣಗಳಿಗೆ ಉಚಿತ ವೈಫೈ, ಭಾರತದ ಗ್ರಾಮೀಣ ಭಾಗಗಳಿಗೆ ಅತಿವೇಗದ ಇಂಟರ್ನೆಟ್ ಸೇವೆ, ಸ್ಥಳೀಯ ಭಾಷೆಗಳಿಗೆ ಆದ್ಯತೆ ಮುಂತಾದ ವಿಷಯಗಳ ಬಗ್ಗೆ ತಮ್ಮ ಕನಸನ್ನು ಸುಂದರ್ ಹಂಚಿಕೊಂಡಿದ್ದರು.

ಗೂಗಲ್ ಯೋಜನೆಗಳ ಬಗ್ಗೆ ಹಂಚಿಕೊಳ್ಳಲಿದ್ದಾರೆ

ಗೂಗಲ್ ಯೋಜನೆಗಳ ಬಗ್ಗೆ ಹಂಚಿಕೊಳ್ಳಲಿದ್ದಾರೆ

ಉಪಾಧ್ಯಕ್ಷ ಸೀಸರ್ ಸೇನ್ ಗುಪ್ತ, ಗೂಗಲ್ ಮ್ಯಾಪ್ಸ್ ನ ನಿರ್ದೇಶಕರಾದ ಮರ್ಥಾ ವೆಲ್ಷ್, ಉಪಾಧ್ಯಕ್ಷ ರಂಜನ್ ಆನಂದನ್ ಸೇರಿದಂತೆ ಹಲವಾರು ತಜ್ಞರು ಈ ಕಾರ್ಯಕ್ರಮದಲ್ಲಿ ಗೂಗಲ್ ಯೋಜನೆಗಳ ಬಗ್ಗೆ ಹಂಚಿಕೊಳ್ಳಲಿದ್ದಾರೆ.

ಗೂಗಲ್ ಯೋಜನೆಗಳು: ರಂಜನ್ ಆನಂದನ್

ಗೂಗಲ್ ಯೋಜನೆಗಳು: ರಂಜನ್ ಆನಂದನ್

* ಸುಮಾರು 106 ಮಿಲಿಯನ್ ಭಾರತೀಯರು ಆನ್ ಲೈನ್ ಸುದ್ದಿಗಾಗಿ ಹುಡುಕಾಟ ನಡೆಸುತ್ತಾರೆ.
* ವಾಯ್ಸ್ ಆಧಾರಿತ ಸರ್ಚ್ ಮಾಡುವ ಭಾರತೀಯರ ಸಂಖ್ಯೆ ಶೇ28ರಷ್ಟು ಮಾತ್ರ ಇದೆ.

* ಮಹಿಳಾ ಸಬಲೀಕರಣಕ್ಕಾಗಿ 'ಇಂಟರ್ನೆಟ್ ಸಾಥಿ' ಯೋಜನೆ ಘೋಷಿಸಲಾಗಿದ್ದು, ಭಾರತದಲ್ಲಿ ಇನ್ನೂ ವಿಸ್ತಾರಗೊಳ್ಳಬೇಕಿದೆ.

* ಪ್ರತಿ ತಿಂಗಳು ಸರಿ ಸುಮಾರು 1 ಬಿಲಿಯನ್ ಗೂ ಅಧಿಕ ಮೊಬೈಲ್ ಅಪ್ಲಿಕೇಷನ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಆಗುತ್ತಿದೆ.

ಗೂಗಲ್ ತೇಜ್ ಅಪ್ಲಿಕೇಷನ್

ಗೂಗಲ್ ತೇಜ್ ಅಪ್ಲಿಕೇಷನ್

* ಗೂಗಲ್ ತೇಜ್ ಅಪ್ಲಿಕೇಷನ್ ಈಗ 12 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಸುಮಾರು 140 ಮಿಲಿಯನ್ ವ್ಯವಹಾರಗಳನ್ನು ಕಂಡಿದೆ.
* ಗೂಗಲ್ ತೇಜ್ ಅಪ್ಲಿಕೇಷನ್ ಇನ್ಮುಂದೆ ವ್ಯಾಪಾರಿಗಳಿಗೆ ಪೇಮೆಂಟ್ ಮಾಡುವ ವ್ಯವಸ್ಥೆಯನ್ನು ನೀಡಲಿದೆ.

ಗೂಗಲ್ ಗೋ ಆವೃತ್ತಿ

ಗೂಗಲ್ ಗೋ ಆವೃತ್ತಿ

* ಭಾರತದಲ್ಲಿ ಗೂಗಲ್ ಗೋ ಆವೃತ್ತಿಯ ಆಂಡ್ರಾಯ್ಡ್ ಓರಿಯೋ ಪರಿಚಯಿಸಲಾಗುತ್ತಿದ್ದು, ಇದು ಎಂಟ್ರಿ ಲೆವೆಲ್ ಸ್ಮಾರ್ಟ್ ಫೋನ್ ಗಳಿಗೂ ಲಭ್ಯವಿರಲಿದೆ.
* ಬಜೆಟ್ ಫೋನ್ ಗಳಿಗೂ ಓರಿಯೋ ಬರಲಿದ್ದು, ಎಲ್ಲಾ ಬಗೆಯ ಗೂಗಲ್ ಅಪ್ಲಿಕೇಷನ್ ಬಳಸಬಹುದಾಗಿದೆ.

* ಆಂಡ್ರಾಯ್ಡ್ ಓರಿಯೋ(ಗೋ ಆವೃತ್ತಿ)ದಲ್ಲಿ ಗೂಗಲ್ ಗೋ ಸರ್ಚ್ ಆಪ್ ಸ್ಥಿರವಾಗಿ ಇರಲಿದೆ ಎಂದು ಇಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷ ಶಶಿಧರ್ ಠಾಕೂರ್ ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Search Engine giant ‘Google for India’ event highlights New Delhi. Google for India, an annual affair, is being held for the third time in a row. Google for India in 2015 was hosted by Google CEO Sundar Pichai.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ