• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೇನು ತುಪ್ಪ ಬ್ರಾಂಡ್‌ಗಳ ಶುದ್ಧತೆ ಪ್ರಶ್ನಿಸಿ ಸುಪ್ರೀಂನಲ್ಲಿಅರ್ಜಿ

|

ನವದೆಹಲಿ, ಏಪ್ರಿಲ್ 20: ಭಾರತೀಯ ಮಾರುಕಟ್ಟೆಗಳಲ್ಲಿ ಜೇನುತುಪ್ಪದ ಉತ್ಪನ್ನಗಳ ಮಾರಾಟದ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ನೀಡಿದೆ.

ವಿವಿಧ ಜೇನು ಬ್ರಾಂಡ್‌ಗಳು ಅಥವಾ ಉತ್ಪನ್ನಗಳ ತನಿಖೆ ಅಥವಾ ಪರೀಕ್ಷಾ ವರದಿಗಳನ್ನು ಉನ್ನತ ನ್ಯಾಯಾಲಯದ ಮುಂದೆ ಸಲ್ಲಿಸುವಂತೆ ಕಂಪನಿಗಳಿಗೆ ನಿರ್ದೇಶನ ನೀಡುವಂತೆಯೂ ಮನವಿಯಲ್ಲಿ ಕೋರಲಾಗಿತ್ತು.

ಭಾರತದ ಪ್ರಮುಖ ಬ್ರಾಂಡ್‌ಗಳ ಜೇನುತುಪ್ಪಕ್ಕೆ ಸಕ್ಕರೆ ಪಾಕದ ಕಲಬೆರಕೆ: CSE

ಭಾರತೀಯ ಭ್ರಷ್ಟಾಚಾರ ವಿರೋಧಿ ಒಕ್ಕೂಟ ಟ್ರಸ್ಟ್‌ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ, ನ್ಯಾಯಮೂರ್ತಿಗಳಾದ ಎ ಎಸ್‌ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್‌ ಅವರಿದ್ದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತು.

''ವಿಜ್ಞಾನ ಮತ್ತು ಪರಿಸರ ಕೇಂದ್ರದ (ಸಿಎಸ್ಇ) ಸಂಶೋಧಕರ ಪ್ರಕಾರ, ಭಾರತದ ಪ್ರಮುಖ ಜೇನುತುಪ್ಪ ಬ್ರಾಂಡ್‌ಗಳಲ್ಲಿ ಚೀನಾದಿಂದ ಮಾರ್ಪಡಿಸಿದ ಸಕ್ಕರೆ ಬೆರೆಸಲಾಗುತ್ತಿದೆ. ಕಲಬೆರಕೆ ಕಂಡುಹಿಡಿಯಲು ಬಳಸುವ ಕೆಲವು ಮೂಲಭೂತ ಪರೀಕ್ಷೆಗಳನ್ನು ತಪ್ಪಿಸಲಾಗುತ್ತಿದೆ, ಕೊವಿಡ್ 19 ಸಂದರ್ಭದ ಲಾಭ ಪಡೆದು ಆರೋಗ್ಯ ಹದಗೆಡದಂತೆ ತಡೆಯಬೇಕು'' ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಡಾಬರ್, ಪತಂಜಲಿ ಹಾಗೂ ಝಂಡು ಪ್ರಮುಖ ಸಂಸ್ಥಗಳೇ ಕಳಪೆ ಜೇನುತುಪ್ಪ ಮಾರಾಟ ಮಾಡಿವೆ, ಮೂಲಭೂತ ಪರಿಶುದ್ಧ ಪರೀಕ್ಷೆಗಳನ್ನು ನಡೆಸಿಲ್ಲ ಎಂಬ ಆರೋಪವನ್ನು ಅಲ್ಲಗೆಳೆದಿರುವ ಪ್ರಮುಖ ಸಂಸ್ಥೆಗಳ ವಕ್ತಾರರು FSSAI ನೀಡಿರುವ ಗುಣಮುಖ ಮಟ್ಟ ಪರೀಕ್ಷೆಗೆ ಬದ್ಧವಾಗಿದೆ. ಎನ್ ಎಂ ಆರ್ ಸ್ಪೆಕ್ಟ್ರೋಸ್ಕೋಪಿ ಪರೀಕ್ಷೆಯಲ್ಲಿ 70 ಸ್ಯಾಂಪಲ್ ಪೈಕಿ 3 ಮಾತ್ರ ಪಾಸ್ ಆಗಿದೆ ಎಂಬ ವರದಿಯನ್ನು ತಳ್ಳಿ ಹಾಕಿದ್ದಾರೆ.(ಮಾಹಿತಿ ಕೃಪೆ: ಬಾರ್ ಅಂಡ್ ಬೆಂಚ್)

English summary
The Supreme Court on Monday sought response from Centre and states on a plea seeking permanent ban on all unauthorised production, and companies and individuals carrying out illegal adulterated honey business.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X