ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಿಕ್ಸನ್ ಗೆ ಬಾಕಿ : ಅನಿಲ್ ಅಂಬಾನಿಗೆ ಸುಪ್ರೀಂನಿಂದ ನೋಟಿಸ್

|
Google Oneindia Kannada News

ನವದೆಹಲಿ, ಜನವರಿ 07: ಸ್ವೀಡನ್ನಿನ ಕಂಪನಿ ಎರಿಕ್ಸನ್ ಸಂಸ್ಥೆಗೆ ಬಾಕಿ ಮೊತ್ತ ಪಾವತಿಸದ ರಿಲಯನ್ಸ್ ಕಮ್ಯೂನಿಕೇಷನ್ ಚೇರ್ಮನ್ ಅನಿಲ್ ಅಂಬಾನಿ ಅವರಿಗೆ ಈ ಸಂಬಂಧ ಸುಪ್ರೀಂಕೋರ್ಟಿನಿಂದ ನೋಟಿಸ್ ಜಾರಿಯಾಗಿದೆ. ನೋಟಿಸ್ ಗೆ ಉತ್ತರಿಸಲು ನಾಲ್ಕು ವಾರಗಳ ಗಡುವು ನೀಡಲಾಗಿದೆ.

ಜಸ್ಟೀಸ್ ಆರ್ ಎಫ್ ನಾರಿಮನ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ. ಇದಲ್ಲದೆ, ಸುಪ್ರೀಂಕೋರ್ಟಿನ ರಿಜಿಸ್ಟ್ರಿಯಲ್ಲಿ 118 ಕೋಟಿ ರುಗಳನ್ನು ಡಿಡಿ ಮೂಲಕ ಪಾವತಿಸುವಂತೆ ಆರ್ ಕಾಮ್ ಗೆ ಅನುಮತಿ ನೀಡಲಾಗಿದೆ. ಆರ್ ಕಾಮ್ ಹಾಗೂ ರಿಲಯನ್ಸ್ ಜಿಯೋ ನಡುವಿನ ವಾಜ್ಯ, ಬಾಕಿಮೊತ್ತ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ನ್ಯಾಯಪೀಠ ಸೂಚಿಸಿದೆ.

'ಬಾಕಿ ಮೊತ್ತ ಪಾವತಿಸದಿದ್ದರೆ ಅನಿಲ್ ಅಂಬಾನಿಯನ್ನು ಜೈಲಿಗೆ ಕಳಿಸಿ' 'ಬಾಕಿ ಮೊತ್ತ ಪಾವತಿಸದಿದ್ದರೆ ಅನಿಲ್ ಅಂಬಾನಿಯನ್ನು ಜೈಲಿಗೆ ಕಳಿಸಿ'

ಎರಿಕ್ಸನ್ ಸಂಸ್ಥೆಗೆ ಅನಿಲ್ ಅವರ ರಿಲಯನ್ಸ್ ಸಂಸ್ಥೆಯು 550 ಕೋಟಿ ರು ಪಾವತಿಸಬೇಕಿದೆ. ಸ್ಪೆಕ್ಟ್ರಂ ಮಾರಾಟ ವಿಳಂಬವಾದ ಹಿನ್ನೆಲೆಯಲ್ಲಿ ಎರಿಕ್ಸನ್ ಗೆ ಪಾವತಿ ಮಾಡಲು ಆಗಿಲ್ಲ ಎಂದು ದೂರಸಂಪರ್ಕ ಇಲಾಖೆ ವಿರುದ್ಧ ರಿಲಯನ್ಸ್ ಸಂಸ್ಥೆ ಕೂಡಾ ಸುಪ್ರೀಂಕೋರ್ಟಿನಲ್ಲಿ ದಾವೆ ಹೂಡಿದೆ.

SC issues notice to Anil Ambani over Ericsson dues

ಕೋರ್ಟಿನಲ್ಲಿ 550 ಕೋಟಿ ರು ಗಳ ವೈಯಕ್ತಿಕ ಖಾತ್ರಿ ನೀಡಿದ್ದ ಅನಿಲ್ ಅವರ ವಿರುದ್ಧ ಎರಿಕ್ಸನ್ ಅರ್ಜಿ ಹಾಕಿದ್ದು, ಬಾಕಿ ಮೊತ್ತವನ್ನು ಪಾವತಿಸುವ ತನಕ ವಿದೇಶಕ್ಕೆ ಪ್ರಯಾಣಿಸಿದಂತೆ ತಡೆ ನೀಡಬೇಕು ಎಂದು ಎರಿಕ್ಸನ್ ಮನವಿ ಮಾಡಿದೆ. ಬಾಕಿ ಮೊತ್ತ ಪಾವತಿಸಲು ಸೆಪ್ಟೆಂಬರ್ 30 ಹಾಗೂ ಡಿಸೆಂಬರ್ 15ರ ಎರಡು ಗಡುವು ನೀಡಲಾಗಿತ್ತು. ಕೋರ್ಟ್ ಆದೇಶ ಪಾಲಿಸದ ಅನಿಲ್ ಅವರನ್ನು ಜೈಲಿಗೆ ಹಾಕಿ, ನಮ್ಮ ಹಣ ಕೊಡಿಸಿ ಎಂದು ಎರಿಕ್ಸನ್ ಸಂಸ್ಥೆ ಕೋರಿದೆ

English summary
The Supreme Court on Monday issued notice to Anil Ambani on a plea by Ericsson India Pvt. Ltd seeking initiation of contempt proceedings against the chairman of Reliance Communication Ltd (RCom) for allegedly not complying with its order to clear dues of Rs 550 crore towards the completion of the asset sale with Reliance Jio Infocomm Ltd.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X