ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸುಪ್ರೀಂ ಅಂಗಳಕ್ಕೆ ಸ್ಪೈಸ್‌ ಜೆಟ್‌ ಸಂಸ್ಥೆ ಬಂದ್ ಮಾಡಬೇಕೇ? ಕೇಸ್

|
Google Oneindia Kannada News

ನವದೆಹಲಿ, ಜನವರಿ 25: ಸ್ಪೈಸ್‌ ಜೆಟ್‌ ವಿಮಾನ ಸಂಸ್ಥೆಯನ್ನು ಮುಚ್ಚುವಂತೆ ಮದ್ರಾಸ್‌ ಹೈಕೋರ್ಟ್‌ ಆದೇಶ ನೀಡಿದ್ದು ನೆನಪಿರಬಹುದು. ಬಾಕಿ ಮೊತ್ತ ಪಾವತಿಸುವಂತೆ ಕೋರಿ ಷೇರು ಸಂಸ್ಥೆ ಕ್ರೆಡಿಟ್ ಸ್ಯೂಸೆ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ ಕೋರ್ಟ್ ಆದೇಶ ನೀಡಿತ್ತು.ಆದರೆ, ದಿವಾಳಿ ಹಂತ ತಲುಪಿರುವ ವಿಮಾನಯಾನ ಸಂಸ್ಥೆ, ಮೂರುವಾರಗಳ ಕಾಲಾವಕಾಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈಗ ಮದ್ರಾಸ್‌ ಹೈಕೋರ್ಟ್‌ ತೀರ್ಪಿನ ವಿರುದ್ಧ ವಿಮಾನಯಾನ ಸಂಸ್ಥೆಯು ಸುಪ್ರೀಂಕೋರ್ಟ್‌ ಕದ ತಟ್ಟಿದೆ. ಕೇಂದ್ರ ಬಜೆಟ್ 2022 ಹತ್ತಿರದಲ್ಲಿರುವಾಗ ಬಜೆಟ್ ಏರ್ ಲೈನ್ ಪರಿಸ್ಥಿತಿ ಈ ರೀತಿ ಆಗಿರುವುದು ವಿಮಾನಯಾನ ಕ್ಷೇತ್ರಕ್ಕೆ ಆಘಾತ ಮೂಡಿಸಿದೆ. ಕೋವಿಡ್ ಸಂದರ್ಭದಲ್ಲೂ ಸೀಮಿತ ಯಾನ ಹೊಂದಿದ್ದ ವಿಮಾನಯಾನ ಸಂಸ್ಥೆ ಈ ಬಾರಿ ಬಜೆಟ್‌ನಲ್ಲಿ ಹೆಚ್ಚಿನ ನಿರೀಕ್ಷೆ ಹೊಂದಿದೆ.

ಸ್ಪೈಸ್‌ಜೆಟ್‌ ಅನ್ನು ಮುಚ್ಚುವ ಕಂಪೆನಿ ಆದೇಶದಲ್ಲಿ ಮಧ್ಯಪ್ರವೇಶಿಸಲು ಮದ್ರಾಸ್‌ ಹೈಕೋರ್ಟ್‌ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ವಿಮಾನಯಾನ ಸಂಸ್ಥೆಯು ಮೇಲ್ಮನವಿ ಸಲ್ಲಿಸಿದೆ. ಪ್ರಕರಣವನ್ನು ತುರ್ತು ಆದ್ಯತೆಯ ಮೇಲೆ ಆಲಿಸದಿದ್ದರೆ ಸ್ಪೈಸ್‌ಜೆಟ್‌ ಋಣವಿಮೋಚನೆ ಪ್ರಕ್ರಿಯೆಗೆ ಒಳಗಾಗಿ ಮುಚ್ಚಲ್ಪಡಲಿದೆ, ಸೋಮವಾರ ಅಥವಾ ಶುಕ್ರವಾರದೊಳಗೆ ವಿಚಾರಣೆಗೆ ಬಂದರೆ ಒಳ್ಳೆಯದು ಎಂದು ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ ಅವರ ಮುಂದೆ ಪ್ರಕರಣ ಪ್ರಸ್ತಾಪಿಸಿದರು. ಇದಕ್ಕೆ ಸ್ಪಂದಿಸಿದ ನ್ಯಾಯಮೂರ್ತಿಗಳು ಗುರುವಾರ ವಿಚಾರಣೆ ನಡೆಸುವಂತೆ ಸೂಚಿಸಿದರು ಎಂದು ಸ್ಪೈಸ್‌ಜೆಟ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ವಿ ರಾಮಕೃಷ್ಣನ್ ಹೇಳಿದರು.

ಸ್ಪೈಸ್‌ಜೆಟ್ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಆಸ್ತಿ ವಶಕ್ಕೆ ಪಡೆಯಬೇಕು, ಸಂಸ್ಥೆ ಅಧಿಕೃತವಾಗಿ ದಿವಾಳಿ ಎಂದು ಘೋಷಿಸಬೇಕು ಎಂದು ಷೇರು ಸಂಸ್ಥೆ ಮನವಿ ಸಲ್ಲಿಸಿತ್ತು. ಇದೀಗ ಮೂರುವಾರಗಳ ಬಳಿಕ ವಿಮಾನಯಾನ ಸಂಸ್ಥೆಯನ್ನು ಸಂಪೂರ್ಣವಾಗಿ ಜಪ್ತಿ ಮಾಡಿ, ಸ್ವಿಸ್ ಕಂಪನಿಗೆ ಬಾಕಿಮೊತ್ತ ಪಾವತಿಸಲಾಗುತ್ತದೆ. ಸ್ವಿಸ್ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದ ಸ್ಪೈಸ್ ಜೆಟ್ ಸುಮಾರು 24.01 ಮಿಲಿಯನ್ ಯುಎಸ್ ಡಾಲರ್ ಮೊತ್ತ ಬಾಕಿ ಉಳಿಸಿಕೊಂಡಿದೆ.

SC Agrees to Hear SpiceJet Plea Against Order Admitting Winding Up Petition

ಎಸ್ ಆರ್ ಟಿ ಟೆಕ್ನಿಕ್ಸ್ ಪರ ಕ್ರೆಡಿಟ್ ಸೂಸೆ ವಾದ: ಸ್ವಿಟ್ಜರ್ಲೆಂಡ್ ಮೂಲದ ಎಸ್ ಆರ್ ಟಿ ಟೆಕ್ನಿಕ್ಸ್ ಸಂಸ್ಥೆಯು ಸ್ಪೈಸ್ ಜೆಟ್ ಸಂಸ್ಥೆಗೆ ವಿಮಾನಗಳ ಕಾರ್ಯ ನಿರ್ವಹಣೆ, ಇಂಜಿನ್, ರಿಪೇರಿ, ಬಿಡಿಭಾಗಳ ರಿಪೇರಿ, ಮರು ಜೋಡಣೆ ಸೇರಿದಂತೆ ಎಲ್ಲಾ ಬಗೆಯ ತಾಂತ್ರಿಕ ಸೇವೆಗಳನ್ನು ಒದಗಿಸಿದೆ. ಸುಮಾರು 10 ವರ್ಷಗಳ ಅವಧಿಗೆ ಈ ಸೇವೆ ನೀಡಲು ಒಪ್ಪಂದವಾಗಿತ್ತು. ನವೆಂಬರ್ 24, 2011ಕ್ಕೆ ಒಪ್ಪಂದದ ಅವಧಿ ಮುಕ್ತಾಯವಾಗಿದೆ. ಆದರೆ, ಬಾಕಿ ಮೊತ್ತ ಉಳಿಸಿಕೊಂಡಿದ್ದ ಸ್ಪೈಸ್ ಜೆಟ್ ಮರು ಒಪ್ಪಂದ ಮಾಡಿಕೊಂಡು, ವಿಮಾನಯಾನ ಗಂಟೆಗಳ ದರ ಮುಂತಾದ ಇನ್ನಿತರ ಸೇವೆಗಳನ್ನು ಪಡೆದುಕೊಂಡಿತ್ತು. ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದ ಎಸ್ ಆರ್ ಟಿ ಟೆಕ್ನಿಕ್ಸ್ ಸಂಸ್ಥೆ ಬಿಲ್ ದರ ಹೆಚ್ಚಿಸಿ, ಏಳು ಇನ್ ವಾಯ್ಸ್ ಕಳಿಸಿತ್ತು. ಆದರೆ, ಸಾಲದ ಸುಳಿಯಲ್ಲಿ ಸಿಲುಕಿದ್ದ ಸ್ಪೈಸ್ ಜೆಟ್ ಮೊತ್ತ ಪಾವತಿಸುವಲ್ಲಿ ವಿಫಲವಾಯಿತು.

ಎಸ್ ಆರ್ ಟಿ ಟೆಕ್ನಿಕ್ ಸಂಸ್ಥೆಗೆ ಹಣ ಕೊಡಿಸುವ ಭರವಸೆಯೊಂದಿಗೆ ಒಪ್ಪಂದ ಮಾಡಿಕೊಂಡ ಕ್ರೆಡಿಟ್ ಸೂಸೆ ಎಜಿ ಕಣಕ್ಕಿಳಿದು, ಸ್ಪೈಸ್ ಜೆಟ್ ಹಿಂದೆ ಬಿದ್ದು, ಬಾಕಿ ಮೊತ್ತಕ್ಕಾಗಿ ನೋಟಿಸ್ ಜಾರಿಗೊಳಿಸಿತು. ಆದರೆ, ಹಲವು ನೋಟಿಸ್ ಗಳಿಗೆ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರಿದ ಕ್ರೆಡಿಟ್ ಸೂಸೆ, ಸ್ಪೈಸ್ ಜೆಟ್ ದಿವಾಳಿ ಎಂದು ಘೋಷಿಸಿ, ಆಸ್ತಿ ಜಪ್ತಿ ಮಾಡಿ ಹಣ ಒದಗಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಸ್ಪೈಸ್ ಜೆಟ್ ಮತ್ತು SRT ಟೆಕ್ನಿಕ್ಸ್ ನಡುವಿನ ಒಪ್ಪಂದಗಳು ಪ್ರಸ್ತುತ ಅರ್ಜಿದಾರರಿಗೆ ಅಧಿಕೃತ ನಿಯೋಜನೆ ಹೊಣೆಯನ್ನು ಅಧಿಕೃತಗೊಳಿಸಲು ಕೋರ್ಟ್ ಒಪ್ಪಂದ ಕಾರಣ, ಜನವರಿ 2015 ರಲ್ಲಿ ಕಂಪನಿಗಳ ಕಾಯಿದೆಯ ಸೆಕ್ಷನ್ 434 ರ ಅಡಿಯಲ್ಲಿ ಸ್ಪೈಸ್ ಜೆಟ್ ಸಂಸ್ಥೆಗೆ SRT ಟೆಕ್ನಿಕ್ಸ್ ನೋಟಿಸ್ ನೀಡಿತ್ತು. ಒಟ್ಟಾರೆ, ಸ್ಪೈಸ್ ಜೆಟ್ ಬಾಕಿ ಮೊತ್ತ ಪಾವತಿಸುವುದೇ? ಅಥವಾ ದಿವಾಳಿ ಎಂದು ಅಧಿಕೃತವಾಗಿ ಘೋಷಿಸಿಕೊಳ್ಳುವುದೇ? ಕಾದುನೋಡಬೇಕಿದೆ. (ಐಎಎನ್ಎಸ್/ಪಿಟಿಐ)

English summary
The Supreme Court on Tuesday agreed to hear a plea by SpiceJet challenging a Madras High Court order, which declined to interfere with a company court's order admitting a winding up petition against the airline.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X