ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಬಿಐ YONO ಅಪ್ಲಿಕೇಶನ್‌ನಲ್ಲಿ ತಾಂತ್ರಿಕ ಸಮಸ್ಯೆ: ಆನ್‌ಲೈನ್ ವಹಿವಾಟಿನಲ್ಲಿ ತೊಂದರೆ

|
Google Oneindia Kannada News

ನವದೆಹಲಿ, ಡಿಸೆಂಬರ್ 02: ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಸ್‌ಬಿಐ ಗ್ರಾಹಕರು ಬ್ಯಾಂಕ್‌ನ ಯೋನೊ ಅಪ್ಲಿಕೇಶನ್ ಬಳಸುವಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಡಿಸೆಂಬರ್‌ 2 ಆನ್‌ಲೈನ್ ವಹಿವಾಟು ವಿಫಲವಾಗಿದೆ ಎಂದು ಅನೇಕ ಎಸ್‌ಬಿಐ ಗ್ರಾಹಕರು ದೂರು ನೀಡಿದ್ದಾರೆ.

ಕೆಲವು ಗ್ರಾಹಕರು ಎಸ್‌ಬಿಐನ ಯೋನೊ ಅಪ್ಲಿಕೇಶನ್‌ಗೆ ಲಾಗ್ ಇನ್ ಆಗಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. ಅವರು ಲಾಗ್ ಇನ್ ಮಾಡಿದ ನಂತರ ಡಿಸ್‌ಪ್ಲೇ ಮೇಲೆ Error ಸಂದೇಶ ಬರುತ್ತಿದೆ ಎಂದು ಹೇಳಿದ್ದಾರೆ.

ಭಾರತದ ಗ್ರಾಮೀಣ ಪ್ರದೇಶದಲ್ಲೇ ಅತಿಹೆಚ್ಚು ಎಟಿಎಂ ಬಳಕೆ! ಭಾರತದ ಗ್ರಾಮೀಣ ಪ್ರದೇಶದಲ್ಲೇ ಅತಿಹೆಚ್ಚು ಎಟಿಎಂ ಬಳಕೆ!

ಇಂಡಿಯಾ ಟುಡೆ ವರದಿಯ ಪ್ರಕಾರ, ಡಿಸೆಂಬರ್ 1 ರ ಮಂಗಳವಾರದಿಂದ ಬ್ಯಾಂಕ್ ಗ್ರಾಹಕರು ತಾಂತ್ರಿಕ ದೋಷವನ್ನು ಎದುರಿಸುತ್ತಿದ್ದಾರೆ. ಅವರು ಮಂಗಳವಾರದಿಂದಲೇ ಅದರ ಬಗ್ಗೆ ದೂರು ನೀಡಲು ಪ್ರಾರಂಭಿಸಿದರು. ಆದರೆ ಗ್ರಾಹಕರು ಇನ್ನೂ ಇದೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬ್ಯಾಂಕ್ ಗ್ರಾಹಕರು ಸಹ ಆನ್‌ಲೈನ್‌ನಲ್ಲಿ ಹಣವನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಏನೆಂದರೆ, ಇತರ ಬ್ಯಾಂಕುಗಳ ಗ್ರಾಹಕರು ಸಹ ಎಸ್‌ಬಿಐ ಬ್ಯಾಂಕಿನ ಗ್ರಾಹಕರಿಗೆ ಆನ್‌ಲೈನ್‌ನಲ್ಲಿ ಹಣವನ್ನು ಕಳುಹಿಸುವಲ್ಲಿ ತೊಂದರೆ ಎದುರಿಸುತ್ತಿದ್ದಾರೆ. ಈ ಬಗ್ಗೆ ಬ್ಯಾಂಕ್ ಇನ್ನೂ ಯಾವುದೇ ಸ್ಪಷ್ಟನೆ ನೀಡಿಲ್ಲ.

SBI Yono App Shows Error M005: Customers Complained On Twitter

ಅನೇಕ ಎಸ್‌ಬಿಐ ಗ್ರಾಹಕರು ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್‌ನ ಯೋನೊ ದೋಷ ಸಂಕೇತ 'ಎಂ 005' ಅನ್ನು ತೋರಿಸುತ್ತಿದೆ ಮತ್ತು ಆನ್‌ಲೈನ್‌ನಲ್ಲಿ ವಹಿವಾಟು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ.

ಈ ಹಿಂದೆ ನವೆಂಬರ್ 22 ರಂದು ಕೂಡ ಬ್ಯಾಂಕ್‌ ಆ್ಯಪ್‌ನಲ್ಲಿ ತಾಂತ್ರಿಕ ತೊಂದರೆ ಉಂಟಾಯಿತು, ಇದರಿಂದಾಗಿ ಆನ್‌ಲೈನ್ ವಹಿವಾಟು ನಡೆಸಲು ಸಾಧ್ಯವಾಗಲಿಲ್ಲ. ಆಗ ಎಸ್‌ಬಿಐ ಅನಾನುಕೂಲತೆಗೆ ವಿಷಾದಿಸಿತು.

English summary
The SBI Yono app has been showing an error M005, leading to transaction failures, customers complained on Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X