ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SBI VRS Scheme 2020: 30,000 ಉದ್ಯೋಗಿಗಳಿಗೆ ವಿಆರ್‌ಎಸ್‌ ಯೋಜನೆ ಸಿದ್ಧತೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 07: ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಮಾನವ ಸಂಪನ್ಮೂಲ ಮತ್ತು ಬ್ಯಾಂಕಿನ ವೆಚ್ಚವನ್ನು ಉಳಿಸಲು ಸ್ವಯಂಪ್ರೇರಿತ ನಿವೃತ್ತಿ ಯೋಜನೆ (ವಿಆರ್ಎಸ್) ಸಿದ್ಧಪಡಿಸಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.

ಎಸ್‌ಬಿಐ 2020ರ ವಿಆರ್‌ಎಸ್‌ ಯೋಜನೆಗೆ ಕನಿಷ್ಠ 30,190 ಉದ್ಯೋಗಿಗಳು ಅರ್ಹರಾಗುತ್ತಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಎಸ್‌ಬಿಐ ಎಟಿಎಂ ಬಳಕೆದಾರರೇ ಗಮನಿಸಿ: ಎಸ್‌ಬಿಐನಿಂದ ಹೊಸ ವೈಶಿಷ್ಟ್ಯ ಪರಿಚಯಎಸ್‌ಬಿಐ ಎಟಿಎಂ ಬಳಕೆದಾರರೇ ಗಮನಿಸಿ: ಎಸ್‌ಬಿಐನಿಂದ ಹೊಸ ವೈಶಿಷ್ಟ್ಯ ಪರಿಚಯ

2020ರ ಮಾರ್ಚ್‌ ಅಂತ್ಯಕ್ಕೆ ಬ್ಯಾಂಕ್‌ನ ಒಟ್ಟು ಸಿಬ್ಬಂದಿ ಸಂಖ್ಯೆ 2.49 ಲಕ್ಷ ಇತ್ತು. ಹೀಗಾಗಿ ಬ್ಯಾಂಕಿನ ವೆಚ್ಚವನ್ನ ತಗ್ಗಿಸಲು ವಿಆರ್‌ಎಸ್ ಕರಡು ಯೋಜನೆ ಸಿದ್ಧಪಡಿಸಿದ್ದು, ಆಡಳಿತ ಮಂಡಳಿಯ ಒಪ್ಪಿಗೆಗಾಗಿ ಕಾಯಲಾಗುತ್ತಿದೆ.

 SBI VRS Scheme 2020: 30,000 Employees Will Be Eligible For VRS

ಇನ್ನು 25 ವರ್ಷ ಸೇವೆ ಪೂರ್ಣಗೊಳಿಸಿರುವವರು ಅಥವಾ 55 ವರ್ಷ ಆಗಿರುವವರು ಈ ಯೋಜನೆಗೆ ಅರ್ಹರಾಗುತ್ತಾರೆ. ವಿಆರ್‌ಎಸ್‌ಗೆ ಅರ್ಹರಾಗಿರುವ ಸಿಬ್ಬಂದಿಯ ಪೈಕಿ ಶೇಕಡಾ 30ರಷ್ಟು ಮಂದಿ ಸ್ವಯಂ ನಿವೃತ್ತಿಯನ್ನು ಆಯ್ಕೆ ಮಾಡಿಕೊಂಡರೆ ಅದರಿಂದ ಬ್ಯಾಂಕ್‌ಗೆ 1,662.86 ಕೋಟಿ ಉಳಿತಾಯ ಆಗಲಿದೆ. 2020ರ ಜುಲೈನ ವೇತನದ ಆಧಾರದ ಮೇಲೆ ಈ ಮೊತ್ತವನ್ನು ಅಂದಾಜು ಮಾಡಲಾಗಿದೆ.

ವಿಆರ್‌ಎಸ್‌ ಯೋಜನೆಯು ಡಿಸೆಂಬರ್ 1ರಂದು ಪ್ರಾರಂಭವಾಗಲಿದ್ದು, ಫೆಬ್ರವರಿ ಕೊನೆಯ ತನಕ ಅವಕಾಶ ಇರುತ್ತದೆ. ಯಾರು ವಿಆರ್‌ಎಸ್ ಯೋಜನೆ ಆಯ್ದುಕೊಳ್ಳುತ್ತಾರೋ ಅಂಥವರಿಗೆ ನಿವೃತ್ತಿ ಆಗುವ ತನಕದ ಬಾಕಿ ಅವಧಿಗೆ ಶೇಕಡಾ 50ರಷ್ಟು ಎಕ್ಸ್ ಗ್ರೇಷಿಯಾ ಪಾವತಿಸಲಾಗುತ್ತದೆ. ಗರಿಷ್ಠ ಹದಿನೆಂಟು ತಿಂಗಳಿಗೆ ಇದು ಅನ್ವಯ ಆಗುತ್ತದೆ. ಇದಕ್ಕಾಗಿ ಕೊನೆಯದಾಗಿ ಅವರು ಪಡೆದ ಸಂಬಳವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಬ್ಯಾಂಕ್ ಹೇಳಿದೆ.

English summary
SBI has planned a voluntary retirement scheme (VRS) to optimise human resources and costs of the bank. At least 30,190 employees will be eligible for VRS, according to the report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X