ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ನಾಗರಿಕರಿಗೆ SBI ವಿಶೇಷ ಫಿಕ್ಸೆಡ್ ಡೆಪಾಸಿಟ್ ವಿವರ ಇಲ್ಲಿದೆ

|
Google Oneindia Kannada News

ನವದೆಹಲಿ, ಜುಲೈ 7: ಕಷ್ಟಪಟ್ಟು ಹಣ ಉಳಿತಾಯ ಮಾಡಿ, ಭವಿಷ್ಯಕ್ಕೆ ಉಪಯೋಗಕ್ಕೆ ಬರಬಹುದು ಎಂದು ಹಣವನ್ನು ನಿಶ್ಚಿತ ಠೇವಣಿ(ಫಿಕ್ಸೆಡ್ ಡೆಪಾಸಿಟ್) ಮಾಡುವುದು ಸಾಮಾನ್ಯ. ಅದರಲ್ಲೂ ಹಿರಿಯ ನಾಗರಿಕರು ತಮ್ಮ ಹಣವನ್ನು ಸುರಕ್ಷಿತವಾಗಿ ಆದಾಯ ಬರುವಂತೆ ಹೂಡಿಕೆ ಮಾಡುವುದು ನಿಶ್ಚಿತ ಠೇವಣಿಗಳಲ್ಲಿ.

ಭಾರತದ ಬಹುತೇಕ ಎಲ್ಲಾ ಬ್ಯಾಂಕುಗಳು ನಿಶ್ಚಿತ ಠೇವಣಿ ಮೇಲೆ ನೀಡುವ ಬಡ್ಡಿ ದರವು ಸಾಮಾನ್ಯ ಗ್ರಾಹಕರಿಗಿಂತ ಸ್ವಲ್ಪ ಹೆಚ್ಚು ಎಂಬಂತೆ ಹಿರಿಯ ನಾಗರೀಕರಿಗೆ ಹೆಚ್ಚುವರಿ 0.50 ಪರ್ಸೆಂಟ್ ಬಡ್ಡಿ ದರವನ್ನು ಹೊಂದಿವೆ. ಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಹೆಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಇತರೆ ಬ್ಯಾಂಕುಗಳು ಹಿರಿಯ ನಾಗರೀಕರಿಗೆ 0.50 ಪರ್ಸೆಂಟ್ ಹೆಚ್ಚುವರಿ ಬಡ್ಡಿ ಕೊಡುವುದು ಸಾಮಾನ್ಯ.

ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿಗಳು ಹೆಚ್ಚು ಆದ್ಯಂತೆಯ ಹೂಡಿಕೆ ಸಾಧನವಾಗಿದೆ. ಎಫ್‌ಡಿಗಳು ವೃದ್ಧರಿಗೆ ಹೆಚ್ಚಿನ ಬಡ್ಡಿದರ ಮತ್ತು ತೆರಿಗೆ ಪ್ರಯೋಜನಗಳಂತಹ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಮತ್ತು ಇತರರು ಸೇರಿದಂತೆ ಎಲ್ಲಾ ಪ್ರಮುಖ ಬ್ಯಾಂಕುಗಳು ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳ ಅವಧಿಯ ಅವಧಿಯ ಠೇವಣಿಗಳ ಮೇಲೆ 50 ಬೇಸಿಸ್ ಪಾಯಿಂಟ್‌ಗಳನ್ನು (ಬಿಪಿಎಸ್) ಹೆಚ್ಚುವರಿಯಾಗಿ ನೀಡುತ್ತವೆ.

ಎಸ್‌ಬಿಐ ಚಿನ್ನದ ಹಣಗಳಿಸುವ ಯೋಜನೆ: 13,212 ಕೆ.ಜಿ ಚಿನ್ನ ಸಂಗ್ರಹಎಸ್‌ಬಿಐ ಚಿನ್ನದ ಹಣಗಳಿಸುವ ಯೋಜನೆ: 13,212 ಕೆ.ಜಿ ಚಿನ್ನ ಸಂಗ್ರಹ

ಪ್ರಸ್ತುತ ಕುಸಿಯುತ್ತಿರುವ ದರದಲ್ಲಿ ಹಿರಿಯ ನಾಗರಿಕರ ಹಿತಾಸಕ್ತಿಗಳನ್ನು ಕಾಪಾಡಲು, ದೇಶದ ಉನ್ನತ ಸಾಲಗಾರ ಎಸ್‌ಬಿಐ ಹಿರಿಯ ನಾಗರಿಕರಿಗೆ ತಮ್ಮ ಹಣದ ಮೇಲೆ ಹೆಚ್ಚಿನ ಬಡ್ಡಿದರವನ್ನು ಪಡೆಯಲು ಸಹಾಯ ಮಾಡಲು ವಿಶೇಷ ಎಫ್‌ಡಿ ಯೋಜನೆಯನ್ನು ಪ್ರಾರಂಭಿಸಿತ್ತು. ಎಸ್‌ಬಿಐ ವೆಕೇರ್ ಠೇವಣಿ ಎಂದು ಕರೆಯಲ್ಪಡುವ ಈ ಯೋಜನೆಯು ಹಿರಿಯ ನಾಗರಿಕರಿಗೆ ತಮ್ಮ ಎಫ್‌ಡಿಗಳಲ್ಲಿ ಹೆಚ್ಚುವರಿ 30 ಬಿಪಿಎಸ್ ಬಡ್ಡಿಯನ್ನು ಒದಗಿಸುತ್ತದೆ.

ಎಸ್‌ಬಿಐ ಹಿರಿಯ ನಾಗರಿಕರಿಗೆ ವಿಶೇಷ FD ಯೋಜನೆ

ಎಸ್‌ಬಿಐ ಹಿರಿಯ ನಾಗರಿಕರಿಗೆ ವಿಶೇಷ FD ಯೋಜನೆ

1) 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ನಾಗರಿಕರು ಎಸ್‌ಬಿಐ ಹಿರಿಯ ನಾಗರಿಕರ ವಿಶೇಷ ಎಫ್‌ಡಿ ಯೋಜನೆಯಲ್ಲಿ ಹೂಡಿಕೆ ಮಾಡಲು ಅರ್ಹರು.

2) ಹಿರಿಯ ನಾಗರಿಕರಿಗಾಗಿ ಎಸ್‌ಬಿಐ ವಿಶೇಷ ಎಫ್‌ಡಿ ಯೋಜನೆ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಅನ್ವಯಿಸುತ್ತದೆ.

3) ಹೊಸ ಬಡ್ಡಿದರಗಳು ಹೊಸ ಅವಧಿಯ ಠೇವಣಿಗಳ ಮೇಲೆ ಮತ್ತು ಅಸ್ತಿತ್ವದಲ್ಲಿರುವ ಠೇವಣಿಗಳ ಮೇಲೆ ಅನ್ವಯವಾಗುತ್ತವೆ.

4) ಹಿರಿಯ ನಾಗರಿಕರಿಗಾಗಿ ಎಸ್‌ಬಿಐ ವಿಶೇಷ ಎಫ್‌ಡಿ ಯೋಜನೆ 2020 ಸೆಪ್ಟೆಂಬರ್ 30 ರವರೆಗೆ ಅನ್ವಯಿಸುತ್ತದೆ.

5) ಎಸ್‌ಬಿಐ ಇದನ್ನು ಗ್ರಾಹಕರಿಗೆ 12 ಮೇ 2020 ರಿಂದ ಲಭ್ಯವಾಗುವಂತೆ ಮಾಡಿತು

ಹಿರಿಯ ನಾಗರಿಕರಿಗೆ ಹೆಚ್ಚುವರಿ 80 ಬಿಪಿಎಸ್ ಬಡ್ಡಿದರ

ಹಿರಿಯ ನಾಗರಿಕರಿಗೆ ಹೆಚ್ಚುವರಿ 80 ಬಿಪಿಎಸ್ ಬಡ್ಡಿದರ

ಎಸ್‌ಬಿಐ ಹಿರಿಯ ನಾಗರಿಕರಿಗೆ ಈ ಠೇವಣಿಗಳ ಮೇಲೆ 80 ಬಿಪಿಎಸ್ ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ. ವಿಶೇಷ ಎಫ್‌ಡಿ ಯೋಜನೆಯಡಿ ಸ್ಥಿರ ಠೇವಣಿ ಇಟ್ಟರೆ, ಎಫ್‌ಡಿಗೆ ಅನ್ವಯವಾಗುವ ಬಡ್ಡಿದರ ಶೇಕಡಾ 6.2ರಷ್ಟು ಆಗಿರುತ್ತದೆ. ಎಸ್‌ಬಿಐ ಮೇ 27 ರಂದು ಎಫ್‌ಡಿಗಳ ಬಡ್ಡಿದರಗಳನ್ನು ಕಡಿತಗೊಳಿಸಿತ್ತು.

ಇನ್ನು ಅಕಾಲಿಕ ಹಿಂಪಡೆಯುವಿಕೆಯ ಮೇಲೆ 30 ಬಿಪಿಎಸ್ ಹೆಚ್ಚುವರಿ ಪ್ರೀಮಿಯಂ ಪಾವತಿಸಲಾಗುವುದಿಲ್ಲ. ಜೊತೆಗೆ ಶೇಕಡಾ 0.5ರಷ್ಟು ದಂಡ ಅನ್ವಯಿಸಬಹುದು. ಗರಿಷ್ಠ ಠೇವಣಿ ಮೊತ್ತವು ಎರಡು ಕೋಟಿಗಿಂತ ಕಡಿಮೆ ಇರಬೇಕು.

ಎಸ್ ಬಿಐ ನೇಮಕಾತಿ 2020: 446 ಹುದ್ದೆಗಳಿಗೆ ಆರ್ಜಿ ಆಹ್ವಾನಎಸ್ ಬಿಐ ನೇಮಕಾತಿ 2020: 446 ಹುದ್ದೆಗಳಿಗೆ ಆರ್ಜಿ ಆಹ್ವಾನ

ಒಂದು ವರ್ಷದೊಳಗಿನ FD ಯೋಜನೆಗಳು

ಒಂದು ವರ್ಷದೊಳಗಿನ FD ಯೋಜನೆಗಳು

7 ದಿನಗಳಿಂದ 45 ದಿನಗಳವರೆಗೆ - 3.4%

46 ದಿನಗಳಿಂದ 179 ದಿನಗಳವರೆಗೆ - 4.4%

180 ದಿನಗಳಿಂದ 210 ದಿನಗಳವರೆಗೆ - 4.9%

211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ - 4.9%

1 ರಿಂದ 10 ವರ್ಷದೊಳಗಿನ FD ಬಡ್ಡಿ ದರಗಳು

1 ರಿಂದ 10 ವರ್ಷದೊಳಗಿನ FD ಬಡ್ಡಿ ದರಗಳು

1 ವರ್ಷದಿಂದ 2 ವರ್ಷಗಳಿಗಿಂತ ಕಡಿಮೆ - 5.6%

2 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ -5.6%

3 ವರ್ಷದಿಂದ 5 ವರ್ಷಗಳಿಗಿಂತ ಕಡಿಮೆ - 5.8%

5 ವರ್ಷಗಳು ಮತ್ತು 10 ವರ್ಷಗಳವರೆಗೆ - 6.2%

English summary
SBI special FD for senior citizens is applicable for tenure of 5 years or more. It will give more benefits to the senior citizens. latest rates here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X