ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್ 01ರಿಂದ ಎಸ್ಬಿಐ ಎಟಿಎಂ ವಿಥ್ ಡ್ರಾದಲ್ಲಿ ಭಾರಿ ಬದಲಾವಣೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 01: ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ) ತನ್ನ ಗ್ರಾಹಕರಿಗೆ ದೀಪಾವಳಿ ಹಬ್ಬಕ್ಕೂ ಮುನ್ನ ಉಡುಗೊರೆಯನ್ನು ನೀಡಿದೆ. ಇದಲ್ಲದೆ, ಆರ್ ಟಿ ಜಿಎಸ್ ಹಾಗೂ ಎನ್ ಇಎಫ್ ಟಿ ಸೌಲಭ್ಯಗಳು ಅಗ್ಗವಾದ ಬೆನ್ನಲ್ಲೇ ಎಟಿಎಂ ವ್ಯವಹಾರದಲ್ಲಿ ಭಾರಿ ಬದಲಾವಣೆ ಅಕ್ಟೋಬರ್ 01ರಿಂದ ಜಾರಿಗೆ ಬರಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ರೆಪೋ ದರದ ಆಧಾರದಲ್ಲಿ ಗೃಹ ಸಾಲ ನೀಡಲು ಆರಂಭಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ತನ್ನ ಗ್ರಾಹಕರಿಗೆ ಶುಭ ಸುದ್ದಿ ನೀಡಿದೆ. ಇದರಿಂದ ಗೃಹ, ವಾಹನ ಸಾಲದ ಮೇಲಿನ ಬಡ್ಡಿದರ, ಇಎಂಐ ದರ ತಗ್ಗಿಸುವ ನಿರೀಕ್ಷೆಯಿದೆ.

Recommended Video

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ಯಾಶ್ ವಿಥ್ ಡ್ರಾವಲ್ ಮಿತಿ ಇಳಿಕೆ | Oneindia Kannada

ಗ್ರಾಹಕರಿಗೆ ದೀಪಾವಳಿ ಕೊಡುಗೆ: ಎಸ್ಬಿಐ ವಿವಿಧ ಸಾಲಗಳ ಬಡ್ಡಿ ದರ ಇಳಿಕೆಗ್ರಾಹಕರಿಗೆ ದೀಪಾವಳಿ ಕೊಡುಗೆ: ಎಸ್ಬಿಐ ವಿವಿಧ ಸಾಲಗಳ ಬಡ್ಡಿ ದರ ಇಳಿಕೆ

ಎಟಿಎಂ ಬಳಕೆಯ ಶುಲ್ಕ ಹಾಗೂ ಹಣ ಕಡಿತದ ಸಂಪೂರ್ಣ ವಿವರಗಳನ್ನು ಪರಿಶೀಲನೆ ನಡೆಸಿ, ಮೆಟ್ರೋ, ಅರೆ ನಗರ ಹಾಗೂ ಗ್ರಾಮಾಂತರ ಶಾಖೆಗಳಿಗೆ ಬೇರೆ ರೀತಿಯ ನಿಯಮಗಳನ್ನು ಜಾರಿಗೆ ಬರಲಿದೆ. ಕೆಲವು ವ್ಯವಹಾರಗಳ ಬಳಿಕ ಪ್ರತಿ ವ್ಯವಹಾರಗಳ ಬಳಿಕ 50 ರು ಪ್ಲಸ್ ಜಿಎಸ್ಟಿ ಜಾರಿಗೆ ಬರಲಿದೆ.

ವಿಥ್ ಡ್ರಾ ಮಿತಿಯಲ್ಲಿ ಬದಲಾವಣೆ: ಅಕ್ಟೋಬರ್ 01ರಿಂದ ಎಸ್ಬಿಐ ಎಟಿಎಂ ವಿಥ್ ಡ್ರಾ ಮಿತಿ 2 ರಿಂದ 15ಕ್ಕೆ ತಗ್ಗಲಿದೆ. ತಿಂಗಳ ಸರಾಸರಿ ಮಿತಿ(ಎಎಂಬಿ) ಬಗ್ಗೆ ಬ್ಯಾಂಕಿನ ವೆಬ್ ತಾಣದಲ್ಲಿ ವಿವರ ಪಡೆಯಬಹುದು. ಜೊತೆಗೆ ಕನಿಷ್ಠ ಮಿತಿ ಬ್ಯಾಲೆನ್ಸ್ ಇಲ್ಲದ ಖಾತೆಯಿಂದ ವ್ಯವಹರಿಸಿದರೆ 20 ರು ಶುಲ್ಕ ಕಟ್ ಆಗಲಿದೆ. ಜೊತೆಗೆ ಎಟಿಎಂಗಳಲ್ಲಿ ಕಾರ್ಡ್ ಲೆಸ್ ನಗದು ಪಾವತಿ ಮಾಡಿದರೆ 22 ರು ಶುಲ್ಕ ಕಟ್ಟಬೇಕಾಗುತ್ತದೆ. ಇನ್ನಷ್ಟು ವಿವರ ನಿರೀಕ್ಷಿಸಿ...

ವಿಥ್ ಡ್ರಾ ಮಿತಿಯಲ್ಲಿ ಬದಲಾವಣೆ

ವಿಥ್ ಡ್ರಾ ಮಿತಿಯಲ್ಲಿ ಬದಲಾವಣೆ

ಅಕ್ಟೋಬರ್ 01ರಿಂದ ಎಸ್ಬಿಐ ಎಟಿಎಂ ವಿಥ್ ಡ್ರಾ ಮಿತಿ 2 ರಿಂದ 15ಕ್ಕೆ ತಗ್ಗಲಿದೆ. ತಿಂಗಳ ಸರಾಸರಿ ಮಿತಿ(ಎಎಂಬಿ) ಬಗ್ಗೆ ಬ್ಯಾಂಕಿನ ವೆಬ್ ತಾಣದಲ್ಲಿ ವಿವರ ಪಡೆಯಬಹುದು. ಜೊತೆಗೆ ಕನಿಷ್ಠ ಮಿತಿ ಬ್ಯಾಲೆನ್ಸ್ ಇಲ್ಲದ ಖಾತೆಯಿಂದ ವ್ಯವಹರಿಸಿದರೆ 20 ರು ಶುಲ್ಕ ಕಟ್ ಆಗಲಿದೆ. ಜೊತೆಗೆ ಎಟಿಎಂಗಳಲ್ಲಿ ಕಾರ್ಡ್ ಲೆಸ್ ನಗದು ಪಾವತಿ ಮಾಡಿದರೆ 22 ರು ಶುಲ್ಕ ಕಟ್ಟಬೇಕಾಗುತ್ತದೆ.

ನಗರ ಪ್ರದೇಶದ ದರ

ನಗರ ಪ್ರದೇಶದ ದರ

* ನಗರ ಪ್ರದೇಶಗಳಲ್ಲಿ ಪ್ರತಿ ತಿಂಗಳ ಬ್ಯಾಲೆನ್ಸ್ ಮಿತಿ (average monthly balance(AMB)) 5,000 ರು ನಿಂದ 3,000 ರು ಗಿಳಿಸಲಾಗಿದೆ.
* AMB ಮಿತಿ ದಾಟಿದ ಖಾತೆದಾರರಿಗೆ
* ಮಿತಿ ಶೇ50ರಷ್ಟು ಕಡಿಮೆಯಾದರೆ 10ರು ಪ್ಲಸ್ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)
* ಶೇ 50ರಿಂದ 75ರಷ್ಟು ಕಡಿಮೆಯಾದರೆ 12 ರು ಪ್ಲಸ್ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)
* ಶೇ 75ರಷ್ಟು ಕಡಿಮೆಯಾದರೆ 15 ರು ಪ್ಲಸ್ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)

ರೆಪೋ ದರ ಇಳಿಕೆ; ಗೃಹ, ವಾಹನ ಸಾಲದ ಬಡ್ಡಿ ದರ ಇಳಿಕೆ?ರೆಪೋ ದರ ಇಳಿಕೆ; ಗೃಹ, ವಾಹನ ಸಾಲದ ಬಡ್ಡಿ ದರ ಇಳಿಕೆ?

ಅರೆ ನಗರ ಪ್ರದೇಶಕ್ಕೆ ದರ ವಿವರ

ಅರೆ ನಗರ ಪ್ರದೇಶಕ್ಕೆ ದರ ವಿವರ

* ಅರೆ ನಗರ ಪ್ರದೇಶಗಳಲ್ಲಿ ಪ್ರತಿ ತಿಂಗಳ ಬ್ಯಾಲೆನ್ಸ್ ಮಿತಿ (average monthly balance(AMB)) 2,000 ರು ಗಿಳಿಸಲಾಗಿದೆ.
* AMB ಮಿತಿ ದಾಟಿದ ಖಾತೆದಾರರಿಗೆ
* ಮಿತಿ ಶೇ50ರಷ್ಟು ಕಡಿಮೆಯಾದರೆ 7.5 ರು ಪ್ಲಸ್ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)
* ಶೇ 50 ರಿಂದ 75ರಷ್ಟು ಕಡಿಮೆಯಾದರೆ 10 ರು ಪ್ಲಸ್ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)
* ಶೇ 75ರಷ್ಟು ಕಡಿಮೆಯಾದರೆ 12 ರು ಪ್ಲಸ್ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)

ಗ್ರಾಮಾಂತರ ಪ್ರದೇಶಕ್ಕೆ ದರ ವಿವರ

ಗ್ರಾಮಾಂತರ ಪ್ರದೇಶಕ್ಕೆ ದರ ವಿವರ

* ಗ್ರಾಮಾಂತರ ಪ್ರದೇಶಗಳಲ್ಲಿ ಪ್ರತಿ ತಿಂಗಳ ಬ್ಯಾಲೆನ್ಸ್ ಮಿತಿ (average monthly balance(AMB)) 1,000 ರು ಗಿಳಿಸಲಾಗಿದೆ.
* AMB ಮಿತಿ ದಾಟಿದ ಖಾತೆದಾರರಿಗೆ
* ಮಿತಿ ಶೇ50ರಷ್ಟು ಕಡಿಮೆಯಾದರೆ 5 ರು ಪ್ಲಸ್ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)
* ಶೇ 50 ರಿಂದ 75ರಷ್ಟು ಕಡಿಮೆಯಾದರೆ 7.5 ರು ಪ್ಲಸ್ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)
* ಶೇ 75ರಷ್ಟು ಕಡಿಮೆಯಾದರೆ 10 ರು ಪ್ಲಸ್ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)

RTGS ಹಾಗೂ NEFT ಬದಲಾವಣೆ

RTGS ಹಾಗೂ NEFT ಬದಲಾವಣೆ

Real Time Gross Settlement (RTGS) ಹಾಗೂ National Electronic Fund Transfer (NEFT) ಡಿಜಿಟಲ್ ಮಾದರಿ ವ್ಯವಹಾರ ಸಂಪೂರ್ಣ ಉಚಿತವಾಗಿದೆ. ಆದರೆ, ಯಾವುದೇ ಬ್ರ್ಯಾಂಚ್ ನಲ್ಲಿ ಈ ಸೇವೆ ಬಳಸಿದರೆ ಶುಲ್ಕ ತೆರಬೇಕಾಗುತ್ತದೆ.
* 2 ಲಕ್ಷ ರು ನಿಂದ 5 ಲಕ್ಷ ರು ತನಕದ RTGSಗೆ 20 ರು ಪ್ಲಸ್ ಜಿಎಸ್ಟಿ, 5 ಲಕ್ಷ ಮೇಲ್ಪಟ್ಟರೆ 40 ರು ಪ್ಲಸ್ ಜಿಎಸ್ಟಿ ತಗುಲಲಿದೆ.
* NEFT 10,000 ರು ತನಕದ ವರ್ಗಾವಣೆಗೆ 2 ರು ಪ್ಲಸ್ ಜಿಎಸ್ಟಿ
* NEFT 10,000 ರು ನಿಂದ 1 ಲಕ್ಷ ರು ತನಕದ ವರ್ಗಾವಣೆಗೆ 4 ರು ಪ್ಲಸ್ ಜಿಎಸ್ಟಿ
* NEFT 1 ಲಕ್ಷ ರು ನಿಂದ 2 ಲಕ್ಷ ರು ತನಕದ ವರ್ಗಾವಣೆಗೆ 12 ರು ಪ್ಲಸ್ ಜಿಎಸ್ಟಿ
* NEFT 2 ಲಕ್ಷ ರು ಮೇಲ್ಪಟ್ಟ ವರ್ಗಾವಣೆಗೆ 20 ರು ಪ್ಲಸ್ ಜಿಎಸ್ಟಿ

English summary
The State Bank of India's (SBI) new ATM withdrawal charges and other service fees come into effect from October 1.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X