ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐಗೆ 2,416 ಕೋಟಿ ನಿವ್ವಳ ನಷ್ಟ, ಎನ್ ಪಿಎ 2 ಲಕ್ಷ ಕೋಟಿ

|
Google Oneindia Kannada News

ಡಿಸೆಂಬರ್ ತ್ರೈ ಮಾಸಿಕಕ್ಕೆ ಭಾರತದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2,416.37 ಕೋಟಿ ರುಪಾಯಿ ನಿವ್ವಳ ನಷ್ಟವನ್ನು ಶುಕ್ರವಾರ ಘೋಷಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಬ್ಯಾಂಕ್ 2,610 ಕೋಟಿ ಲಾಭ ಘೋಷಣೆ ಮಾಡಿತ್ತು. ಪ್ರಾವೀಷನ್ ಮತ್ತು ಕಂಟಿಜನ್ಸಿಸ್ ಎಂದು ಕಳೆದ ವರ್ಷಕ್ಕಿಂತ ಶೇ 111ರಷ್ಟು ಹೆಚ್ಚು ಮಾಡಲಾಗಿದೆ.

ಗ್ರಾಸ್ ನಾನ್ ಪರ್ಫಾರ್ಮಿಂಗ್ ಅಸೆಟ್ಸ್ (ಎನ್ ಪಿಎ) 1.99 ಲಕ್ಷ ಕೋಟಿ ಮುಟ್ಟಿದೆ. ಬಾಂಡ್ ಮೇಲಿನ ಪರಿಣಾಮದಿಂದ ಬ್ಯಾಂಕ್ ನ ನಷ್ಟದ ಪ್ರಮಾಣ ಹೆಚ್ಚಾಗಿದೆ ಎಂದು ಅಧ್ಯಕ್ಷರಾದ ರಜನೀಶ್ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಷೇರು ಬೆಲೆಯಲ್ಲಿ ಶುಕ್ರವಾರ ಶೇ 1.68ರಷ್ಟು ಇಳಿಕೆಯಾಗಿದೆ.

SBI reports Q3 loss at Rs 2,416 crore

ಎಸ್ ಬಿಐ ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡಎಸ್ ಬಿಐ ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಹೈದರಾಬಾದ್, ಬಿಕನೇರ್ ಇತರ ಅಧೀನ ಬ್ಯಾಂಕ್ ಗಳು ವಿಲೀನಗೊಂಡಿವೆ. ಜಾಗತಿಕ ಮಟ್ಟದಲ್ಲೇ ಸ್ಟೇಟ್ ಬ್ಯಾಂಕ್ ಇಂಡಿಯಾ ಅತಿ ದೊಡ್ಡ ಬ್ಯಾಂಕ್ ಆಗಿದೆ. ಆದರೆ ಈ ತ್ರೈ ಮಾಸಿಕ ಅವಧಿಯ ನಿವ್ವಳ ನಷ್ಟದ ಪ್ರಮಾಣ ಆತಂಕಕಾರಿಯಾಗಿದೆ.

English summary
State Bank of India on Friday posted net loss of Rs 2,416.37 crore for quarter ended December 31, 2017 against a net profit of Rs 2,610 crore in the corresponding quarter last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X