ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಬಿಐ 2ನೇ ತ್ರೈಮಾಸಿಕ : ನಿವ್ವಳ ಲಾಭದಲ್ಲಿ ಶೇ 40ರಷ್ಟು ಕುಸಿತ

|
Google Oneindia Kannada News

ಬೆಂಗಳೂರು, ನವೆಂಬರ್ 05: ದೇಶದ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಸೋಮವಾರದಂದು ತನ್ನ ಎರಡನೇ ತ್ರೈಮಾಸಿಕ ವರದಿ ಪ್ರಕಟಿಸಿದೆ. ಜುಲೈ- ಸೆಪ್ಟಂಬರ್ ಅವಧಿಯ ತ್ರೈಮಾಸಿಕ ವರದಿಯಂತೆ ವರ್ಷದಿಂದ ವರ್ಷಕ್ಕೆ ನಿವ್ವಳ ಲಾಭದಲ್ಲಿ ಶೇ 40.3 ರಷ್ಟು ಕುಸಿತ ಕಂಡಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 1,581.55 ಕೋಟಿ ರು ಗಳಿಸಿತ್ತು. ಈ ಬಾರಿ 944.87 ಕೋಟಿ ಗಳಿಸಿದೆ. ಎಸ್ಬಿಐ ಸಂಸ್ಥೆಯ ಒಟ್ಟಾರೆ ಆದಾಯ ಕಳೆದ ವರ್ಷಕ್ಕೆ ಹೋಲಿಸಿದರೆ ಕೊಂಚ ಏರಿಕೆಯಾಗಿದೆ. ಕಳೆದ ವರ್ಷ 65,429.63 ಕೋಟಿ ರು ನಷ್ಟಿತ್ತು. ಈ ತ್ರೈಮಾಸಿಕದ ಅಂತ್ಯಕ್ಕೆ 66,607.98 ಕೋಟಿ ರು ಗಳಿಕೆಯಾಗಿದೆ.

ಅಕ್ಟೋಬರ್ 31ರಿಂದ ಎಸ್ಬಿಐ ವಿಥ್ ಡ್ರಾ ಮಿತಿ ಸೇರಿದಂತೆ ಹಲವು ಬದಲಾವಣೆ ಅಕ್ಟೋಬರ್ 31ರಿಂದ ಎಸ್ಬಿಐ ವಿಥ್ ಡ್ರಾ ಮಿತಿ ಸೇರಿದಂತೆ ಹಲವು ಬದಲಾವಣೆ

ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಎನ್ ಪಿ ಎ(non performing assets) ಉತ್ತಮವಾಗಿದ್ದು, ಶೇ9.95ರಷ್ಟಿದೆ. ಕಳೆದ ತ್ರೈಮಾಸಿಕದಲ್ಲಿ ಶೇ 10.69ರಷ್ಟಿತ್ತು.

SBI Reports 40% Fall In September Quarter Net Profit

ಹಬ್ಬಕ್ಕೂ ಮೊದಲೇ ಗೃಹಸಾಲ ತುಟ್ಟಿ: ಜೇಬಿಗೆ ಬಿತ್ತು ಕತ್ತರಿ ಹಬ್ಬಕ್ಕೂ ಮೊದಲೇ ಗೃಹಸಾಲ ತುಟ್ಟಿ: ಜೇಬಿಗೆ ಬಿತ್ತು ಕತ್ತರಿ

ತ್ರೈಮಾಸಿಕ ವರದಿ ಪ್ರಕಟವಾಗುತ್ತಿದ್ದಂತೆ ಎಸ್ಬಿಐ ಷೇರುಗಳು ಶೇ 5ರಷ್ಟು ಏರಿಕೆ ಕಂಡಿತ್ತು. ಒಟ್ಟಾರೆ ದಿನದ ಅಂತ್ಯಕ್ಕೆ ಶೇ 3.8ರಷ್ಟು ಪ್ರಗತಿ ಪಡೆದುಕೊಂಡಿತ್ತು.

English summary
State Bank of India (SBI), the country's largest lender, on Monday reported a net profit of Rs. 944.87 crore for the July-September period, registering a 40.3 per cent fall from Rs. 1,581.55 crore in the corresponding period a year ago.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X