ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಬಿಐ ಉಳಿತಾಯ ಖಾತೆ ಕನಿಷ್ಟ ಠೇವಣಿ ದರ ಇಳಿಕೆ

By Mahesh
|
Google Oneindia Kannada News

ಬೆಂಗಳೂರು, ಸೆ. 25: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ತನ್ನ ಗ್ರಾಹಕರಿಗೆ ಮತ್ತೊಂದು ಮಹತ್ವದ ಸೂಚನೆಯನ್ನು ಸೋಮವಾರ (ಸೆ. 25) ಪ್ರಕಟಿಸಿದೆ.

ಎಸ್ ಬಿಐನ ಅಧೀನ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಮಹತ್ವ ಸೂಚನೆಎಸ್ ಬಿಐನ ಅಧೀನ ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಮಹತ್ವ ಸೂಚನೆ

ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ (ಎಸ್ ಬಿಐ) ಇತ್ತೀಚೆಗೆ ಸಮ್ಮಿಳಿತಗೊಂಡಿರುವ ಆರು ಬ್ಯಾಂಕುಗಳ ಚೆಕ್ ಲೀಫ್ ಗಳಿಗೆ ಸೆ. 30ರ ನಂತರ ಮಾನ್ಯತೆ ಇರುವುದಿಲ್ಲ ಎಂದು ಇತ್ತೀಚೆಗೆ ಆದೇಶ ಹೊರಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

SBI reduces minimum balance limit to Rs 3,000

ಈಗ ಗ್ರಾಹಕರ ಉಳಿತಾಯ ಖಾತೆ ಠೇವಣಿ ದರವನ್ನು ಇಳಿಕೆ ಮಾಡಿದೆ. ತಿಂಗಳ ಸರಾಸರಿ ಬ್ಯಾಲೆನ್ಸ್(ಎಂಎಬಿ) ಕನಿಷ್ಟ ಠೇವಣಿ ಮೊತ್ತವನ್ನು 5,000 ರು ನಿಂದ 3,000 ರು ಗಳಿಗೆ ಇಳಿಸಲಾಗಿದೆ. ಹೊಸ ನಿಯಮ ಅಕ್ಟೋಬರ್ 01, 2017ರಿಂದ ಜಾರಿಗೆ ಬರಲಿದೆ.

ನಗರ ಪ್ರದೇಶ, ಗ್ರಾಮಾಂತರ ಪ್ರದೇಶಗಳಿಗೆ ಬೇರೆ ಬೇರೆ ದರಗಳನ್ನು ನಿಗದಿಪಡಿಸಲಾಗಿದೆ. ಹಾಲಿ ನಿರ್ವಹಣಾ ಶುಲ್ಕ 25 ರಿಂದ 75ರು ದರವನ್ನು 20 ರಿಂದ 40 ರು ಗಳಿಗೆ ಇಳಿಸಲಾಗಿದೆ.

ಪ್ರಧಾನಿ ಅವರ ಜನಧನ ಯೋಜನೆಗೆ ಅನುಗುಣವಾಗಿ ಸಣ್ಣ ಖಾತೆ, ಮಕ್ಕಳ ಖಾತೆ, ಹಿರಿಯ ನಾಗರಿಕರ ಖಾತೆ, ಪಿಂಚಣಿದಾರರಿಗೆ non-maintenance of Monthly Average Balance ಶುಲ್ಕದಿಂದ ಮುಕ್ತಿ ಸಿಕ್ಕಿದೆ.

English summary
State Bank of India (SBI), country’s largest bank, has reduced minimum monthly average balance (MAB) on savings accounts for metros from Rs 5,000 to Rs 3,000. New rules will be effective from October 01, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X