ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಯಲ್ ಎಸ್ಟೇಟ್‌ಗೆ ಚೇತರಿಕೆ ನೀಡಲು ಎಸ್‌ಬಿಐ ಆನ್‌ಲೈನ್ ಹೋಮ್ ಕಾರ್ನಿವಲ್

|
Google Oneindia Kannada News

ಬೆಂಗಳೂರು, ಆಗಸ್ಟ್‌ 21: ಕೊರೊನಾವೈರಸ್‌ದಿಂದಾಗಿ ಕಮರಿ ಹೋಗಿರುವ ರಿಯಲ್‌ ಎಸ್ಟೇಟ್‌ಗೆ ಚೇತರಿಕೆ ನೀಡಲು ಭಾರತದ ಅತಿ ದೊಡ್ಡ ಸರ್ಕಾರಿ ಬ್ಯಾಂಕ್, ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಬೆಂಗಳೂರಿನಲ್ಲಿ ಇದೇ ತಿಂಗಳು 24 ರಿಂದ ಆನ್‌ಲೈನ್ ಹೋಮ್ ಕಾರ್ನಿವಲ್ ಹಮ್ಮಿಕೊಂಡಿದೆ. ಎಸ್‌ಬಿಐ ಇದಕ್ಕಾಗಿ ಆನ್‌ಲೈನ್ ಕಂಪನಿ ಅಡ್ಡಾಕಾರ್ನರ್ ಜೊತೆ ಪಾಲುದಾರಿಕೆ ಹೊಂದಿದೆ.

Recommended Video

ಅಭಿಮಾನಿಗಳ ಮುಂದೆ ಬೇಡಿಕೆ ಇಟ್ಟ Sachin Tendulkar | Oneindia Kannada

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಿಯಲ್‌ ಎಸ್ಟೇಟ್‌ಗೆ ಬೂಸ್ಟ್‌ ನೀಡುವ ಉದ್ದೇಶದೊಂದಿಗೆ ಇದನ್ನು ಆಯೋಜಿಸಲಾಗುತ್ತಿದೆ. ಜನರು ಮನೆಯಿಂದಲೇ ಅಡ್ಡಾಕಾರ್ನರ್ ವೆಬ್‌ಸೈಟ್‌ಗೆ ಭೇಟಿ ನೀಡಿ ಅಲ್ಲಿರುವಂತಹ ವಸತಿ ಯೋಜನೆಗಳ ಮಾಹಿತಿ ಪಡೆಯಬಹುದಾಗಿದೆ.

ಬಾಂಡ್‌ ಮಾರಾಟದ ಮೂಲಕ 8,931 ಕೋಟಿ ಸಂಗ್ರಹಿಸಿದ ಎಸ್‌ಬಿಐಬಾಂಡ್‌ ಮಾರಾಟದ ಮೂಲಕ 8,931 ಕೋಟಿ ಸಂಗ್ರಹಿಸಿದ ಎಸ್‌ಬಿಐ

ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ಪಡೆಯುವದಷ್ಟೇ ಅಲ್ಲದೆ ಮಾರಾಟಗಾರರೊಂದಿಗೆ ನೇರವಾಗಿ ಸಂಪರ್ಕ ಸಾಧಿಸಬಹುದಾಗಿದ್ದು, ಬೆಲೆಯ ಕುರಿತು ಮಾಹಿತಿಯನ್ನು ಪಡೆಯಬಹುದು.

SBI Online Home Carnival: Partnership With E Platform Addacorner

''ಆನ್‌ಲೈನ್ ಪ್ರಕ್ರಿಯೆ ಆರಂಭವಾಗಿದ್ದು, ಮನೆ ಖರೀದಿಸಲು ಆಸಕ್ತಿ ಹೊಂದಿರುವವರ ಬೇಡಿಕೆಯು ದಿನೇ ದಿನೇ ಚೇತರಿಕೆ ಕಾಣುತ್ತಿದೆ. ಆರ್‌ಬಿಐ ರೆಪೋ ದರ ಕಡಿತಗೊಳಿಸಿದ್ದು, ಗೃಹ ಸಾಲದ ಮೇಲಿನ ಬಡ್ಡಿದರಗಳು ಕಡಿಮೆ ಮಟ್ಟದಲ್ಲಿವೆ. ಮನೆ ಖರೀದಿಸುವವರಿಗೆ ಇದು ಸೂಕ್ತ ಸಮಯ'' ಎಂದು ಎಸ್‌ಬಿಐನ ಸಿಜಿಎಂ ಅಭಿಜಿತ್ ಮಜುಂದಾರ್ ಹೇಳಿದ್ದಾರೆ.

ಎಸ್‌ಬಿಐ ಆನ್‌ಲೈನ್ ಹೋಮ್ ಕಾರ್ನಿವಲ್ ಜೊತೆಗೆ ಪಾಲುದಾರಿಕೆ ಹೊಂದುವುದರ ಮೂಲಕ ಮನೆ ಖರೀದಿಸುವ ಜನರು ಬೆಲೆಯ ಬಗ್ಗೆ ಚೌಕಾಸಿ ಮಾಡಲು ಸಾಧ್ಯವಾಗಿದೆ. ಮನೆ ಖರೀದಿ ಆಸಕ್ತಿ ಉಳ್ಳ ಹಲವರು ಸೇರಿಕೊಂಡರೆ ಆಗ ಬೆಲೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು.

English summary
SBI Unveils ots Online home carnival in Partnership With India's First Real time Group Negotiation E Platform Addacorner
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X