ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಬಿಐ ಮುಂದಿನ ಅಧ್ಯಕ್ಷರಾಗಿ ದಿನೇಶ್ ಕುಮಾರ್ ಖರಾ ಹೆಸರು ಶಿಫಾರಸು

|
Google Oneindia Kannada News

ನವದೆಹಲಿ, ಆಗಸ್ಟ್‌ 29: ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಮುಂದಿನ ಅಧ್ಯಕ್ಷರಾಗಿ ಸಂಸ್ಥೆಯ ಹಿರಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ದಿನೇಶ್ ಕುಮಾರ್ ಖರಾ ಹೆಸರನ್ನು 'ಬ್ಯಾಂಕ್ಸ್‌ ಬೋರ್ಡ್ ಬ್ಯೂರೋ (ಬಿಬಿಬಿ) ಶಿಫಾರಸು ಮಾಡಿದೆ.

ಈಗಿರುವ ಹಾಲಿ ಅಧ್ಯಕ್ಷ ರಜನೀಶ್ ಕುಮಾರ್ ಅವರ ಮೂರು ವರ್ಷದ ಅವಧಿ ಅಕ್ಟೋಬರ್ 7ರಂದು ಕೊನೆಗೊಳ್ಳಲಿದೆ. ಹೀಗಾಗಿ ಹೊಸ ಅಧ್ಯಕ್ಷರನ್ನು ಬ್ಯೂರೋ ಶಿಫಾರಸು ಮಾಡಿದೆ.

ಬಾಂಡ್‌ ಮಾರಾಟದ ಮೂಲಕ 8,931 ಕೋಟಿ ಸಂಗ್ರಹಿಸಿದ ಎಸ್‌ಬಿಐಬಾಂಡ್‌ ಮಾರಾಟದ ಮೂಲಕ 8,931 ಕೋಟಿ ಸಂಗ್ರಹಿಸಿದ ಎಸ್‌ಬಿಐ

ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಸ್‌ಬಿಐ ಮತ್ತು ಹಣಕಾಸು ಸಂಸ್ಥೆಗಳ ಅಧ್ಯಕ್ಷ ಹುದ್ದೆಗೆ ನೇಮಕಾತಿ ನಡೆಸುವ 'ಬಿಬಿಬಿ' ಸದಸ್ಯರು ಶುಕ್ರವಾರ ಎಸ್‌ಬಿಐನ ನಾಲ್ವರು ಹಿರಿಯ ವ್ಯವಸ್ಥಾಪಕ ನಿರ್ದೇಶಕರನ್ನು ಸಂದರ್ಶನ ನಡೆಸಿದ ಬಳಿಕ ಅಂತಿಮವಾಗಿ ದಿನೇಶ್ ಕುಮಾರ್ ಖರಾ ಹೆಸರನ್ನು ಶಿಫಾರಸು ಮಾಡಲಾಗಿದೆ.

SBI Next Chairman: BBB Recommended Dinesh Kumar Khara As The Chairman

'ಬಿಬಿಬಿ' ಶಿಫಾರಸನ್ನು ಸರ್ಕಾರಕ್ಕೆ ಕಳುಹಿಸಲಾಗುತ್ತದೆ. ಆನಂತರ ಕೇಂದ್ರ ಸಚಿವಸಂಪುಟದ ನೇಮಕಾತಿ ಸಮಿತಿಯು ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ.

English summary
The Banks Board Bureau (BBB) on Friday recommended Dinesh Kumar Khara as the Chairman, State Bank of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X