ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

SBI ಹೊಸ ಮಂತ್ರ: ಉದ್ಯೋಗಿಗಳಿಗೆ ವರ್ಕ್ ಫ್ರಮ್ ಎನಿವೇರ್ ಸೌಲಭ್ಯ

|
Google Oneindia Kannada News

ನವದೆಹಲಿ, ಜೂನ್ 22: ದೇಶದ ಬಹುದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ತನ್ನ ಉದ್ಯೋಗಿಗಳಿಗೆ ಎಲ್ಲಿಂದ ಬೇಕಾದರು ಕೆಲಸ ಮಾಡುವಂತ(ವರ್ಕ್ ಫ್ರಮ್ ಎನಿವೇರ್) ಸೌಲಭ್ಯವನ್ನು ಸದ್ಯದಲ್ಲೇ ನೀಡಲಿದೆ. ಸದ್ಯ ವರ್ಕ್ ಫ್ರಮ್ ಹೋಮ್ ಪ್ರಚಲಿತದಲ್ಲಿದ್ದು, ಎಸ್‌ಬಿಐ ಕೂಡ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.

ಕೋವಿಡ್-19 ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಸವಾಲುಗಳನ್ನು ಎದುರಿಸಲು, ವ್ಯವಹಾರದ ದೃಷ್ಟಿಯಿಂದ, ಮುಂದಿನ ದಿನಗಳಲ್ಲಿ ಬ್ಯಾಂಕಿನ ಗಮನವು ಡಿಜಿಟಲ್ ತಂತ್ರಜ್ಞಾನವನ್ನು ಶೀಘ್ರವಾಗಿ ಅಳವಡಿಸಿಕೊಳ್ಳುವುದರ ಜೊತೆಗೆ ಅಪಾಯದ ಮೌಲ್ಯಮಾಪನ ಮತ್ತು ವ್ಯವಹಾರ ಕಾರ್ಯವಿಧಾನಗಳನ್ನು ಮರುಪರಿಶೀಲಿಸುವತ್ತ ಇರುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವಾರ್ಷಿಕ ವರದಿ ತಿಳಿಸಿದೆ.

SBI ಚಿನ್ನದ ಮೇಲಿನ ಸಾಲ ಯೋಜನೆ: ಬಡ್ಡಿದರ, ಅರ್ಹತೆ, ಪಾವತಿ ಆಯ್ಕೆಯ ಕುರಿತು ಮಾಹಿತಿ ಇಲ್ಲಿದೆSBI ಚಿನ್ನದ ಮೇಲಿನ ಸಾಲ ಯೋಜನೆ: ಬಡ್ಡಿದರ, ಅರ್ಹತೆ, ಪಾವತಿ ಆಯ್ಕೆಯ ಕುರಿತು ಮಾಹಿತಿ ಇಲ್ಲಿದೆ

2.5 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ಎಸ್‌ಬಿಐ, ತನ್ನ 'ವರ್ಕ್ ಫ್ರಮ್‌ ಹೋಮ್‌' ವ್ಯವಸ್ಥೆಯನ್ನು 'ವರ್ಕ್ ಫ್ರಮ್‌ ಎನಿವೇರ್‌'ಗೆ ಉನ್ನತೀಕರಿಸುತ್ತಿದೆ. ಈಗಾಗಲೇ, 19 ವಿದೇಶಿ ಕಚೇರಿಗಳಲ್ಲಿ ಈ ವ್ಯವಸ್ಥೆಯನ್ನು ಎಸ್‌ಬಿಐ ಜಾರಿಗೊಳಿಸಿದೆ.

SBI New Stage:Work From Anywhere For Employees Amid Pandemic

ಷೇರುದಾರರಿಗೆ ಬರೆದಿರುವ ಪತ್ರದಲ್ಲಿಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ಈ ಬಗ್ಗೆ ಪ್ರಸ್ತಾಪಿಸಿದ್ದಾರೆ. ''ಉತ್ಪಾದಕತೆ ಮತ್ತು ತಾಂತ್ರಿಕತೆ ಸಾಧನಗಳು ಸಿಬ್ಬಂದಿಯ ಕೆಲಸವನ್ನು ಸುಲಭಗೊಳಿಸಿವೆ. ವರ್ಕ್ ಫ್ರಮ್‌ ಎನಿವೇರ್‌ (ಡಬ್ಲ್ಯುಎಫ್‌ಎ) ನೀತಿಯು ಉದ್ಯೋಗಿಗಳ ಸಮಯವನ್ನು ಉಳಿಸುತ್ತದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಲೇ ಕೆಲಸ-ಮನೆ ನಡುವೆ ಸಮತೋಲನ ಕಾಯ್ದುಕೊಳ್ಳಲು ಉದ್ಯೋಗಿಗಳಿಗೆ ಡಬ್ಲ್ಯುಎಫ್‌ಎ ಸಾಥ್‌ ನೀಡುತ್ತದೆ,'' ಎಂದಿದ್ದಾರೆ.

ಸಿಬ್ಬಂದಿಗೆ ವರ್ಕ್ ಫ್ರಮ್ ಎನಿವೇರ್ ಸೌಲಭ್ಯ ನೀಡುತ್ತಿರುವ ಮೊದಲ ಸರಕಾರಿ ಸ್ವಾಮ್ಯದ ಬ್ಯಾಂಕ್‌ ಎಸ್‌ಬಿಐ ಆಗಲಿದೆ.

English summary
The country's leading lender SBI is upgrading its existing work-from-home policy to work-from-anywhere, as it gears up to adjust to the new challenges posed by COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X