• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಾಲ ಮರುಪಾವತಿಸದ ಹಿನ್ನೆಲೆ: ಅನಿಲ್ ಅಂಬಾನಿ ವಿರುದ್ಧ NCLT ಮೆಟ್ಟಿಲೇರಿದ SBI

|

ಮುಂಬೈ, ಜೂನ್ 12: ಅನಿಲ್ ಅಂಬಾನಿ ನೇತೃತ್ವದ ಕಂಪನಿಗಳಿಗೆ ಸಾಲ ಕೊಟ್ಟು ವಾಪಸ್ ಪಡೆಯಲು ಹೆಣಗಾಡುತ್ತಿರುವ ಎಸ್‌ಬಿಐ ಸಾಲ ವಸೂಲಿಗಾಗಿ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಎನ್ ಸಿಎಲ್ ಟಿ) ಮೆಟ್ಟಿಲೇರಿದೆ.

   Corona patient body get exchanged in Hyderabad | Oneindia Kannada

   ಸದ್ಯ ಭಾರತದ ಹಿರಿಯ ಉದ್ಯಮಿ ಅನಿಲ್ ಅಂಬಾನಿ ನಷ್ಟದ ಸುಳಿಯಲ್ಲಿ ಸಿಲುಕಿದ್ದು ಅವರ ವ್ಯವಹಾರ ಜೀವನದ ಅತ್ಯಂತ ಕಠಿಣ ಹಂತದಲ್ಲಿದ್ದಾರೆ. ಈಗ ಸಾಲದ ಬಿಕ್ಕಟ್ಟಿನಿಂದ ಸುತ್ತುವರೆದಿರುವ ಅನಿಲ್ ಅಂಬಾನಿ ಈಗ ಹೊಸ ಬಿಕ್ಕಟ್ಟನ್ನು ಎದುರಿಸಿದ್ದಾರೆ. ಅನಿಲ್ ಅಂಬಾನಿಯಿಂದ ಸಾಲವನ್ನು ವಸೂಲಿ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎನ್‌ಸಿಎಲ್‌ಟಿ ಕದ ತಟ್ಟಿದೆ.

   ಅನಿಲ್ ಅಂಬಾನಿಗೆ ಸಮನ್ಸ್ ಜಾರಿ ಮಾಡಿದ ಇಡಿ ಇಲಾಖೆ

   ಹೌದು, ದಿವಾಳಿತನದ ಕಾನೂನಿನ ವೈಯಕ್ತಿಕ ಖಾತರಿ ಕಾಯ್ದೆಯನ್ನು ಉಲ್ಲೇಖಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಈಗ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯನ್ನು (ಎನ್‌ಸಿಎಲ್‌ಟಿ) ಸಂಪರ್ಕಿಸಿದೆ. ವೈಯಕ್ತಿಕ ಖಾತರಿ ಕಾಯ್ದೆಯಡಿ ರಿಲಯನ್ಸ್ ಕಮ್ಯುನಿಕೇಷನ್ (ಆರ್‌ಕಾಮ್) ಗೆ ನೀಡಲಾದ ಕಾರ್ಪೊರೇಟ್ ಸಾಲಗಳಿಗಾಗಿ ಅನಿಲ್ ಅಂಬಾನಿಯಿಂದ 1,200 ಕೋಟಿ ರುಪಾಯಿ ಕೋರಿ ಎಸ್‌ಬಿಐ ಎನ್‌ಸಿಎಲ್‌ಟಿಗೆ ಪ್ರಕರಣ ದಾಖಲಿಸಿದೆ.

   ಈ ವ್ಯಾಜ್ಯ ಬಗೆಹರಿಸಲು ವೃತ್ತಿಪರರೊಬ್ಬರನ್ನು ನಿಯೋಜಿಸಬೇಕು ಎಂದು ಕೇಳಿಕೊಳ್ಳಲಾಗಿದೆ. ಈ ಪ್ರಕರಣದ ಪಟ್ಟಿಯು ಎನ್‌ಸಿಎಲ್ ಟಿ ನವದೆಹಲಿಯ ಮುಖ್ಯಪೀಠದ ವೆಬ್ ಸೈಟ್ ನಲ್ಲಿದೆ. ತುರ್ತು ಅಹವಾಲಿಗೆ ಕೇಳಿಕೊಂಡು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎರಡು ಪ್ರಕರಣ ದಾಖಲಿಸಿದೆ.

   ರಿಲಯನ್ಸ್ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ

   ಅನಿಲ್ ಅಂಬಾನಿಗೆ ಸೇರಿದ ಆಸ್ತಿಗಳನ್ನು ಅಂತರರಾಷ್ಟ್ರೀಯ ಸಾಲಗಾರರು(ಚೀನಾ ಬ್ಯಾಂಕ್‌ಗಳು) ವಶಕ್ಕೆ ಪಡೆಯುವ ಮೊದಲು ಅದರಲ್ಲಿ ತನ್ನ ಪಾಲನ್ನು ಪಡೆಯಬೇಕು ಎಂಬ ಗುರಿ ಹೊಂದಿದೆ ಎಂದು ಬ್ಯಾಂಕಿಂಗ್ ಮೂಲಗಳು ತಿಳಿಸಿವೆ. ಕಳೆದ ತಿಂಗಳು ಯು.ಕೆ. ಕೋರ್ಟ್ 717 ಮಿಲಿಯನ್ ಅಮೆರಿಕನ್ ಡಾಲರ್ ಅನ್ನು ಮೂರು ಚೈನೀಸ್ ಬ್ಯಾಂಕ್ ಗಳಿಗೆ ಪಾವತಿಸುವಂತೆ ಸೂಚಿಸಿತ್ತು. ಭಾರತದ ರುಪಾಯಿ ಲೆಕ್ಕದಲ್ಲಿ 5,400 ಕೋಟಿಗೂ ಹೆಚ್ಚು ಮೊತ್ತವಾಗುತ್ತದೆ. ಇದು ಆ ಬ್ಯಾಂಕ್ ಗಳಿಗೆ ವಸೂಲಾಗಬೇಕಾದ ಮೊತ್ತ. ಆದರೆ ಈ ಸಾಲದಲ್ಲಿ ಅನಿಲ್ ಅಂಬಾನಿ ಗ್ಯಾರಂಟಿ ಅಂತ ಇರುವುದು 1200ರಿಂದ 1300 ಕೋಟಿ ರುಪಾಯಿಗೆ ಎಂದು ಹೇಳಲಾಗುತ್ತಿದೆ.

   English summary
   SBI has moved the National Company Law Tribunal (NCLT) seeking to recover loans disbursed to the Anil Ambani-led group of companies from Personal Guarantee Given By Anil Ambani
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X