• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯ ಸ್ಟೇಟ್ ಬ್ಯಾಂಕ್ ಸಾಲ ಕಂತು ಮುಂದೂಡಿಕೆ!

|
Google Oneindia Kannada News

ಮುಂಬೈ, ಸೆ 22: ಭಾರತದ ಅತಿದೊಡ್ಡ ಸರ್ಕಾರಿ ಸ್ವಾಮ್ಯ ಬ್ಯಾಂಕಿನಿಂದ ಗ್ರಾಹಕರಿಗೆ ಶುಭ ಸುದ್ದಿ ಸಿಕ್ಕಿದೆ. ಭಾರತೀಯ ಸ್ಟೇಟ್ ಬ್ಯಾಂಕ್ ಎರಡು ವರ್ಷಗಳವರೆಗೆ ಕಂತು ಮುಂದೂಡಿಕೆ ಸೌಲಭ್ಯವನ್ನು ಪ್ರಕಟಿಸಿದೆ. ಇದು ಎಲ್ಲ ಬಗೆಯ ಗೃಹ ಮತ್ತು ಚಿಲ್ಲರೆ(retail) ಸಾಲದಾರರಿಗೆ ಅನ್ವಯವಾಗಲಿದೆ.

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಈ ಪ್ರಕಟಣೆ ಹೊರಡಿಸಲಾಗಿದ್ದು, ಈ ಸೌಲಭ್ಯದ ಅನ್ವಯ ಕಂತು ಪಾವತಿಯ ಮರು ಹೊಂದಾಣಿಕೆ ಮತ್ತು ಮುಂದೂಡಿದ ಅವಧಿ ಸೇರಿಸಿ ಸಾಲಮರುಪಾವತಿ ಅವಧಿಯನ್ನು ವಿಸ್ತರಿಸಲಾಗಿದೆ.

ಸೆ.18ರಿಂದ ಎಸ್ಬಿಐ ಒಟಿಪಿ ಆಧಾರಿತ ವಿಥ್ ಡ್ರಾ ನಿಯಮ ಬದಲಾವಣೆಸೆ.18ರಿಂದ ಎಸ್ಬಿಐ ಒಟಿಪಿ ಆಧಾರಿತ ವಿಥ್ ಡ್ರಾ ನಿಯಮ ಬದಲಾವಣೆ

ಕಂತು ಮುಂದೂಡಿಕೆ ಅವಧಿಯನ್ನು ಗರಿಷ್ಠ 2 ವರ್ಷಗಳ ವರೆಗೆ ಮುಂದೂಡಲಾಗಿದ್ದು, ಎಸ್ಬಿಐ ನಂತರ ಸಾರ್ವಜನಿಕ ವಲಯದ ಇತರೆ ಬ್ಯಾಂಕ್‌ಗಳು ಕೂಡಾ ಸಾಲದ ಕಂತು ಅವಧಿ ಮರು ಹೊಂದಾಣಿಕೆ ಮಾಡುವ ಸಾಧ್ಯತೆ ಹೆಚ್ಚಿದೆ.

''ಗ್ರಾಹಕರ ಆರ್ಥಿಕ ಪರಿಸ್ಥಿತಿ ಯಾವಾಗ ಸಹಜ ಸ್ಥಿತಿಗೆ ಬರಬಹುದು ಅಥವಾ ಮತ್ತೆ ಯಾವಾಗ ಉದ್ಯೋಗಕ್ಕೆ ಸೇರಿಕೊಳ್ಳಬಹುದು ಎಂಬುದರ ಬಗ್ಗೆ ನೀಡಿದ ಮಾಹಿತಿ ಆಧಾರದ ಮೇಲೆ ಸಾಲ ಮರುಹೊಂದಾಣಿಕೆ ಮಾಡಲಾಗುತ್ತದೆ'' ಎಂದು ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ಸಿ.ಎಸ್.ಶೆಟ್ಟಿ ಹೇಳಿದರು.

2020ರ ಮಾರ್ಚ್ 1ಕ್ಕಿಂತ ಮೊದಲು ಸಾಲ ಪಡೆದ ಹಾಗೂ ಕೋವಿಡ್-19 ಲಾಕ್‌ಡೌನ್‌ವರೆಗೆ ಸಾಲಮರುಪಾವತಿ ಕಂತನ್ನು ನಿಗದಿತ ಅವಧಿಯಲ್ಲಿ ಕಟ್ಟುತ್ತಾ ಬಂದಿರು ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ. ಆರ್‌ಬಿಐನ ಒಂದು ಬಾರಿಯ ಪರಿಹಾರ ಕ್ರಮಕ್ಕೆ ಅನುಸಾರವಾಗಿ ಈ ಸೌಲಭ್ಯ ಘೋಷಿಸಲಾಗಿದೆ.

SBI ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರ ಕಡಿತSBI ಫಿಕ್ಸೆಡ್ ಡೆಪಾಸಿಟ್ ಬಡ್ಡಿ ದರ ಕಡಿತ

   Chahal ಎಸೆತಕ್ಕೆ Sun Risers ತತ್ತರ!! | Oneindia Kannada

   ಈ ಸೌಲಭ್ಯ ಪಡೆಯಲು ಗ್ರಾಹಕರು, ಕೋವಿಡ್-19 ಸಾಂಕ್ರಾಮಿಕದಿಂದ ತಮ್ಮ ಆದಾಯಕ್ಕೆ ಏಟು ಬಿದ್ದಿದೆ ಎನ್ನುವುದನ್ನು ಸಾಬೀತುಪಡಿಸಬೇಕಾಗುತ್ತದೆ. ಎಸ್ಬಿಐ ಬ್ಯಾಂಕಿನ ಅಧಿಕೃತ ವೆಬ್ ತಾಣಕ್ಕೆ ತೆರಳಿ ಈ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಸಮೀಪದ ಬ್ರ್ಯಾಂಚಿಗೆ ತೆರಳಿ ಅಗತ್ಯ ದಾಖಲೆ ಒದಗಿಸಬೇಕಾಗುತ್ತದೆ ಎಂದು ಎಸ್ಬಿಐ ತಿಳಿಸಿದೆ.

   English summary
   SBI loan restructuring: Bank Offers two year repayment relief for home and retail loans.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X