ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೆಬಿಡ್ ಕಾರ್ಡ್ ಇಎಂಐಗೆ ಚಾಲನೆ ನೀಡಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

|
Google Oneindia Kannada News

ಮುಂಬೈ, ಅಕ್ಟೋಬರ್ 10: ಈ ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಪರಿಪೂರ್ಣ ಮತ್ತು ಕೈಗೆಟುಕುವ ಶಾಪಿಂಗ್ ಅನುಭವ ಒದಗಿಸುವ ದೃಷ್ಟಿಯಿಂದ, ದೇಶದ ಅತಿದೊಡ್ಡ ಸಾಲ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ "ಡೆಬಿಟ್ ಕಾರ್ಡ್ ಇಎಂಐ" ಸೌಲಭ್ಯವನ್ನು ತನ್ನ ಹಾಲಿ ಇರುವ ಗ್ರಾಹಕರಿಗಾಗಿ ಆರಂಭಿಸಿದೆ.

ಈ ಸೇವೆಯಡಿ, ಗ್ರಾಹಕರು ಆರು ತಿಂಗಳಿನಿಂದ ಹಿಡಿದು 18 ತಿಂಗಳವರೆಗೆ ಇಎಂಐ ಕಾಲಾವಧಿಯನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ದೇಶದ 1500ಕ್ಕೂ ಹೆಚ್ಚು ನಗರಗಳಲ್ಲಿರುವ 40 ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳ ಮೂಲಕ ಪೈನ್‍ಲ್ಯಾಬ್ ಬ್ರಾಂಡ್‍ನ ಪಿಓಎಸ್ ಯಂತ್ರಗಳ ಸಹಾಯದಿಂದ ಗ್ರಾಹಕರು ಅಗತ್ಯ ವಸ್ತುಗಳನ್ನು ಖರೀದಿ ಮಾಡಿಕೊಳ್ಳಲು ಅವಕಾಶವಿದೆ.

ಎಸ್ಬಿಐ ಎಟಿಎಂ ವಿಥ್ ಡ್ರಾ ರಗಳೆ ಬಿಡಿ, ಕಾರ್ಡ್ ಇಲ್ಲದೆ ಕ್ಯಾಶ್ ಪಡೆಯಿರಿಎಸ್ಬಿಐ ಎಟಿಎಂ ವಿಥ್ ಡ್ರಾ ರಗಳೆ ಬಿಡಿ, ಕಾರ್ಡ್ ಇಲ್ಲದೆ ಕ್ಯಾಶ್ ಪಡೆಯಿರಿ

ಈ ಸಂದರ್ಭದಲ್ಲಿ ಮಾತನಾಡಿದ ಎಸ್‍ಬಿಐ ಅಧ್ಯಕ್ಷ ರಜನೀಶ್ ಕುಮಾರ್, "ನಮ್ಮ ಗ್ರಾಹಕರಿಗೆ ಈ ವಿನೂತನ ಉತ್ಪನ್ನ ಬಿಡುಗಡೆ ಮಾಡಲು ನಮಗೆ ಅತೀವ ಸಂತಸವಾಗುತ್ತಿದೆ. ಈ ಮೂಲಕ ಅವರು ಹಬ್ಬದ ಪ್ರಸಕ್ತ ಋತುವಿನಲ್ಲಿ ಆನಂದದಾಯಕ ಶಾಪಿಂಗ್ ಅನುಭವ ಆಸ್ವಾದಿಸಬಹುದಾಗಿದೆ. ಎಬಿಡ್ ಖಾರ್ಡ್ ಇಎಂಐ, ಗ್ರಾಹಕರಿಗೆ, ತಮ್ಮ ಡೆಬಿಡ್‍ಕಾರ್ಡ್ ಬಳಸಿಕೊಂಡೇ, ತಕ್ಷಣವೇ ಸಂಪೂರ್ಣ ಹಣವನ್ನು ಪಾವತಿಸದೇ, ಭಾರತದ ವಿವಿಧ ವ್ಯಾಪಾರಿ ಮಳಿಗೆಗಳಲ್ಲಿ ಇಎಂಐ ಮೂಲಕ ಅಗತ್ಯ ಗ್ರಾಹಕ ಸರಕುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲಿದೆ. ಈ ವಿನೂತನ ಕ್ರಮದ ಮೂಲಕ ಎಸ್‍ಬಿಐ, ಗ್ರಾಹಕರ ಅನುಕೂಲತೆ ಮತ್ತು ತೃಪ್ತಿಯನ್ನು ಒದಗಿಸುವ ತನ್ನ ಬದ್ಧತೆಯನ್ನು ಪ್ರದರ್ಶಿಸಿದೆ. ಈ ಹೊಸ ಉತ್ಪನ್ನದ ಬಿಡುಗಡೆಯು, ಆಹ್ಲಾದಕರ ಮತ್ತು ಯಾವುದೇ ಅಡೆ ತಡೆ ಇಲ್ಲದ ಮುಕ್ತ ಖರೀದಿ ಮತ್ತು ಕಾಗದರಹಿತ ಸಾಲ ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ" ಎಂದು ಬಣ್ಣಿಸಿದರು.

SBI launches Debit card EMI on POS

ಈ ವಿನೂತನ ಕ್ರಮದಿಂದ ಗ್ರಾಹಕರಿಗೆ ದೊರಕುವ ಕೆಲ ಪ್ರಯೋಜನಗಳೆಂದರೆ, ಶೂನ್ಯ ದಾಖಲೀಕರಣ, ಸಂಸ್ಕರಣಾ ಶುಲ್ಕವಿಲ್ಲದೇ, ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡದೇ, ಈ ಸೌಲಭ್ಯವನ್ನು ಬಳಸಿಕೊಂಡು ತಕ್ಷಣವೇ ವಿತರಿಸಲು ಸಾಧ್ಯವಾಗಲಿದೆ. ಜತೆಗೆ ಕೆಲ ಆಯ್ದ ಬ್ರಾಂಡ್‍ಗಳಲ್ಲಿ ವಹಿವಾಟು ಶುಲ್ಕ ಶೂನ್ಯವಾಗಿರುತ್ತದೆ. ಈ ಸೌಲಭ್ಯವು ಒಂದು ನಿಮಿಷದ ಒಳಗಾಗಿ ಗ್ರಾಹಕರಿಗೆ ಸಿಗಲಿದ್ದು, ಅವರ ಉಳಿತಾಯ ಖಾತೆಯಲ್ಲಿ ಎಷ್ಟೇ ಹಣ ಇದ್ದರೂ ಈ ಸೌಲಭ್ಯಕ್ಕೆ ಅರ್ಹರಾಗುತ್ತಾರೆ. ವಹಿವಾಟು ಪೂಣಗೊಂಡ ಒಂದು ತಿಂಗಳ ಬಳಿಕ ಇಎಂಟಿ ಪಾವತಿ ಆರಂಭವಾಗುತ್ತದೆ.

ಎಸ್ಬಿಐ ಎಟಿಎಂ ವಿಥ್ ಡ್ರಾದಲ್ಲಿ ಭಾರಿ ಬದಲಾವಣೆಎಸ್ಬಿಐ ಎಟಿಎಂ ವಿಥ್ ಡ್ರಾದಲ್ಲಿ ಭಾರಿ ಬದಲಾವಣೆ

ಸ್ವಚ್ಛ ಹಣಕಾಸು ಇತಿಹಾಸ ಮತ್ತು ಉತ್ತಮ ಸಾಲ ಇತಿಹಾಸ ಹೊಂದಿದ ಗ್ರಾಹಕರು ಈ ಸಾಲಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ. ಇಂಥ ಗ್ರಾಹಕರಿಗೆ ಎಸ್‍ಎಂಎಸ್ ಮತ್ತು ಇ-ಮೇಲ್‍ನಲ್ಲಿ ಬ್ಯಾಂಕಿನಿಂದ ಮಾಹಿತಿ ನೀಡಲಾಗುತ್ತದ. ಅರ್ಹತೆಯ ಪರಿಶೀಲನೆಗಾಗಿ ಗ್ರಾಹಕರು, ಡಿಸಿಇಎಂಐಗೆ ಇ-ಮೇಲ್ ಮಾಡಿ ಅಥವಾ ದೂರವಾಣಿ: 567676ಗೆ ಡಿಸಿಇಎಂಐ ಎಂದು ನೋಂದಾಯಿತ ಸಂಖ್ಯೆಯಿಂದ ಎಸ್‍ಎಂಎಸ್ ಸಂದೇಶ ಕಳುಹಿಸಬಹುದು.

English summary
India's largest lender State Bank of India launched ‘Debit Card EMI facility’ for its existing customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X