ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಯೋ ಪೇಮೆಂಟ್ ಬ್ಯಾಂಕ್: ರಿಲಯನ್ಸ್ ಜತೆ ಕೈಜೋಡಿಸಿದ ಎಸ್ಬಿಐ

By Mahesh
|
Google Oneindia Kannada News

ಮುಂಬೈ, ಆಗಸ್ಟ್ 03: ಜಿಯೋ ಪೇಮೆಂಟ್ಸ್ ಬ್ಯಾಂಕ್‍ನ (ಆರ್‍ಐಎಲ್ ಮತ್ತು ಎಸ್‍ಬಿಐ ನಡುವಿನ ಒಂದು 70:30 ಜೆವಿ) ಕಾರ್ಯಾಚರಣೆಯ ನಂತರ ಜಿಯೋ ಮತ್ತು ಎಸ್‍ಬಿಐ ತಮ್ಮ ಗ್ರಾಹಕರಿಗಾಗಿ ಎಕ್ಸ್ ಕ್ಲೂಸಿವ್ ಡಿಜಿಟಲ್ ಬ್ಯಾಂಕಿಂಗ್, ಪೇಮೆಂಟ್ಸ್ ಮತ್ತು ವಾಣಿಜ್ಯ ಪಯಣದೊಂದಿಗೆ ನೆಕ್ಸ್ಟ್ ಜನರೇಶನ್, ಸರಳ, ಸುಲಭ ಅನುಭವ ನೀಡಲಿದೆ.

ಎಸ್‍ಬಿಐನ ಡಿಜಿಟಲ್ ಗ್ರಾಹಕ ನೆಲೆಯನ್ನು ಹೆಚ್ಚಿಸಲು ಜಿಯೋ ಮತ್ತು ಎಸ್‍ಬಿಐ ಡಿಜಿಟಲ್ ಸಹಭಾಗಿತ್ವಕ್ಕೆ ಪ್ರವೇಶಿಸುತ್ತಿವೆ. ಎಸ್‍ಬಿಐ ಯೋನೋ(Yono) ಎಂಬುದು ಒಂದು ಕ್ರಾಂತಿಕಾರಿ ಓಮ್ನಿ ಚಾನೆಲ್ ಪ್ಲಾಟ್‍ಫಾರಂ ಆಗಿದ್ದು, ಇದು ಡಿಜಿಟಲ್ ಬ್ಯಾಂಕಿಂಗ್, ವಾಣಿಜ್ಯ ಮತ್ತು ಹಣಕಾಸು ಸೂಪರ್ ಸ್ಟೋರ್ ಸೇವೆಗಳನ್ನು ಗ್ರಾಹಕರಿಗೆ ಒದಗಿಸುತ್ತದೆ.

ತಡೆರಹಿತ, ಸಮಗ್ರ ಮತ್ತು ಉತ್ಕೃಷ್ಟ ಗ್ರಾಹಕ ಅನುಭವಕ್ಕಾಗಿ ಯೋನೋದ ಡಿಜಿಟಲ್ ಬ್ಯಾಂಕಿಂಗ್ ವೈಶಿಷ್ಟ್ಯಗಳು ಮತ್ತು ಪರಿಹಾರಗಳನ್ನು ಮೈಜಿಯೋ ಪ್ಲಾಟ್‍ಫಾರಂ ಮೂಲಕ ಪಡೆದುಕೊಳ್ಳಬಹುದಾಗಿದೆ. ಮೈಜಿಯೋ, ಭಾರತದ ಅತಿದೊಡ್ಡ ಓವರ್ ದಿ ಟಾಪ್ (ಒಟಿಟಿ) ಗಳಲ್ಲಿ ಒಂದಾಗಿದ್ದು, ಇದೀಗ ಎಸ್‍ಬಿಐ ಮತ್ತು ಜಿಯೋ ಪಾವತಿ ಬ್ಯಾಂಕ್‍ನ ಹಣಕಾಸು ಸೇವೆಗಳ ಸಾಮರ್ಥ್ಯಗಳನ್ನು ತರುತ್ತಿದೆ.

ಜಿಯೋ ಮತ್ತು ಎಸ್‍ಬಿಐ ಗ್ರಾಹಕರು ಗ್ರಾಹಕ ಪಾಲ್ಗೊಳ್ಳುವಿಕೆ ಹಾಗೂ ರಿಲಯನ್ಸ್ ನ ವಾಣಿಜ್ಯ ವೇದಿಕೆಯಾದ ಜಿಯೋ ಪ್ರೈಮ್‍ನಿಂದ ಪ್ರಯೋಜನ ಪಡೆಯಲಿದ್ದಾರೆ.

ರಿಲಯನ್ಸ್ ರಿಟೈಲ್, ಜಿಯೋ, ಸಹಭಾಗಿ ಬ್ರಾಂಡ್‍ಗಳು ಮತ್ತು ವರ್ತಕರಿಂದ ಎಕ್ಸ್ ಕ್ಲೂಸಿವ್ ಡೀಲ್‍ಗಳನ್ನು ಜಿಯೋ ಪ್ರೈಮ್ ಆಫರ್ ಮಾಡಲಿದೆ. ಇದರ ಜತೆ, ಎಸ್‍ಬಿಐ Rewardz(ಎಸ್‍ಬಿಐನಿಂದ ಪ್ರಸ್ತುತವಿರುವ ಲಾಯಲ್ಟಿ ಕಾರ್ಯಕ್ರಮ) ಮತ್ತು ಜಿಯೋ ಪ್ರೈಮ್ ನಡುವಿನ ಏಕೀಕರಣದೊಂದಿಗೆ, ಎಸ್‍ಬಿಐ ಗ್ರಾಹಕರಿಗೆ ಹೆಚ್ಚುವರಿಯಾಗಿ ಲಾಯಲ್ಟಿ ರಿವಾರ್ಡ್ ಗಳಿಕೆಯ, ರಿಲಯನ್ಸ್, ಜಿಯೋ ಮತ್ತು ಇತರೆ ಆನ್‍ಲೈನ್ ಮತ್ತು ಭೌತಿಕ ಪಾಟ್ರ್ನರ್ ವ್ಯವಸ್ಥೆಗಳೊಂದಿಗೆ ವಿಶಾಲವಾದ ರಿಡೆಂಪ್ಶನ್ ಅವಕಾಶಗಳನ್ನು ನೀಡಲಾಗುತ್ತದೆ.

SBI Jio form Partnership for digital platform payment banking

ಎಸ್‍ಬಿಐ ನೆಟ್‍ವರ್ಕ್ ಮತ್ತು ಕನೆಕ್ಟಿವಿಟಿ ಸೊಲ್ಯೂಶನ್‍ಗಳ ವಿನ್ಯಾಸ ಮತ್ತು ಒದಗಣೆಯಲ್ಲಿ ಜಿಯೋವನ್ನು ತನ್ನ ಒಂದು ಆದ್ಯತೆಯ ಸಹಭಾಗಿಯನ್ನಾಗಿ ತೊಡಗಿಸಿಕೊಂಡಿದೆ.

ಬ್ಯಾಂಕಿಂಗ್ ವಲಯಕ್ಕೆ ಕಾಲಿಡಲಿರುವ ರಿಲಯನ್ಸ್ ಜಿಯೋಬ್ಯಾಂಕಿಂಗ್ ವಲಯಕ್ಕೆ ಕಾಲಿಡಲಿರುವ ರಿಲಯನ್ಸ್ ಜಿಯೋ

ಜಿಯೋದ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿನ ಉತ್ಕೃಷ್ಟ ಗುಣಮಟ್ಟದ ನೆಟ್‍ವರ್ಕ್‍ನಿಂದಾಗಿ ಎಸ್‍ಬಿಐಗೆ ಗ್ರಾಹಕ ಕೇಂದ್ರಿತ ಸೇವೆಗಳಾದ ವಿಡಿಯೋ ಬ್ಯಾಂಕಿಂಗ್ ಮತ್ತು ಇತರೆ ಬೇಡಿಕೆಯ ಸೇವೆಗಳನ್ನು ಒದಗಿಸಲು ಬಿಡುಗಡೆಗೊಳಿಸಲು ಸಾಧ್ಯವಾಗಿದೆ. ಇದರೊಂದಿಗೆ, ಎಸ್‍ಬಿಐ ಗ್ರಾಹಕರಿಗೆ ವಿಶೇಷ ಆಫರ್‍ನಲ್ಲಿ ಜಿಯೋ ಫೋನ್‍ಗಳು ಲಭ್ಯ ಇರಲಿವೆ.

ಸಹಭಾಗಿತ್ವದ ಕುರಿತು ಮಾತನಾಡಿದ ಶ್ರೀ ರಜನೀಶ್ ಕುಮಾರ್, ಅಧ್ಯಕ್ಷರು, ಎಸ್‍ಬಿಐ, 'ಡಿಜಿಟಲ್ ಬ್ಯಾಂಕಿಂಗ್‍ನಲ್ಲಿ ನಾಯಕತ್ವ ಹೊಂದಿರುವ ಭಾರತದ ಅತಿದೊಡ್ಡ ಬ್ಯಾಂಕ್ ಆಗಿದ್ದುಕೊಂಡು, ನಾವು ವಿಶ್ವದ ಅತಿದೊಡ್ಡ ನೆಟ್‍ವರ್ಕ್ ಜಿಯೋದೊಂದಿಗೆ ಸಹಭಾಗಿತ್ವ ಸಾಧಿಸಲು ಸಂತೋಷಪಡುತ್ತೇವೆ. ಎಲ್ಲಾ ಕ್ಷೇತ್ರಗಳ ಸಹಕಾರವು ಡಿಜಿಟಲ್ ಹೆಜ್ಜೆಯನ್ನು ವಿಸ್ತರಿಸಲು ಪರಸ್ಪರ ಅನುಕೂಲವಾಗಲಿದ್ದು, ಎಸ್‍ಬಿಐ ಗ್ರಾಹಕರಿಗೆ ಉತ್ಕೃಷ್ಟ ಮತ್ತು ರಿವಾರ್ಡಿಂಗ್ ಅನುಭವಗಳನ್ನು ಒದಗಿಸಲಿದೆ'' ಎಂದು ಹೇಳಿದರು.

English summary
Reliance Industries and State Bank of India, which partnered for the Jio Payments Bank, are entering into yet another digital partnership aimed to increase SBI’s digital customer base.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X