ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಬಿಐ ಎಟಿಎಂ ಬಳಕೆದಾರರೇ ಗಮನಿಸಿ: ಎಸ್‌ಬಿಐನಿಂದ ಹೊಸ ವೈಶಿಷ್ಟ್ಯ ಪರಿಚಯ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 3: ಭಾರತದ ಅತಿ ದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಗ್ರಾಹಕರ ಸುರಕ್ಷತೆಗಾಗಿ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ನೀವು ಎಟಿಎಂಗೆ ಹೋಗಿ ನಿಮ್ಮ ಬ್ಯಾಲೆನ್ಸ್ ಅಥವಾ ಮಿನಿ ಸ್ಟೇಟ್‌ಮೆಂಟ್ ಪರಿಶೀಲಿಸಲು ಬಯಸಿದರೆ, ತಕ್ಷಣವೇ ಎಸ್‌ಬಿಐ ಎಸ್‌ಎಂಎಸ್ ಕಳುಹಿಸುವ ಮೂಲಕ ನಿಮ್ಮನ್ನು ಎಚ್ಚರಿಸುತ್ತದೆ.

ಕೊರೊನಾವೈರಸ್ ಸಾಂಕ್ರಾಮಿಕದ ಮಧ್ಯೆ ಹೆಚ್ಚುತ್ತಿರುವ ಎಟಿಎಂ ವಂಚನೆಗಳನ್ನು ತಡೆಯಲು ಈ ಸೌಲಭ್ಯವು ಖಚಿತಪಡಿಸುತ್ತದೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಜಾಗರೂಕರಾಗಿರಬೇಕು ಮತ್ತು ಬ್ಯಾಲೆನ್ಸ್ ವಿಚಾರಣೆ ಅಥವಾ ಮಿನಿ-ಸ್ಟೇಟ್‌ಮೆಂಟ್‌ಗೆ ಸಂಬಂಧಿಸಿದ ಎಸ್‌ಎಂಎಸ್ ಎಚ್ಚರಿಕೆಗಳನ್ನು ನಿರ್ಲಕ್ಷಿಸದಂತೆ ಎಚ್ಚರಿಸಿದೆ.

SBI, LIC, ಬರೋಡಾ ಬ್ಯಾಂಕ್ ಮೇಲೆ ದಂಡ ವಿಧಿಸಿದ ಸೆಬಿSBI, LIC, ಬರೋಡಾ ಬ್ಯಾಂಕ್ ಮೇಲೆ ದಂಡ ವಿಧಿಸಿದ ಸೆಬಿ

"ಈಗ ನಾವು ಎಟಿಎಂಗಳ ಮೂಲಕ ಬ್ಯಾಲೆನ್ಸ್ ಪರಿಶೀಲನೆ ಅಥವಾ ಮಿನಿ ಸ್ಟೇಟ್‌ಮೆಂಟ್‌ಗಾಗಿ ವಿನಂತಿಯನ್ನು ಸ್ವೀಕರಿಸುವಾಗ, ನಾವು ಎಸ್‌ಎಂಎಸ್ ಕಳುಹಿಸುವ ಮೂಲಕ ನಮ್ಮ ಗ್ರಾಹಕರನ್ನು ಎಚ್ಚರಿಸುತ್ತೇವೆ, ಇದರಿಂದಾಗಿ ಅವರು ವಹಿವಾಟನ್ನು ಪ್ರಾರಂಭಿಸದಿದ್ದರೆ ತಕ್ಷಣವೇ ಅವರ ಡೆಬಿಟ್ ಕಾರ್ಡ್ ಅನ್ನು ನಿರ್ಬಂಧಿಸಬಹುದು" ಎಂದು ದೇಶದ ಅತಿದೊಡ್ಡ ಬ್ಯಾಂಕ್ ಎಸ್‌ಬಿಐ ಟ್ವಿಟ್ಟರ್‌ನಲ್ಲಿ ಹೇಳಿದೆ.

SBI Introduced New Feature For Customers Safety: Know More

ಎಸ್‌ಬಿಐ ತನ್ನ ಗ್ರಾಹಕರಿಗೆ ಎಚ್ಚರಿಕೆ ವಹಿಸುವಂತೆ ಕೇಳಿದೆ ಮತ್ತು ಬ್ಯಾಲೆನ್ಸ್‌ ಪರಿಶೀಲಿಸಿಲ್ಲ, ಮಿನಿ ಸ್ಟೇಟ್‌ಮೆಂಟ್ ಪಡೆದಿಲ್ಲ ಎಂದಾರೆ ಬ್ಯಾಂಕ್‌ಗಳಿಗೆ ತಿಳಿಸಿ ಎಂದಿದೆ. ಇದರಿಂದ ತಕ್ಷಣವೇ ನಿಮ್ಮ ಕಾರ್ಡ್‌ನ್ನು ನಿಷೇಧಿಸಲು ಸಾಧ್ಯವಾಗುತ್ತದೆ ಎಂದು ಎಸ್‌ಬಿಐ ಹೇಳಿದೆ.

ಈಗಾಗಲೇ ಎಸ್‌ಬಿಐ ಯೋನೊ ಆ್ಯಪ್‌ ಮೂಲಕ ಒಟಿಪಿ ಆಧರಿಸಿ ಡೆಬಿಟ್‌ ಕಾರ್ಡ್‌ ಇಲ್ಲದೆಯೇ ಹಣವನ್ನು ವಿತ್‌ಡ್ರಾ ಮಾಡುವ ವಿಶೇಷ ಸೌಲಭ್ಯವನ್ನು ಗ್ರಾಹಕರಿಗೆ ಒದಗಿಸಿದೆ.

English summary
State Bank of India (SBI) has introduced a new feature for customers' safety. If you go to the ATM and want to check your balance or mini statement, SBI will alert you by sending an SMS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X