ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಬಿಐ ಗ್ರಾಹಕರೇ ಗಮನಕ್ಕೆ: ಡಿಸೆಂಬರ್ 01 ರಿಂದ ಏನೇನು ಬದಲಾವಣೆ?

|
Google Oneindia Kannada News

Recommended Video

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ನಿಮಗೊಂದು ಸೂಚನೆ | ಡಿಸೆಂಬರ್ 1ರ ಒಳಗೆ ಮಾಡಿ

ಬೆಂಗಳೂರು, ನವೆಂಬರ್ 29: ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಹೊಸ ಡಿಜಿಟಲ್ ಪೇಮೆಂಟ್ ಸೇವೆಯನ್ನು ಒದಗಿಸಲು ಮುಂದಾಗಿದೆ. ಅಕ್ಟೋಬರ್ 31ರ ನಂತರ ಎಸ್ಬಿಐನ ವ್ಯವಹಾರದಲ್ಲಿ ಸಾಕಷ್ಟು ಬದಲಾವಣೆಗಳಾಗಿತ್ತು.

ಅಕ್ಟೋಬರ್ 31, 2018ರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ದಿನದ ವಿಥ್ ಡ್ರಾ ಮಿತಿ ಬದಲಾಗಲಿದೆ. ಇಲ್ಲಿ ತನಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಿಂದ ದಿನಕ್ಕೆ ನಲವತ್ತು ಸಾವಿರ ರುಪಾಯಿ ವಿಥ್ ಡ್ರಾ ಮಾಡಬಹುದು. ಆದರೆ, ಅಕ್ಟೋಬರ್ 31ರಿಂದ ಈ ಮಿತಿ 20 ಸಾವಿರಕ್ಕೆ ಕಡಿತವಾಗುತ್ತದೆ. ಈ ಕ್ರಮಕ್ಕೆ ಬ್ಯಾಂಕ್ ಗ್ರಾಹಕರಿಂದ ಭಾರೀ ಅಕ್ರೋಶ ವ್ಯಕ್ತವಾಗಿದೆ.

ಈಗ ಡಿಸೆಂಬರ್ 01ರೊಳಗೆ ಗ್ರಾಹಕರು ತಮ್ಮ ಮೊಬೈಲ್ ಫೋನ್ ನಂಬರ್ ಹಾಗೂ ಬ್ಯಾಂಕ್ ಖಾತೆ ಜತೆ ಜೋಡಣೆ ಮಾಡಬೇಕಾಗಿದೆ. ಇಲ್ಲವಾದಲ್ಲಿ, ಇಂಟರ್ನೆಟ್ ಬ್ಯಾಂಕಿಂಗ್ ಸೇವೆ ಬಳಸಲು ಸಾಧ್ಯವಾಗುವುದಿಲ್ಲ ಎಂದು ಬ್ಯಾಂಕ್ ಪ್ರಕಟಿಸಿದೆ.

ಮಾರ್ಚ್ 2018ರ ಎಣಿಕೆಯಂತೆ ಬ್ಯಾಂಕಿನಿಂದ 39.50 ಕೋಟಿ ಡೆಬಿಟ್ ಕಾರ್ಡ್ ನೀಡಲಾಗಿದೆ. ಈ ಪೈಕಿ 26 ಕೋಟಿ ಕಾರ್ಡ್ ಗಳು ಸಕ್ರಿಯವಾಗಿವೆ. ಡೆಬಿಟ್ ಕಾರ್ಡ್ ಮಾರುಕಟ್ಟೆ ಪೈಕಿ ಎಸ್ಬಿಐ ಶೇ 32.3ರಷ್ಟು ಪಾಲು ಹೊಂದಿದೆ.

ಡೆಬಿಟ್ ಕಾರ್ಡ್ ಅಪ್ ಗ್ರೇಡ್ ಮಾಡಿಕೊಳ್ಳಿ

ಡೆಬಿಟ್ ಕಾರ್ಡ್ ಅಪ್ ಗ್ರೇಡ್ ಮಾಡಿಕೊಳ್ಳಿ

ಹಣದ ವಿಥ್ ಡ್ರಾ ಮಿತಿ(ಅಕ್ಟೋಬರ್ 31ರ ಗಡುವು ಆದೇಶ) ಕ್ಲಾಸಿಕ್ ಹಾಗೂ ಮಾಸ್ಟರ್ ಕಾರ್ಡ್ ಗಳಿಗೆ ಮಾತ್ರ ಅನ್ವಯವಾಗಲಿದೆ. ಮಿಕ್ಕ ಕಾರ್ಡ್ ಗಳಿಗೆ ಅನ್ವಯವಾಗುವುದಿಲ್ಲ. ಆದರೆ, ಕ್ಲಾಸಿಕ್ ಡೆಬಿಟ್ ಕಾರ್ಡ್ ಗಳನ್ನು ಉಚಿತವಾಗಿ ಅಪ್ ಗ್ರೇಡ್ ಮಾಡಿಕೊಳ್ಳಬಹುದು. ಡೆಬಿಟ್ ಕಾರ್ಡ್ ಗಳನ್ನು ಇಎಂವಿ ಚಿಪ್ ಹಾಗೂ ಪಿನ್ ಡೆಬಿಟ್ ಕಾರ್ಡ್ ಆಗಿ ಬದಲಾಯಿಸಿಕೊಂಡು ಹೆಚ್ಚಿನ ಸುರಕ್ಷತೆ ಹೊಂದಬಹುದು. ಈ ರೀತಿ ಮ್ಯಾಗ್ನೆಟಿಕ್ ಸ್ಟ್ರಿಪ್ ಎಟಿಎಂ ಕಾರ್ಡ್ ಗಳನ್ನು ಇಎಂವಿ ಚಿಪ್ ಅಂಡ್ ಪಿನ್ ಕಾರ್ಡ್ ಆಗಿ ಬದಲಾಯಿಸಲು ಡಿಸೆಂಬರ್ 31 ಡೆಡ್ ಲೈನ್ ನೀಡಿ ಆರ್ ಬಿಐ ಸೂಚನೆ ನೀಡಿದೆ.

ಎಸ್ಬಿಐ ಮೊಬೈಲ್ ವ್ಯಾಲೆಟ್ ಸೇವೆ ಸ್ಥಗಿತ

ಎಸ್ಬಿಐ ಮೊಬೈಲ್ ವ್ಯಾಲೆಟ್ ಸೇವೆ ಸ್ಥಗಿತ

ನವೆಂಬರ್ 1ರಿಂದ ತನ್ನ ಎಸ್.ಬಿ.ಐ. Buddy ಮೊಬೈಲ್ ವ್ಯಾಲೆಟ್ ಸೇವೆ ಮುಚ್ಚುತ್ತಿದೆ. ಅದರ ಬದಲು ಈಗಾಗಲೇ ಚಲಾವಣೆಯಲ್ಲಿರುವ ಯುನೋ ವ್ಯಾಲೆಟ್ ಅನ್ನು ಬಳಕೆಗೆ ಪ್ರೋತ್ಸಾಹಿಸುತ್ತದೆ. ಹಾಗೆ ನೋಡಿದರೆ ಜೂನ್ ತಿಂಗಳ ಬಳಿಕ buddy ವ್ಯಾಲೆಟ್ ಸೇವೆ ತಾತ್ಕಲಿಕವಾಗಿ ಸ್ಥಗಿತಗೊಂಡಿತ್ತು. ಎಸ್ಬಿಐ ಮೊಬೈಲ್ ಬ್ಯಾಂಕಿಂಗ್ ಇನ್ನಷ್ಟು ಸೌಲಭ್ಯ ಒದಗಿಸಲು ಮುಂದಾಗಿದೆ.

ಡಿ 01ರಿಂದ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ

ಡಿ 01ರಿಂದ ಇಂಟರ್ನೆಟ್ ಬ್ಯಾಂಕಿಂಗ್ ಸೌಲಭ್ಯ

ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಬ್ಯಾಂಕಿನ ವಿವಿಧ ಸೇವೆಗಳೊಡನೆ ನೋಂದಾಯಿಸಬೇಕಿದೆ. ಕೆವೈಸಿ ಜತೆ ಮೊಬೈಲ್ ಸಂಖ್ಯೆ ನೀಡಿದ್ದರೂ, ಇನ್ನೊಮ್ಮೆ ನಿಮ್ಮ ಸಮೀಪದ ಬ್ಯಾಂಕಿಗೆ ಅಥವಾ ನಿಮ್ಮ ಖಾತೆ ಇರುವ ಬ್ಯಾಂಕಿಗೆ ತೆರಳಿ ನಿಮ್ಮ ಅಧಿಕೃತ, ಚಾಲನೆಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿಸಿ. ಇಲ್ಲದಿದ್ದರೆ ಡಿಸೆಂಬರ್ 1ರಿಂದ ಇಂಟರ್ ನೆಟ್ ಬ್ಯಾಂಕಿಂಗ್ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಡಿಸೆಂಬರ್ 01ರಿಂದ ಈ ಸೇವೆ ಪಡೆಯಬೇಕಾದರೆ, ಸಮೀಪದ ಬ್ಯಾಂಕಿಗೆ ತೆರಳಿ ನಂಬರ್ ಜೋಡಣೆ ಮಾಡಿಸಿಕೊಳ್ಳಿ

ಹೊಸ ಇಎಂವಿ ಕಾರ್ಡ್ ಪಡೆದುಕೊಳ್ಳಿ

ಹೊಸ ಇಎಂವಿ ಕಾರ್ಡ್ ಪಡೆದುಕೊಳ್ಳಿ

ಗ್ರಾಹಕರು ಬ್ಯಾಂಕಿಗೆ ತೆರಳಿ ಮ್ಯಾಗ್ ಸ್ಟ್ರಿಪ್ ಕಾರ್ಡ್(ಡೆಬಿಟ್ ಕಾರ್ಡ್) ಬದಲೈಸಿಕೊಳ್ಳಿ ಹೊಸ ಇಎಂವಿ( ಯುರೋಪೇ,ಮಾಸ್ಟರ್ ಕಾರ್ಡ್, ವೀಸಾ) ಕಾರ್ಡ್ ಪಡೆಯಲು ಸೂಚಿಸಲಾಗಿದೆ.

ಮಾರ್ಚ್ 2018ರ ಎಣಿಕೆಯಂತೆ ಬ್ಯಾಂಕಿನಿಂದ 39.50 ಕೋಟಿ ಡೆಬಿಟ್ ಕಾರ್ಡ್ ನೀಡಲಾಗಿದೆ. ಈ ಪೈಕಿ 26 ಕೋಟಿ ಕಾರ್ಡ್ ಗಳು ಸಕ್ರಿಯವಾಗಿವೆ. ಡೆಬಿಟ್ ಕಾರ್ಡ್ ಮಾರುಕಟ್ಟೆ ಪೈಕಿ ಎಸ್ಬಿಐ ಶೇ 32.3ರಷ್ಟು ಪಾಲು ಹೊಂದಿದೆ.

ಎಸ್ಬಿಐ ಗ್ಲೋಬಲ್ ಇಂಟರ್ ನ್ಯಾಷನಲ್ ಡೆಬಿಟ್ ಕಾರ್ಡ್ ಮಿತಿ : 50,000 ರು ಪ್ರತಿದಿನ ಎಸ್ಬಿಐ ಪ್ಲಾಟಿನಂ ಗ್ಲೋಬಲ್ ಇಂಟರ್ ನ್ಯಾಷನಲ್ ಡೆಬಿಟ್ ಕಾರ್ಡ್ ಮಿತಿ : 100,000ರು ಪ್ರತಿದಿನ

English summary
If you are a customer of State Bank of India (SBI) you will not be able to access your bank account via internet banking if you do not link your phone number with your bank account by November 30.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X