ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ಬಿಐ ಬಡ್ಡಿದರ ಏರಿಕೆ, ಗೃಹಸಾಲ ಪಡೆದವರಿಗೆ ಕಷ್ಟ!

By Mahesh
|
Google Oneindia Kannada News

ಬೆಂಗಳೂರು, ಮಾರ್ಚ್ 01: ಹೋಳಿ ಹಬ್ಬಕ್ಕೂ ಮುನ್ನವೇ ಗ್ರಾಹಕರಿಗೆ ಭರ್ಜರಿ ಉಡುಗೊರೆ ನೀಡಿದ್ದ ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಸ್ ಬಿಐ ಇಂದು ಗ್ರಾಹಕರಿಗೆ ಆಘಾತ ನೀಡಿದೆ.

ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಸ್ಥಿರ ಠೇವಣಿ ಮೇಲೆ ನೀಡುವ ಬಡ್ಡಿಯನ್ನು ಶೇಕಡಾ 0.50ರಷ್ಟು ಏರಿಕೆ ಮಾಡಿತ್ತು. ಎಸ್ ಬಿ ಐ 1 ಕೋಟಿಗಿಂತ ಕಡಿಮೆ ಸ್ಥಿರ ಠೇವಣಿಯಿಟ್ಟ ಗ್ರಾಹಕರಿಂದ ಹಿಡಿದು 10 ಕೋಟಿ ರೂಪಾಯಿವರೆಗೆ ಸ್ಥಿರ ಠೇವಣಿಯಿಟ್ಟ ಎಲ್ಲರಿಗೂ ಸಿಗುವ ಬಡ್ಡಿಯಲ್ಲಿ ಏರಿಕೆ ಮಾಡಲಾಗಿತ್ತು.

SBI increases interest rate on MCLR, Home Loan EMI to cost more

ಆದರೆ, ಇಂದು ಬಹುತೇಕ ಅನೇಕ ಮೆಚ್ಯುರಿಟಿಗಳ ಮೇಲಿನ marginal cost based lending rates (MCLR) ಗಳನ್ನು ಏರಿಕೆ ಮಾಡಿದೆ. ಶೇ 7.95 ರಿಂದ ಶೇ 8.15ಕ್ಕೇರಿಯಾಗಿದ್ದು, ಏಪ್ರಿಲ್ 2016ರ ನಂತರ ಇದೇ ಮೊದಲ ಬಾರಿಗೆ ಎಂಸಿಎಲ್ ಆರ್ ದರಗಳನ್ನು ಪರಿಷ್ಕರಿಸಲಾಗಿದೆ. ಇದರಿಂದ ಸಾಲದ ಮೇಲಿನ ಬಡ್ಡಿದರ, ಇಎಂಐ ಹೆಚ್ಚಳವಾಗಲಿದೆ.

ಬಹುಕೋಟಿ ಹಗರಣದಲ್ಲಿ ಸಿಲುಕಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ಕೂಡಾ ಮಾರ್ಚ್ 01, 2018ರಿಂದ ಜಾರಿಗೆ ಬರುವಂತೆ ಒಂದು ವರ್ಷ ಅವಧಿಯ ಎಂ ಸಿಎಲ್ ಆರ್ ದರವನ್ನು ಶೇ 8.15ರಿಂದ ಶೇ 8.30ಕ್ಕೇರಿಸಿದೆ.

ಎಸ್ಬಿಐ ಎಂಸಿಎಲ್ ಆರ್ ಬದಲಾವಣೆಯಿಂದ ಹೊಸ ಸಾಲ ಪಡೆಯುವವರ ಇಎಂಐ ಏರಿಕೆಯಾಗಲಿದೆ. ಆದರೆ, ಹಳೆ ಸಾಲದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಎಂಸಿಎಲ್ ಆರ್ ಆಧಾರದ ಮೇಲೆ ಗೃಹ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ವೈಯಕ್ತಿಕ ಸಾಲ, ಆಸ್ತಿ ಮೇಲಿನ ಸಾಲಗಳ ಬಡ್ಡಿದರ, ಇಎಂಐ ನಿರ್ಧಾರವಾಗುತ್ತದೆ.

ಉದಾಹರಣೆಗೆ 2017ರ ನವೆಂಬರ್ ನಲ್ಲಿ ಒಂದು ವರ್ಷದ ಎಂಸಿಎಲ್ ಆರ್ ಗೆ ನಿಮ್ಮ ಗೃಹ ಸಾಲ ಜೋಡಣೆಯಾಗಿದ್ದರೆ ಚಿಂತಿಸಬೇಕಿಲ್ಲ, ನಿಮ್ಮ ಸಾಲದ ಮೇಲಿನ ಬಡ್ಡಿದರದ ಬದಲಾವಣೆ ನವೆಂಬರ್ 2018ರಿಂದ ಅನ್ವಯವಾಗಲಿದೆ. ಹೊಸ ಸಾಲಗಾರಿಗೆ ಮೂಲಾಂಶದ 20 ಅಂಶದಂತೆ ಸಾಲದ ಮೇಲಿನ ಬಡ್ಡಿದರ ಹೆಚ್ಚಳವಾಗಲಿದೆ.

English summary
State Bank of India, the country's largest lender, on Thursday increased marginal cost-based lending rates (MCLR) across most maturities, effective immediately. SBI raised the key one-year MCLR or benchmark rate to 8.15 per cent from 7.95 per cent, according to a notification from the bank.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X