ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೃಹಸಾಲದ ಮೇಲಿನ ಕನಿಷ್ಠ ಬಡ್ಡಿದರ ಹೆಚ್ಚಿಸಿದ ಎಸ್‌ಬಿಐ

|
Google Oneindia Kannada News

ನವದೆಹಲಿ, ಏಪ್ರಿಲ್ 5: ದೇಶದ ಅತಿ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಎನಿಸಿರುವ ಭಾರತೀಯ ಸ್ಟೇಟ್ ಬ್ಯಾಂಕ್ , ಗೃಹ ಸಾಲದ ಮೇಲಿನ ಕನಿಷ್ಠ ಬಡ್ಡಿ ದರವನ್ನು 25 ಮೂಲ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ. ಅಂದರೆ ಕನಿಷ್ಠ ಬಡ್ಡಿದರವು ಶೇ 6.70 ರಿಂದ ಶೇ 6.75ಕ್ಕೆ ಏರಿಕೆಯಾಗಿದೆ. ಎಸ್‌ಬಿಐನ ಗೃಹಸಾಲದ ಮೇಲಿನ ಬಡ್ಡಿದರದ ಏರಿಕೆಯು ಏಪ್ರಿಲ್ 1ರ ಹೊಸ ಹಣಕಾಸು ವರ್ಷದಿಂದಲೇ ಜಾರಿಯಾಗಿದೆ.

ಎಸ್‌ಬಿಐ ಬಡ್ಡಿ ದರ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಇತರೆ ಬ್ಯಾಂಕುಗಳು ಕೂಡ ಶೀಘ್ರದಲ್ಲಿಯೇ ಇದೇ ಮಾರ್ಗ ಅನುಸರಿಸುವ ಸಾಧ್ಯತೆ ಇದೆ. ಇದರಿಂದ ಗೃಹಸಾಲದ ಬಡ್ಡಿ ದರದಲ್ಲಿ ಮತ್ತಷ್ಟು ಹೆಚ್ಚಳವಾಗುವ ಲಕ್ಷಣ ಕಂಡುಬಂದಿದೆ.

ಎಸ್ಬಿಐ ಗೃಹಸಾಲದ ಬಡ್ಡಿದರ ಇಳಿಕೆ, ತಗ್ಗಲಿದೆ ಇಎಂಐ!ಎಸ್ಬಿಐ ಗೃಹಸಾಲದ ಬಡ್ಡಿದರ ಇಳಿಕೆ, ತಗ್ಗಲಿದೆ ಇಎಂಐ!

ಎಸ್‌ಬಿಐ ಕಳೆದ ತಿಂಗಳ ಮಾರ್ಚ್ 1ರಂದು ಗೃಹಸಾಲದ ಮೇಲಿನ ಕನಿಷ್ಠ ಬಡ್ಡಿದರವನ್ನು ಶೇ 6.80ರಿಂದ ಶೇ 6.70ಕ್ಕೆ ಇಳಿಸಿತ್ತು. ಆದರೆ ಇದು ಆಸಕ್ತ ಗೃಹ ಖರೀದಿದಾರರಿಗಾಗಿ ನೀಡಲಾಗಿದ್ದ ಸೀಮಿತ ಅವಧಿಯ ಆಫರ್ ಆಗಿತ್ತು.

SBI Hikes Minimum Interest Rate On Home Loans By 25 Basic Points

ಏಪ್ರಿಲ್ ಆರಂಭದಿಂದ ಕನಿಷ್ಠ ಬಡ್ಡಿದರವನ್ನು ಏರಿಸಿರುವುದು ಮಾತ್ರವಲ್ಲದೆ, ಎಲ್ಲ ಗೃಹಸಾಲಗಳ ಪ್ರಕ್ರಿಯೆ ಶುಲ್ಕವನ್ನು ಸಹ ಸೇರ್ಪಡೆ ಮಾಡಲಾಗಿದೆ. ಕನಿಷ್ಠ 10,000 ರೂಪಾಯಿಯಿಂದ ಗರಿಷ್ಠ 30,000 ರೂಪಾಯಿಯವರೆಗೆ ಜಿಎಸ್‌ಟಿ ಸೇರಿಕೊಂಡಂತೆ ಸಾಲದ ಮೇಲೆ ಶೇ 0.40ರಷ್ಟು ಮೊತ್ತವನ್ನು ಪ್ರಕ್ರಿಯೆ ಶುಲ್ಕವನ್ನಾಗಿ ವಿಧಿಸುವ ಸಾಧ್ಯತೆ ಇದೆ.

ಬಿಲ್ಡರ್ ಪಾಲುದಾರಿಕೆಯ ಯೋಜನೆಗಳಲ್ಲಿ ಟಿಐಆರ್ ಅಥವಾ ಟೈಟಲ್ ಇನ್‌ವೆಸ್ಟಿಗೇಷನ್ ರಿಪೋರ್ಟ್ ಮತ್ತು ಮೌಲ್ಯಮಾಪನ ಅಗತ್ಯವಿರುವುದಿಲ್ಲ. ಜಿಎಸ್‌ಟಿ ಒಳಗೊಂಡ ಗರಿಷ್ಠ ಮೊತ್ತ 10,000 ರೂಪಾಯಿಗೆ ಸಾಲದ ಮೇಲಿನ ಶೇ 0.40ರಷ್ಟು ಪ್ರಕ್ರಿಯೆ ಶುಲ್ಕ ಇರಲಿದೆ ಎಂದು ಎಸ್‌ಬಿಐ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ಟಿಐರ್ ಅಗತ್ಯವಿರುವಲ್ಲಿ ಸಾಮಾನ್ಯ ಶುಲ್ಕಗಳು ಅನ್ವಯವಾಗಲಿವೆ. ಇದಕ್ಕೂ ಮುನ್ನ ಮಾರ್ಚ್ ತಿಂಗಳ 31ರವರೆಗೂ ಬ್ಯಾಂಕ್ ಗೃಹಸಾಲ ಪ್ರಕ್ರಿಯೆ ಶುಲ್ಕವನ್ನು ಮನ್ನಾ ಮಾಡಿತ್ತು.

English summary
SBI has hiked the minimum interest rate on home loans by 25 points from 6.70% to 6.95%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X