ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

4ನೇ ತ್ರೈಮಾಸಿಕದಲ್ಲಿ ಎಸ್.ಬಿ.ಐಗೆ ಬರೋಬ್ಬರಿ 7,718 ಕೋಟಿ ನಷ್ಟ!

By Sachhidananda Acharya
|
Google Oneindia Kannada News

ಮುಂಬೈ, ಮೇ 22: ದೇಶದ ಅತೀ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2017-18ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಬರೋಬ್ಬರಿ 7,718 ಕೋಟಿ ರೂಪಾಯಿ ನಷ್ಟ ತೋರಿಸಿದೆ.

ಈ ಹಿಂದಿನ ವರ್ಷಕ್ಕೆ ಈ ನಷ್ಟವನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ. ಕಾರಣ ಹಿಂದಿನ ಮಾರ್ಚ್ ಅವಧಿಯಲ್ಲಿ ಎಸ್ ಬಿಐನಲ್ಲಿ 5 ಬ್ಯಾಂಕುಗಳು ವಿಲೀನವಾಗಿರಲಿಲ್ಲ.

ಎಸ್ ಬಿಐ ಗೃಹಸಾಲ ಪಡೆಯುವವರಿಗೆ ಕಹಿಸುದ್ದಿಎಸ್ ಬಿಐ ಗೃಹಸಾಲ ಪಡೆಯುವವರಿಗೆ ಕಹಿಸುದ್ದಿ

ಹೆಚ್ಚಿನ ಎಲ್ಲಾ ಸಾರ್ವಜನಿಕ ರಂಗದ ಬ್ಯಾಂಕುಗಳು ಮಾರ್ಚ್ ತ್ರೈಮಾಸಿಕದಲ್ಲಿ ನಷ್ಟವನ್ನೇ ತೋರಿಸಿವೆ. ಇಂಡಿಯನ್ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಮಾತ್ರ ಈ ಅವಧಿಯಲ್ಲಿ ಲಾಭ ದಾಖಲಾಗಿರುವುದಾಗಿ ಹೇಳಿವೆ.

SBI has incurred a net loss of Rs 7,718 crore during 4th

ಕಳೆದ ವಾರ ಪಂಜಾಬ್ ನ್ಯಾಷನಲ್ ಬ್ಯಾಂಕ್ ಬರೋಬ್ಬರಿ 13,417 ಕೋಟಿ ರೂಪಾಯಿ ನಷ್ಟ ತೋರಿಸಿತ್ತು. ಇದಾದ ನಂತರ ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತೀ ಹೆಚ್ಚಿನ಻ ನಷ್ಟವನ್ನು ತೋರಿಸಿದೆ.

ಮರುಪಾವತಿಯಾಗದ (ಕೆಟ್ಟ ಸಾಲ) ಸಾಲಗಳ ಪ್ರಮಾಣವನ್ನು ಲಾಭದಿಂದ ಸರಿದೂಗಿಸಿಕೊಳ್ಳಲು ಬ್ಯಾಂಕ್ ಗಳು ನಿರ್ಧರಿಸಿದ ಪರಿಣಾಮ ಈ ನಷ್ಟ ಉಂಟಾಗಿದೆ.

English summary
State Bank of India has incurred a net loss of Rs 7,718 crore during 4th quarter of financial year 2017-18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X