ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸ್ಟೇಟ್ ಬ್ಯಾಂಕ್ ಎಫ್‌ಡಿ ಬಡ್ಡಿದರ ಹೆಚ್ಚಳ

|
Google Oneindia Kannada News

ನವದೆಹಲಿ, ನವೆಂಬರ್ 28: ಭಾರತೀಯ ಸ್ಟೇಟ್ ಬ್ಯಾಂಕ್‌ನ ನಿಶ್ಚಿತ ಠೇವಣಿ (ಎಫ್‌ಡಿ) ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿದ್ದು, ಬುಧವಾರದಿಂದಲೇ (ನ.28) ಜಾರಿಗೆ ಬಂದಿದೆ.

ಎಸ್‌ಬಿಐನ ನಿಶ್ಚಿತ ಠೇವಣಿ ಬಡ್ಡಿ ದರವನ್ನು ಶೇ 0.05-0.10 ಅಥವಾ 5-10 ಮೂಲ ಅಂಶಗಳೊಂದಿಗೆ ಹೆಚ್ಚಿಸಿ ತೀರ್ಮಾನಿಸಲಾಗಿತ್ತು. ಒಂದು ಮೂಲ ಅಂಶವು ಶೇ 0.01ಕ್ಕೆ ಸಮನಾಗಿದೆ.

ನಿಶ್ಚಿತ ಠೇವಣಿ ಬಡ್ಡಿದರ ಏರಿಕೆ ಮಾಡಿದ ಎಚ್ಡಿಎಫ್ ಸಿನಿಶ್ಚಿತ ಠೇವಣಿ ಬಡ್ಡಿದರ ಏರಿಕೆ ಮಾಡಿದ ಎಚ್ಡಿಎಫ್ ಸಿ

1 ಕೋಟಿ ರೂಪಾಯಿಗೂ ಕಡಿಮೆ ಮೊತ್ತದ ಎಫ್‌ಡಿಗಳ ಮೇಲಿನ ಬಡ್ಡಿದರವನ್ನು ಎಸ್‌ಬಿಐ ಹೆಚ್ಚಿಸಿದೆ. ಎಸ್‌ಬಿಐನ ಐದನೇ ದ್ವೈಮಾಸಿಕ ಹಣಕಾಸು ನೀತಿಯ ಪರಾಮರ್ಶೆಯು ಡಿ.5ರಂದು ಹೊರ ಬೀಳಲಿದ್ದು, ಅದಕ್ಕೂ ಮುನ್ನವೇ ಎಸ್‌ಬಿಐ ಈ ಕೊಡುಗೆ ನೀಡಿದೆ.

sbi fixed deposit fd interest rates hike effect

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಫ್ ಡಿ ಬಡ್ಡಿ ದರ ಏರಿಕೆಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಫ್ ಡಿ ಬಡ್ಡಿ ದರ ಏರಿಕೆ

ಒಂದು ಕೋಟಿ ರೂಪಾಯಿಗೂ ಕಡಿಮೆ ಮೊತ್ತದ ಠೇವಣಿ ಇರಿಸಿದವರಿಗೆ ಅದರ ಅವಧಿಗೆ ಅನುಗುಣವಾಗಿ ಬಡ್ಡಿದರ ಹೆಚ್ಚಳ ಲಭ್ಯವಾಗಲಿದೆ. ಸಾಮಾನ್ಯ ಜನರಿಗೆ 1-2 ವರ್ಷ ಮತ್ತು 2-3 ವರ್ಷದ ಅವಧಿಗೆ ಠೇವಣಿ ಇರಿಸಿದವರಿಗೆ ಇದರ ಲಾಭ ಸಿಗಲಿದೆ.

English summary
State Bank of India hikes Fixed Deposit (FD) interest rates with effect from November 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X