ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐನ ನಿವ್ವಳ ಲಾಭಕ್ಕಿಂತ ಗ್ರಾಹಕರಿಂದ ವಸೂಲಾದ ದಂಡ ಮೊತ್ತ ಹೆಚ್ಚು

|
Google Oneindia Kannada News

Recommended Video

ನಿಮ್ಮ ಬ್ಯಾಂಕ್ ಖಾತೆಯಿಂದ ಅನಗತ್ಯ ಹಣ ಕಟ್ ಆಗೋದನ್ನ ತಡೆಯೋದು ಹೇಗೆ ? | Oneindia Kannada

ಬೆಂಗಳೂರು, ಜನವರಿ 4: ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣ ಇದೆ ಎಂದು ನೋಡಿಕೊಂಡಿದ್ದೀರಾ? ಕನಿಷ್ಠ ಮೊತ್ತವನ್ನು ಖಾತೆಯಲ್ಲಿ ಇಟ್ಟುಕೊಳ್ಳದ ಗ್ರಾಹಕರಿಂದ ದಂಡ ರೂಪದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಂಗ್ರಹಿಸಿರುವ ಮೊತ್ತ ಎಷ್ಟು ಗೊತ್ತಾ? 1771 ಕೋಟಿ ರುಪಾಯಿ.

ಅಗ್ಗವಾಗಲಿದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೌಸಿಂಗ್ ಲೋನ್ಅಗ್ಗವಾಗಲಿದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹೌಸಿಂಗ್ ಲೋನ್

ಈ ಮೊತ್ತ ಸಂಗ್ರಹಿಸಿರುವುದು 2017ರ ಏಪ್ರಿಲ್ ಹಾಗೂ ನವೆಂಬರ್ ಮಧ್ಯೆ. ಕನಿಷ್ಠ ಮೊತ್ತವನ್ನು ಯಾವ ಗ್ರಾಹಕರು ಖಾತೆಯಲ್ಲಿ ಇಟ್ಟಿಲ್ಲವೋ ಅಂಥವರಿಂದ ವಸೂಲಿ ಮಾಡಲಾಗಿದೆ. ಇನ್ನೊಂದು ತಮಾಷೆ ಗೊತ್ತಾ? ಜುಲೈ- ಸೆಪ್ಟೆಂಬರ್ ಮಧ್ಯದ ಬ್ಯಾಂಕ್ ನ ನಿವ್ವಳ ಲಾಭ 1581.55 ಕೋಟಿಯಾದರೆ, ದಂಡದ ಮೂಲಕ ಸಂಗ್ರಹಿಸಿದ ಮೊತ್ತ ಅದಕ್ಕೂ ಹೆಚ್ಚಿದೆ.

SBI Earns More In Penalty Than In regular business

ಇನ್ನು ಏಪ್ರಿಲ್- ಸೆಪ್ಟೆಂಬರ್ ಮಧ್ಯದ ಎಸ್ ಬಿಐ ನಿವ್ವಳ ಲಾಭ 3586 ಕೋಟಿ ರುಪಾಯಿ ಇದ್ದರೆ, ಗ್ರಾಹಕರಿಂದ ವಸೂಲು ಮಾಡಿದ ದಂಡದ ಮೊತ್ತು ಅದರ ಅರ್ಧಕ್ಕಿಂತ ಹೆಚ್ಚಿದೆ. ಕಳೆದ ಐದು ವರ್ಷಗಳಿಂದ ಈ ರೀತಿಯ ದಂಡ ಹಾಕದ ಬ್ಯಾಂಕ್ ಮತ್ತೊಮ್ಮೆ ಇದನ್ನು ಪರಿಚಯಿಸಿದೆ.

ತಮ್ಮ ಖಾತೆಯಲ್ಲಿ ಕನಿಷ್ಠ ಮೊತ್ತ ಶೇ ಎಪ್ಪತ್ತೈದಕ್ಕಿಂತ ಕಡಿಮೆ ಇಟ್ಟ ಗ್ರಾಹಕರ ಬಳಿ ನೂರು ರುಪಾಯಿ ಜತೆಗೆ ತೆರಿಗೆ ವಸೂಲು ಮಾಡುತ್ತದೆ ಬ್ಯಾಂಕ್. ಅದೇ ರೀತಿ ಐವತ್ತು ಹಾಗೂ ಇಪ್ಪತ್ತೈದು ರುಪಾಯಿ ಜತೆಗೆ ತೆರಿಗೆ ವಸೂಲು ಮಾಡುವುದೂ ಉಂಟು. ಒಟ್ಟಿನಲ್ಲಿ ಆರ್ಥಿಕ ಶಿಸ್ತು ರೂಢಿಸಿಕೊಳ್ಳದಿದ್ದರೆ ಕಣ್ಣಿಗೆ ಕಾಣದಂತೆಯೇ ಕಾಸಿಗೆ ಕತ್ತರಿ ಬೀಳುತ್ತದೆ.

English summary
SBI has collected more than 1000 crores in the penalty from its customers for not maintaining the minimum balance in their account. SBI is leading the charge with 1771 crores of rupees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X