ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್ ಬಿಐನಿಂದ ಬಡ್ಡಿದರ ಕಡಿತ, ಸಾಲ ಮಾಡಿ ತುಪ್ಪ ತಿನ್ನಿ!

By Mahesh
|
Google Oneindia Kannada News

ಮುಂಬೈ, ಸೆ. 30: ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ರೆಪೋ ದರವನ್ನು ಶೇ.0.5ರಷ್ಟು ಇಳಿಕೆ ಮಾಡಿದ ಬೆನ್ನಲ್ಲೇ ಭಾರತೀಯ ಸ್ಟೇಟ್ ಬ್ಯಾಂಕ್ ಮಾಸಿಕ ಕಂತುಗಳ ಮೇಲಿನ ಬಡ್ಡಿ ದರವನ್ನು ಶೇ.9.3ಕ್ಕೆ ಕಡಿತಗೊಳಿಸಿದೆ. ಇದರಿಂದ ಮನೆ, ವಾಹನ ಕೊಳ್ಳಲು ಸಾಲ ಪಡೆಯುವವರಿಗೆ ಅನುಕೂಲವಾಗಲಿದೆ.

ಎಸ್​ಬಿಐ ಸದ್ಯ ಮಹಿಳೆಯರಿಗೆ ಕೊಡುವ ಗೃಹ ಸಾಲದ ಮೇಲೆ ಶೇ.9.7ರಷ್ಟು ಬಡ್ಡಿ ವಿಧಿಸುತ್ತಿದೆ. ಇತರರಿಗೆ ಶೇ.9.75ರಷ್ಟು ಬಡ್ಡಿ ವಿಧಿಸುತ್ತಿದೆ. ಬಡ್ಡಿ ದರದ ಕಡಿತದಿಂದಾಗಿ ಅದೀಗ ಕ್ರಮವಾಗಿ ಶೇ.9.3 ಮತ್ತು ಶೇ.9.35ಕ್ಕೆ ಇಳಿಕೆಯಾಗಲಿದೆ. ಇದರ ಜೊತೆಗೆ ನಿಶ್ಚಿತ ಠೇವಣಿ (fixed deposit) ಮೇಲಿನ ಠೇವಣಿ ದರವನ್ನು ಶೇ 0.25ರಷ್ಟು ತಗ್ಗಿಸಲಾಗಿದೆ. ಕಡಿತಗೊಂಡ ಬಡ್ಡಿ ದರಗಳು ಅಕ್ಟೋಬರ್ 5ರಿಂದ ಜಾರಿಗೆ ಬರಲಿದೆ ಎಂದು ಎಸ್ ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.

ರೆಪೋ ದರ ಇಳಿಕೆಯಾದ ಕೂಡಲೇ ಬ್ಯಾಂಕುಗಳು ಬಡ್ಡಿದರ ಇಳಿಕೆ ಮಾಡಬೇಕು ಎಂಬ ನಿಯಮವೇನು ಇಲ್ಲ. ಅದರೆ, ಮಾರುಕಟ್ಟೆಯಲ್ಲಿ ಪೈಪೋಟಿ ಎದುರಿಸಲು ಈ ರೀತಿ ಕ್ರಮ ಹಾಗೂ ಆರ್ ಬಿಐ ನಿಂದ ಕೊಳ್ಳುವ ದರ ಸಮತೋಲನ ಕಾಯ್ದುಕೊಳ್ಳಲು ಅನಿವಾರ್ಯ ಕ್ರಮವಾಗಿದೆ. [ರೆಪೋ 50 ಮೂಲಾಂಶ ದರ ಕಡಿತ]

SBI Cuts Lending Rate By 0.4 Per cent To 9.3 Per cent

ಎಸ್​ಬಿಐ ನಂತರ ಆಂಧ್ರ ಬ್ಯಾಂಕ್ ಕೂಡಾ ಸೆ. 30ರಿಂದ ಅನ್ವಯವಾಗುವಂತೆ ಮೂಲಾಂಶದ ಶೇ 0.25ರಷ್ಟು ಅಥವಾ ಶೇ 9.75ಕ್ಕೆ ಬಡ್ಡಿದರವನ್ನು ಇಳಿಕೆ ಮಾಡಿದೆ.

ವಾಹನ ಸಾಲ, ಗೃಹ ಸಾಲ ವಿತರಿಸುವ ಎಚ್​ಡಿಎಫ್​ಸಿ ಮತ್ತು ಐಸಿಐಸಿಐ ಬ್ಯಾಂಕ್​ ಸೇರಿದಂತೆ ಇತರೆ ಪ್ರಮುಖ ಬ್ಯಾಂಕುಗಳು ಕೂಡಾ ಬಡ್ಡಿದರ ಇಳಿಸುವ ನಿರೀಕ್ಷೆ ಇದೆ.(ಪಿಟಿಐ)

English summary
Soon after reduction in repo rate by the Reserve Bank, country's largest lender State Bank of India (SBI) today slashed minimum lending or base rate by 0.4 per cent to 9.3 per cent, setting the trend for benign interest rate regime.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X