ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಳಿತಾಯ ಖಾತೆ ಬಡ್ಡಿದರ ಕಡಿತಗೊಳಿಸಿ ಗ್ರಾಹಕರಿಗೆ ಎಸ್.ಬಿ.ಐ ಶಾಕ್

By ಅನುಷಾ ರವಿ
|
Google Oneindia Kannada News

ಮುಂಬೈ, ಜುಲೈ 31: ಭಾರತೀಯ ಸ್ಟೇಟ್ ಬ್ಯಾಂಕ್ ಉಳಿತಾಯ ಖಾತೆ ಮೇಲಿನ ಬಡ್ಡಿದರವನ್ನು ಶೇಕಡಾ 4ರಿಂದ ಶೇಕಡಾ 3.5ಕ್ಕೆ ಇಳಿಕೆ ಮಾಡಿದೆ. 1 ಕೋಟಿ ರೂಪಾಯಿಗಿಂತ ಕಡಿಮೆ ಠೇವಣಿ ಇಟ್ಟ ಗ್ರಾಹಕರು ತಮ್ಮ ಉಳಿತಾಯ ಖಾತೆ ಮೇಲಿನ ಬಡ್ಡಿದರದಲ್ಲಿ ಶೇಕಡಾ 0.5ರಷ್ಟನ್ನು ಕಳೆದುಕೊಳ್ಳಲಿದ್ದಾರೆ.

ಎಸ್ ಬಿಐನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಎಸ್ ಬಿಐನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಾರ್ಷಿಕ ಸುಮಾರು 3700 ಕೋಟಿ ಉಳಿತಾಯದ ಗುರಿ ಹಾಕಿಕೊಂಡು ಸ್ಟೇಟ್ ಬ್ಯಾಂಕ್ ಬಡ್ಡಿದರದಲ್ಲಿ ಈ ಮಾರ್ಪಾಟು ಮಾಡಿದೆ. ಆದರೆ ಒಂದು ಕೋಟಿ ರೂಪಾಯಿಗೂ ಮೇಲಿನ ಉಳಿತಾಯ ಖಾತೆಗಳ ಮೇಲಿನ ಬಡ್ಡಿದರ ಶೇಕಡಾ 4ರಲ್ಲೇ ಮುಂದುವರಿಯಲಿದೆ.

SBI cuts interest rate on savings account deposits

ಅಪನಗದೀಕರಣದ ನಂತರ ಎಸ್ಬಿಐ ನಲ್ಲಿ ಗ್ರಾಹಕರು ಭಾರೀ ಹಣವನ್ನು ಡೆಪಾಸಿಟ್ ಮಾಡಿದ್ದರು. ಇದರಿಂದ ಬ್ಯಾಂಕ್ ನಷ್ಟ ಅನುಭವಿಸು ಆತಂಕ ಎದುರಾಗಿತ್ತು. ಇದರ ಪರಿಣಾಮ ಎಂಬಂತೆ ಬಡ್ಡಿದರದಲ್ಲಿ ಕಡಿತ ಮಾಡಲಾಗಿದೆ.

ನೆಟ್ ಬ್ಯಾಂಕಿಂಗ್ ಫಂಡ್ ಟ್ರಾನ್ಸ್ ಫರ್ ಮೇಲಿನ ಶುಲ್ಕ ಇಳಿಕೆ ನೆಟ್ ಬ್ಯಾಂಕಿಂಗ್ ಫಂಡ್ ಟ್ರಾನ್ಸ್ ಫರ್ ಮೇಲಿನ ಶುಲ್ಕ ಇಳಿಕೆ

ಮಾರ್ಚ್ 31, 2017ರಂತೆ ಎಸ್ಬಿಐನಲ್ಲಿ 7.43 ಲಕ್ಷ ಕೋಟಿ ರೂಪಾಯಿ ಉಳಿತಾಯ ಖಾತೆಗಳಲ್ಲಿ ಠೇವಣಿ ಇಡಲಾಗಿತ್ತು. ಒಟ್ಟಾರೆ ಬ್ಯಾಂಕ್ ನ ಠೇವಣಿಯಲ್ಲಿ ಇವುಗಳ ಪಾಲೇ ಶೇಕಡಾ 36.4ರಷ್ಟಾಗುತ್ತದೆ.

English summary
The State Bank of India has cut down interest rates on savings account deposits to 3.5 per cent from the current 4 per cent. Customers with less than Rs 1 crore deposits in savings account will lose out 0.5 per cent interest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X