ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಸ್‌ಬಿಐ ಗ್ರಾಹಕರಿಗೆ ಸೂಚನೆ: FD ಬಡ್ಡಿದರ ಇಳಿಕೆ

|
Google Oneindia Kannada News

ಬೆಂಗಳೂರು, ಮೇ 27: ಸರ್ಕಾರಿ ಸ್ವಾಮ್ಯದ ಅತಿದೊಡ್ದ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ(ಎಸ್‌ಬಿಐ) ತನ್ನ ಗ್ರಾಹಕರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಮೇ 27ರಿಂದ ಜಾರಿಗೆ ಬರುವಂತೆ ನಿಶ್ಚಿತ ಠೇವಣಿ(fixed deposit) ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಿದೆ.

Recommended Video

Vijay Mallya ask Govt to accept repayment of loan and close the case | Oneindia Kannada

ಎಸ್ ಬಿಐ ವೆಬ್ ತಾಣದಲ್ಲಿ ಪ್ರಕಟವಾಗಿರುವ ಮಾಹಿತಿಯಂತೆ, ಬಡ್ಡಿದರವನ್ನು 40 bps ನಷ್ಟು ತಗ್ಗಿಸಲಾಗಿದೆ. ಈ ಮುಂಚೆ ಮೇ 12ರಂದು 20 ಬಿಪಿಎಸ್ ನಷ್ಟು ತಗ್ಗಿಸಲಾಗಿತ್ತು.

44.51 ಕೋಟಿ ಗ್ರಾಹಕರಿಗೆ ಶುಭ ಸುದ್ದಿ ಕೊಟ್ಟ ಎಸ್ಬಿಐ44.51 ಕೋಟಿ ಗ್ರಾಹಕರಿಗೆ ಶುಭ ಸುದ್ದಿ ಕೊಟ್ಟ ಎಸ್ಬಿಐ

ಇದೇ ವೇಳೆ ಬೃಹತ್ ಠೇವಣಿ (2 ಕೋಟಿ ಅಥವಾ ಅದಕ್ಕಿಂತ ಅಧಿಕ ಹೂಡಿಕೆ)ಗಳ ಮೇಲಿನ ಬಡ್ಡಿದರಗಳನ್ನು 50 ಬೇಸಿಸ್‌ ಪಾಯಿಂಟ್‌ಗಳಿಂದ ಕಡಿತಗೊಳಿಸಿದೆ. ಮೇ 22ರಂದು ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು 40 ಬಿಪಿಎಸ್ ತಗ್ಗಿಸಿ ಶೇ 4ಕ್ಕೆ ಇಳಿಸಿತ್ತು. ರಿವರ್ಸ್ ರೆಪೋ ದರ ಕೂಡಾ 40 ಬಿಪಿಎಸ್ ತಗ್ಗಿಸಿ ಶೇ 3.35ಕ್ಕೆ ಇಳಿಕೆಯಾಗಿತ್ತು.

SBI cuts interest on fixed deposit rates check out new rates

 ಮಾರ್ಚ್ 01ರಿಂದ ಬ್ಯಾಂಕಿಂಗ್ ವಹಿವಾಟಿನಲ್ಲಿ ಏನೇನು ಬದಲಾವಣೆ? ಮಾರ್ಚ್ 01ರಿಂದ ಬ್ಯಾಂಕಿಂಗ್ ವಹಿವಾಟಿನಲ್ಲಿ ಏನೇನು ಬದಲಾವಣೆ?

ಮೇ 27ರಿಂದ ಜಾರಿಗೆ ಬಂದಿರುವ ನಿಶ್ಚಿತ ಠೇವಣಿ ಮೇಲಿನ ಪರಿಷ್ಕೃತ ಬಡ್ಡಿದರ ಹೀಗಿದೆ:

* 7 ದಿನಗಳಿಂದ 45 ದಿನಗಳವರೆಗಿನ FDಗೆ ಬಡ್ಡಿದರ ಶೇ 2.90

* 46 ದಿನಗಳಿಂದ 179 ದಿನಗಳವರೆಗೆ FDಗೆ ಬಡ್ಡಿದರ ಶೇ 3.9

* 180 ದಿನಗಳಿಂದ 210 ದಿನಗಳವರೆಗೆ FDಗೆ ಬಡ್ಡಿದರ ಶೇ 4.4

* 1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ ಅವಧಿಗೆ ಶೇ 5.1

* 3 ವರ್ಷದಿಂದ 5 ವರ್ಷಗಳಿಗಿಂತ ಕಡಿಮೆ ಅವಧಿಗೆ ಶೇ 5.3

* 5 ವರ್ಷಗಳು ಮತ್ತು 10 ವರ್ಷಗಳ ಅವಧಿಗೆ ಶೇ 5.4

ಹಿರಿಯ ನಾಗರಿಕರಿಗೆ:
* 7 ದಿನಗಳಿಂದ 45 ದಿನಗಳವರೆಗಿನ FDಗೆ ಬಡ್ಡಿದರ ಶೇ 3.4

* 46 ದಿನಗಳಿಂದ 179 ದಿನಗಳವರೆಗೆ FDಗೆ ಬಡ್ಡಿದರ ಶೇ 4.4

* 180 ದಿನಗಳಿಂದ 210 ದಿನಗಳವರೆಗೆ FDಗೆ ಬಡ್ಡಿದರ ಶೇ 4.9
* 211 ದಿನಗಳಿಂದ 365ದಿನಗಳವರೆಗೆ FDಗೆ ಬಡ್ಡಿದರ ಶೇ 4.9

* 1 ವರ್ಷದಿಂದ 3 ವರ್ಷಕ್ಕಿಂತ ಕಡಿಮೆ ಅವಧಿಗೆ ಶೇ 5.6

* 3 ವರ್ಷದಿಂದ 5 ವರ್ಷಗಳಿಗಿಂತ ಕಡಿಮೆ ಅವಧಿಗೆ ಶೇ 5.8

* 5 ವರ್ಷಗಳು ಮತ್ತು 10 ವರ್ಷಗಳ ಅವಧಿಗೆ ಶೇ 6.2

English summary
(SBI) has cut interest rates on fixed deposits (FDs) by up to 40 basis points (bps) across all tenors. The new rates on retail term deposits are applicable from May 27.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X