• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೆ.18ರಿಂದ ಎಸ್ಬಿಐ ಒಟಿಪಿ ಆಧಾರಿತ ವಿಥ್ ಡ್ರಾ ನಿಯಮ ಬದಲಾವಣೆ

|

ನವದೆಹಲಿ, ಸೆ. 16: ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್.ಬಿ.ಐ) ಆರ್ ಟಿ ಜಿಎಸ್ ಹಾಗೂ ಎನ್ ಇಎಫ್ ಟಿ ಸೌಲಭ್ಯಗಳ ಶುಲ್ಕ ತಗ್ಗಿಸಿದೆ. ಇದರ ಬೆನ್ನಲ್ಲೇ ಎಟಿಎಂ ವ್ಯವಹಾರದಲ್ಲಿ ಭಾರಿ ಬದಲಾವಣೆ ಮಾಡಿದೆ. ಈಗ ಎಟಿಎಂ ವಿಥ್ ಡ್ರಾ ಮಿತಿ, ಶುಲ್ಕ ತಲೆನೋವು ಮರೆತು ಕಾರ್ಡ್ ಇಲ್ಲದೆ ಕ್ಯಾಶ್ ಪಡೆಯುವ ಸೌಲಭ್ಯವನ್ನು ಗ್ರಾಹಕರಿಗೆ ಎಸ್ಬಿಐ ಒದಗಿಸುತ್ತಿದೆ.

ಎಟಿಎಂಗಳಲ್ಲಿ ದಿನವಿಡಿ ಒನ್ ಟೈಮ್ ಪಾಸ್ವರ್ಡ್ ಆಧಾರಿತ ಎಟಿಎಂ ವಿತ್ ಡ್ರಾ ಸೌಲಭ್ಯವನ್ನು ಎಸ್‌ಬಿಐ ಜಾರಿಗೆ ತರುತ್ತಿದೆ. ಸೆಪ್ಟೆಂಬರ್ 18 ರಿಂದ ದೇಶದ ಎಲ್ಲಾ ಎಸ್‌ಬಿಐ ಎಟಿಎಂಗಳಲ್ಲಿ ಲಭ್ಯವಾಗಲಿದೆ.

ಅಕ್ಟೋಬರ್ 01ರಿಂದ ಎಸ್ಬಿಐ ಎಟಿಎಂ ವಿಥ್ ಡ್ರಾದಲ್ಲಿ ಭಾರಿ ಬದಲಾವಣೆ

ಜನವರಿ 1 ರಿಂದ ಒಟಿಪಿ ಆಧಾರಿತ ಎಟಿಎಂ ಹಣ ವಿತ್ ಡ್ರಾ ಸೌಲಭ್ಯವನ್ನು ಎಸ್‌ಬಿಐ ಜಾರಿಗೆ ತಂದಿದೆ. ಈ ಸೌಲಭ್ಯದಲ್ಲಿ ಎಟಿಎಂನಿಂದ ರಾತ್ರಿ 8 ರಿಂದ ಬೆಳಿಗ್ಗೆ 8 ರವರೆಗೆ 10,000 ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡಲು ಒಟಿಪಿ ಅಗತ್ಯವಿತ್ತು. ಆದರೆ, ಸೆ. 18ರಿಂದ ಎಟಿಎಂನಿಂದ ಎಲ್ಲಾ ವಿತ್ ಡ್ರಾಗೆ ಒಟಿಪಿ ಅನಿವಾರ್ಯವಾಗಲಿದೆ.

ದಿನದ 24ಗಂಟೆಗಳ ಕಾಲ ಲಭ್ಯವಾಗಲಿರುವ ಸೌಲಭ್ಯ

ದಿನದ 24ಗಂಟೆಗಳ ಕಾಲ ಲಭ್ಯವಾಗಲಿರುವ ಸೌಲಭ್ಯ

ದಿನದ 24ಗಂಟೆಗಳ ಕಾಲ ಲಭ್ಯವಾಗಲಿರುವ ಒಟಿಪಿ ಆಧಾರಿತ ನಗದು ವಿಥ್ ಡ್ರಾ ಸೌಲಭ್ಯವು ಎಸ್.ಬಿ.ಐ. ಎಟಿಎಂನಲ್ಲಿ ಮಾತ್ರ ಲಭ್ಯವಿರಲಿದೆ. ಇದು ಹೆಚ್ಚಿನ ಭದ್ರತೆ ಒದಗಿಸಲಿದೆ. ನೋಂದಾಯಿತ ಮೊಬೈಲ್ ಫೋನಿಗೆ ಮಾತ್ರ ಒಟಿಪಿ ಬರಲಿದೆ. ಅನಧಿಕೃತ ವಿಥ್ ಡ್ರಾ, ವಂಚನೆ, ಕಾರ್ಡ್ ಸ್ಕಿಮ್ಮಿಂಗ್,ಕಾರ್ಡ್ ಕ್ಲೋನಿಂಗ್ ಗಳನ್ನು ತಪ್ಪಿಸಬಹುದು ಎಂದು ಸಂಸ್ಥೆ ಹೇಳಿದೆ.

ಒಟಿಪಿ ಆಧಾರಿತ ಸೌಲಭ್ಯ ಕಾರ್ಯ ಹೇಗೆ?

ಒಟಿಪಿ ಆಧಾರಿತ ಸೌಲಭ್ಯ ಕಾರ್ಯ ಹೇಗೆ?

ಎಟಿಎಂ ನಲ್ಲಿ ವಿತ್ ಡ್ರಾ ಮಾಡಲು ಎಷ್ಟು ಹಣ ಬೇಕು ಎಂದು ಟೈಪ್ ಮಾಡಿದಾಗ ಡಿಸ್ಪ್ಲೇ ಸ್ಕ್ರೀನ್ ಮೇಲೆ ಒಟಿಪಿ ಕೇಳುತ್ತದೆ. ಮೊಬೈಲ್ ಫೋನಿಗೆ ಬಂದ ಒಟಿಪಿ ಟೈಪ್ ಮಾಡಿದ ನಂತರ ಮಾತ್ರ ಹಣ ವಿತ್ ಡ್ರಾ ಮಾಡಬಹುದಾಗಿದೆ. ಗ್ರಾಹಕರು ನೋಂದಾಯಿತ ಮೊಬೈಲ್ ಫೋನ್ ಕೆವೈಸಿ ಅಪ್ಡೇಟ್ ಮಾಡುವುದು ಅಗತ್ಯ.

ಎಸ್ಬಿಐ ಎಟಿಎಂ ವಿಥ್ ಡ್ರಾ ರಗಳೆ ಬಿಡಿ, ಕಾರ್ಡ್ ಇಲ್ಲದೆ ಕ್ಯಾಶ್ ಪಡೆಯಿರಿ

ಎಸ್ಬಿಐ ಎಟಿಎಂ ವಿಥ್ ಡ್ರಾ ಬದಲಾವಣೆಗಳು

ಎಸ್ಬಿಐ ಎಟಿಎಂ ವಿಥ್ ಡ್ರಾ ಬದಲಾವಣೆಗಳು

ನಗರ ಪ್ರದೇಶಗಳಲ್ಲಿ ಪ್ರತಿ ತಿಂಗಳ ಬ್ಯಾಲೆನ್ಸ್ ಮಿತಿ (average monthly balance(AMB)) 5,000 ರು ನಿಂದ 3,000 ರು ಗಿಳಿಸಲಾಗಿದೆ. ಅರೆ ನಗರ ಪ್ರದೇಶಕ್ಕೆ 2,000 ರು, ಗ್ರಾಮಾಂತರ ಪ್ರದೇಶಕ್ಕೆ 1,000 ರು ಮಿತಿ ನೀಡಲಾಗಿದೆ. ಇದಲ್ಲದೆ Real Time Gross Settlement (RTGS) ಹಾಗೂ National Electronic Fund Transfer (NEFT) ಡಿಜಿಟಲ್ ಮಾದರಿ ವ್ಯವಹಾರ ಸಂಪೂರ್ಣ ಉಚಿತವಾಗಿದೆ. ಆದರೆ, ಯಾವುದೇ ಬ್ರ್ಯಾಂಚ್ ನಲ್ಲಿ ಈ ಸೇವೆ ಬಳಸಿದರೆ ಶುಲ್ಕ ತೆರಬೇಕಾಗುತ್ತದೆ.

  Pakistan, OIC ,Turkeyನ ತರಾಟೆಗೆ ತಗೊಂಡ India | Oneindia Kannada
  RTGS ಹಾಗೂ NEFT ಬದಲಾವಣೆ

  RTGS ಹಾಗೂ NEFT ಬದಲಾವಣೆ

  Real Time Gross Settlement (RTGS) ಹಾಗೂ National Electronic Fund Transfer (NEFT) ಡಿಜಿಟಲ್ ಮಾದರಿ ವ್ಯವಹಾರ ಸಂಪೂರ್ಣ ಉಚಿತವಾಗಿದೆ. ಆದರೆ, ಯಾವುದೇ ಬ್ರ್ಯಾಂಚ್ ನಲ್ಲಿ ಈ ಸೇವೆ ಬಳಸಿದರೆ ಶುಲ್ಕ ತೆರಬೇಕಾಗುತ್ತದೆ.

  * 2 ಲಕ್ಷ ರು ನಿಂದ 5 ಲಕ್ಷ ರು ತನಕದ RTGSಗೆ 20 ರು ಪ್ಲಸ್ ಜಿಎಸ್ಟಿ, 5 ಲಕ್ಷ ಮೇಲ್ಪಟ್ಟರೆ 40 ರು ಪ್ಲಸ್ ಜಿಎಸ್ಟಿ ತಗುಲಲಿದೆ.

  * NEFT 10,000 ರು ತನಕದ ವರ್ಗಾವಣೆಗೆ 2 ರು ಪ್ಲಸ್ ಜಿಎಸ್ಟಿ

  * NEFT 10,000 ರು ನಿಂದ 1 ಲಕ್ಷ ರು ತನಕದ ವರ್ಗಾವಣೆಗೆ 4 ರು ಪ್ಲಸ್ ಜಿಎಸ್ಟಿ

  * NEFT 1 ಲಕ್ಷ ರು ನಿಂದ 2 ಲಕ್ಷ ರು ತನಕದ ವರ್ಗಾವಣೆಗೆ 12 ರು ಪ್ಲಸ್ ಜಿಎಸ್ಟಿ

  * NEFT 2 ಲಕ್ಷ ರು ಮೇಲ್ಪಟ್ಟ ವರ್ಗಾವಣೆಗೆ 20 ರು ಪ್ಲಸ್ ಜಿಎಸ್ಟಿ

  English summary
  From September 18, the State Bank of India (SBI) customers will be able to avail the one-time password (OTP) based cash withdrawal facility throughout the day.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X