ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಗ್ರಾಹಕರೇ ಓದಿ: ಜುಲೈ 1ರಿಂದ ಆಗುತ್ತಿರುವ ಬದಲಾವಣೆ ಬಗ್ಗೆ ತಿಳಿಯಿರಿ

|
Google Oneindia Kannada News

ನವದೆಹಲಿ, ಜುಲೈ 01: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಬೆಲೆ ಏರಿಕೆ ಬಿಸಿ ಸಾರ್ವಜನಿಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಇದರ ಮಧ್ಯೆ ದೇಶದ ಸರ್ಕಾರಿ ಹಾಗೂ ಖಾಸಗಿ ಬ್ಯಾಂಕುಗಳು ತಮ್ಮ ನಿಯಮಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿವೆ. ಜುಲೈ 1ರಿಂದ ಯಾವ ಬ್ಯಾಂಕಿನಲ್ಲಿ ಏನೆಲ್ಲ ಬದಲಾವಣೆಗಳು ಆಗುತ್ತವೆ ಎಂಬುದನ್ನು ಗ್ರಾಹಕರು ಇಲ್ಲಿ ಓದಿ ತಿಳಿದುಕೊಳ್ಳಿ.

ಭಾರತೀಯ ಸ್ಟೇಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಸಿಂಡಿಕೇಟ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸೇರಿದಂತೆ ಹಲವು ಬ್ಯಾಂಕುಗಳು ಹೊಸ ನಿಯಮಗಳನ್ನು ಜುಲೈ 1ರಿಂದ ಜಾರಿಗೊಳಿಸಿವೆ. ಕೆನಡಾ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕ್ ಕೂಡಾ ಬದಲಾವಣೆಗೆ ತೆರೆದುಕೊಂಡಿವೆ.

ಗ್ರಾಹಕರೇ ಗಮನಿಸಿ: ಜುಲೈ1 ರಿಂದ ಆಗಲಿದೆ ಈ 7 ಬದಲಾವಣೆ ಗ್ರಾಹಕರೇ ಗಮನಿಸಿ: ಜುಲೈ1 ರಿಂದ ಆಗಲಿದೆ ಈ 7 ಬದಲಾವಣೆ

ದೇಶದ ಈ ಪ್ರಮುಖ ಬ್ಯಾಂಕುಗಳಲ್ಲಿ ಯಾವೆಲ್ಲ ನಿಯಮಗಳು ಬದಲಾವಣೆಗಳು ಆಗಿವೆ. ಯಾವ ಬ್ಯಾಂಕಿನ ಗ್ರಾಹಕರು ಯಾವ ನಿಯಮ ಅಥವಾ ಬದಲಾವಣೆಯ ಬಗ್ಗೆ ತಿಳಿದುಕೊಳ್ಳಬೇಕು ಎಂಬುದರ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಜುಲೈ 1ರಿಂದ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಸಾಮಾನ್ಯ ಉಳಿತಾಯ ಹಣ ಪಾವತಿ ಖಾತೆ(BSBD)ಯನ್ನು ಹೊಂದಿರುವ ಗ್ರಾಹಕರು ಒಂದು ತಿಂಗಳಿನಲ್ಲಿ ಗ್ರಾಹಕರು ಎಟಿಎಂ ಅಥವಾ ಬ್ಯಾಂಕಿನ ಮೂಲಕ ಕೇವಲ ನಾಲ್ಕು ಬಾರಿ ಮಾತ್ರ ಹಣವನ್ನು ತೆಗೆದುಕೊಳ್ಳುವುದಕ್ಕೆ ಅನುಮತಿ. ಐದನೇ ಬಾರಿ ಬ್ಯಾಂಕು ಅಥವಾ ಎಟಿಎಂ ಮೂಲಕ ಹಣವನ್ನು ವಿತ್ ಡ್ರಾ ಮಾಡಿಕೊಂಡರೆ, 15 ರೂಪಾಯಿ ಹೆಚ್ಚುವರಿ ಜಿಎಸ್ ಟಿ ಹಣವನ್ನು ಪಾವತಿ ಮಾಡಬೇಕಾಗುತ್ತದೆ.

ಎಸ್ ಬಿಐ ಬ್ಯಾಂಕಿನ ಚೆಕ್ ಬುಕ್ ದರವನ್ನು ಕೂಡ ಪರಿಷ್ಕರಿಸಲಾಗಿದೆ. ಸಾಮಾನ್ಯ ಉಳಿತಾಯ ಖಾತೆ ಹಣ ಪಾವತಿಸುವ ಗ್ರಾಹಕರು 10 ಚೆಕ್ ವುಳ್ಳ ಒಂದು ಬುಕ್ಕಿಗೆ 40 ರೂಪಾಯಿ ಹಾಗೂ ಜಿಎಸ್ ಟಿ ಹಣ ಪಾವತಿಸಬೇಕಿದೆ. 25 ಚೆಕ್ ವುಳ್ಳ ಬುಕ್ಕಿಗೆ 75 ರೂಪಾಯಿ ಜೊತೆಗೆ ಜಿಎಸ್ ಟಿ ಹಣವನ್ನು ನೀಡಬೇಕಾಗುತ್ತದೆ.

ಸಿಂಡಿಕೇಟ್ ಹಾಗೂ ಕೆನರಾ ಬ್ಯಾಂಕ್

ಸಿಂಡಿಕೇಟ್ ಹಾಗೂ ಕೆನರಾ ಬ್ಯಾಂಕ್

ಜುಲೈ 1ರಿಂದ ಸಿಂಡಿಕೇಟ್ ಬ್ಯಾಂಕಿನ ಐಎಫ್ಎಸ್ ಸಿ ಕೋಡ್ ಬದಲಾವಣೆ ಆಗಲಿದೆ. ಕಳೆದ ವರ್ಷ ರಿಸರ್ವ್ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಿತ್ತು. ಈ ಹಿನ್ನೆಲೆ ಜುಲೈ 1ರಿಂದ ಸಿಂಡಿಕೇಟ್ ಬ್ಯಾಂಕಿನ ಕೋಡ್ ಬದಲಾಯಿಸಲಾಗುತ್ತಿದೆ. ಅನ್ಯ ಬ್ಯಾಂಕಿನ ಮೂಲಕ ಹಣವನ್ನು ಪಡೆಯುವ ಗ್ರಾಹಕರು ಸಿಂಡಿಕೇಟ್ ಬ್ಯಾಂಕಿನ ತಮ್ಮ ಹಳೆಯ ಐಎಫ್ಎಸ್ ಸಿ ಹಿಂದೆ 10000 ಎಂಬ ಸಂಖ್ಯೆಯನ್ನು ಸೇರಿಸಬೇಕಾಗುತ್ತದೆ. ಉದಾಹರಣೆಗೆ ಹಳೆಯ ಐಎಫ್ಎಸ್ ಸಿ ಕೋಡ್ SYNB0003687 ಎಂದು ಇದ್ದರೆ, ಹೊಸ ಐಎಫ್ಎಸ್ ಸಿ ಕೋಡ್ CNRB0013687 ಎಂದು ಬರೆಯಬೇಕಾಗುತ್ತದೆ.

ಐಡಿಬಿಐ ಬ್ಯಾಂಕಿನಲ್ಲಿ ಒಂದು ಚೆಕ್ ಗೆ 5 ರೂ.

ಐಡಿಬಿಐ ಬ್ಯಾಂಕಿನಲ್ಲಿ ಒಂದು ಚೆಕ್ ಗೆ 5 ರೂ.

ಭಾರತದ ಐಡಿಬಿಐ ಬ್ಯಾಂಕ್ ಜುಲೈ 1ರಿಂದ ಕೇವಲ 20 ಚೆಕ್ ಅನ್ನು ಮಾತ್ರ ಉಚಿತವಾಗಿ ನೀಡುತ್ತದೆ. ತದನಂತರದಲ್ಲಿ ಪ್ರತಿಯೊಂದು ಚೆಕ್ ಲೀಫ್ ಗೆ 5 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಇದರ ಮಧ್ಯೆ ಐಡಿಬಿಐ ಬ್ಯಾಂಕಿನಲ್ಲಿ 'ಸಬ್ ಕಾ ಸೇವಿಂಗ್ಸ್ ಅಕೌಂಟ್' ಖಾತೆದಾರರು ಈ ನಿಯಮದಿಂದ ಹೊರತಾಗಿದ್ದಾರೆ.

ಎರಡು ಬ್ಯಾಂಕಿನ ಗ್ರಾಹಕರಿಗೆ ಹೊಸ ಚೆಕ್ ಬುಕ್

ಎರಡು ಬ್ಯಾಂಕಿನ ಗ್ರಾಹಕರಿಗೆ ಹೊಸ ಚೆಕ್ ಬುಕ್

ಆಂಧ್ರ ಬ್ಯಾಂಕ್ ಹಾಗೂ ಕಾರ್ಪೋರೇಷನ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕಿನೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ ವಿಲೀನಗೊಳಿಸಿದೆ. ಈ ಹಿನ್ನೆಲೆ ಜುಲೈ 1ರಿಂದ ಎರಡೂ ಬ್ಯಾಂಕಿನ ಗ್ರಾಹಕರಿಗೆ ಹೊಸ ಚೆಕ್ ಬುಕ್ ಅನ್ನು ವಿತರಿಸಲಾಗುತ್ತದೆ.

ಬ್ಯಾಂಕ್ ಆಫ್ ಬರೋಡಾ IFSC ಕೋಡ್

ಬ್ಯಾಂಕ್ ಆಫ್ ಬರೋಡಾ IFSC ಕೋಡ್

ಕಳೆದ 2019ರಂದೇ ವಿಜಯ ಬ್ಯಾಂಕ್ ಹಾಗೂ ದೇನಾ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡಾ ಜೊತೆಗೆ ವಿಲೀನಗೊಳಿಸಲಾಗಿತ್ತು. ಅದರ ಹೊರತಾಗಿ ಜೂನ್ 30ರವರೆಗೂ ತಮ್ಮ ಬ್ಯಾಂಕಿನ ಹಳೆಯ IFSC ಕೋಡ್ ಅನ್ನು ಬಳಸುವುದಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಜುಲೈ 1ರಿಂದ ಎರಡೂ ಬ್ಯಾಂಕಿನ ಗ್ರಾಹಕರು ತಮಗೆ ನೀಡಿರುವ ಹೊಸ ಐಎಫ್ಎಸ್ ಸಿ ಕೋಡ್ ಅನ್ನು ಬಳಸುವುದು ಕಡ್ಡಾಯವಾಗಿದೆ.

Recommended Video

ಸಿದ್ದರಾಮಯ್ಯ ಮುಂದೆ ನಡೀಲಿಲ್ಲ ಡಿಕೆಶಿ ಆಟ | Karnataka Congress Inside Politics | Oneindia Kannada
ಒಂದು ಸಂದೇಶಕ್ಕೆ 25 ಪೈಸೆ

ಒಂದು ಸಂದೇಶಕ್ಕೆ 25 ಪೈಸೆ

ಆಕ್ಸಿಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುವ ಎಸ್ಎಂಎಸ್ ಅಲರ್ಟ್ ಸಂದೇಶಗಳಿಗೂ ಶುಲ್ಕ ವಿಧಿಸುವುದಕ್ಕೆ ತೀರ್ಮಾನಿಸಿದೆ. ಹಣ ಡೆಪಾಸಿಟ್ ಮತ್ತು ವಿತ್ ಡ್ರಾಗೆ ಸಂಬಂಧಿಸಿದಂತೆ ಬ್ಯಾಂಕಿನಿಂದ ಹೋಗುವ ಒಂದು ಸಂದೇಶಕ್ಕೆ 25 ಪೈಸೆ ಶುಲ್ಕ ವಿಧಿಸಲಾಗುತ್ತದೆ. ಒಂದು ತಿಂಗಳಿಗೆ ಗರಿಷ್ಠ 25 ರೂಪಾಯಿ ಶುಲ್ಕ ವಿಧಿಸುವುದಕ್ಕೆ ಅವಕಾಶವಿದೆ. ಆದರೆ ಓಟಿಪಿ ರೀತಿಯ ಸಂದೇಶಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.

English summary
SBI, Axis, IDBI, other banks change rules from July 1: Everything you need to know in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X