ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪನಗದೀಕರಣ: ಎಸ್ಬಿಐ ಉದ್ಯೋಗಿಗಳ OT ಪೇಮೆಂಟ್ ಗೆ ಕುತ್ತು

By Mahesh
|
Google Oneindia Kannada News

Recommended Video

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( ಎಸ್ ಬಿ ಐ ) ಉದ್ಯೋಗಿಗಳಿಗೆ ಬಂತು ಕುತ್ತು | Oneindia Kannada

ಬೆಂಗಳೂರು, ಜುಲೈ 17: ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ತನ್ನ ಉದ್ಯೋಗಿಗಳಿಗೆ ನೀಡಿದ್ದ 'ಓವರ್ ಟೈಮ್' ಸಂಭಾವನೆಯನ್ನು ಹಿಂತಿರುಗಿಸುವಂತೆ ಸೂಚಿಸಿದೆ.

ಅಪನಗದೀಕರಣದ ವೇಳೆಯಲ್ಲಿ ಪಡೆದುಕೊಂಡಿದ್ದ OT ಪೇಮೆಂಟ್ ಮರು ಪಾವತಿ ಮಾಡುವಂತೆ ಸರಿ ಸುಮಾರು 70 ಸಾವಿರ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ.

ಎಸ್ ಬಿಐ ಗ್ರಾಹಕರಿಗೊಂದು ಸಮಾಧಾನಕರ ಸುದ್ದಿ!ಎಸ್ ಬಿಐ ಗ್ರಾಹಕರಿಗೊಂದು ಸಮಾಧಾನಕರ ಸುದ್ದಿ!

2016ರ ನವೆಂಬರ್ 14ರಿಂದ ಡಿಸೆಂಬರ್ 30ರ ತನಕ, ಕೆಲಸದ ಅವಧಿ ನಂತರವೂ ಕಾರ್ಯ ನಿರ್ವಹಿಸಿದ್ದ ಸಿಬ್ಬಂದಿಗಳಿಗೆ ಹೆಚ್ಚುವರಿ ಮೊತ್ತ ಸಿಕ್ಕಿತ್ತು. ಸಂಬಳವಲ್ಲದೆ 15,000 ರಿಂದ 30,000 ರು ತನಕ ಓಟಿ ಪೇಮೆಂಟ್ ಪಡೆದುಕೊಂಡಿದ್ದರು.

SBI asks to employees return demonetisation overtime payment

ಆದರೆ, ಈಗ ಈ ಮೊತ್ತವನ್ನು ಹಿಂತಿರುಗಿಸಲು ಸೂಚಿಸಲಾಗಿದೆ ಎಂದು ಬೋನಸ್ ಬ್ರಾಂಚ್ ಅಧಿಕಾರಿಗಳು ಹೇಳಿದ್ದಾರೆ. ಓವರ್ ಟೈಮ್ ಹೆಚ್ಚುವರಿ ಸಂಬಳವನ್ನು ಎಸ್ಬಿಐ ಉದ್ಯೋಗಿಗಳಿಗೆ ಮಾತ್ರ ನೀಡಲಾಗುವುದು. ವಿಲೀನಗೊಂಡಿರುವ ಸಹವರ್ತಿ ಬ್ಯಾಂಕುಗಳಿಗೆ ನೀಡುವುದಿಲ್ಲ ಎಂದು ಆದೇಶಿಸಲಾಗಿದೆ.

ಎಸ್ಬಿಐನ 1,300 ಶಾಖೆಗಳ IFSC ಬದಲು, ಚೆಕ್ ಮಾಡಿಎಸ್ಬಿಐನ 1,300 ಶಾಖೆಗಳ IFSC ಬದಲು, ಚೆಕ್ ಮಾಡಿ

ಏಪ್ರಿಲ್ 01, 2017ರಂದು ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಾಂಕೂರ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಹಾಗೂ ಜೈಪುರಗಳು ಎಸ್ಬಿಐ ಜತೆ ವಿಲೀನಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಎಸ್ಬಿಐ ಕ್ರಮಕ್ಕೆ ಸಹವರ್ತಿ ಬ್ಯಾಂಕಿನ ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
The largest public sector lender State Bank of India has ordered all its zonal branches to recover the ‘compensation’ given for overtime during demonetisation to 70,000-odd officers of various associate banks that were inducted into SBI post-merger.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X