ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೀಟೈಲ್ ಗ್ರಾಹಕರಿಗೆ ಎಸ್ಬಿಐನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ

|
Google Oneindia Kannada News

ಮುಂಬೈ, ಆಗಸ್ಟ್ 20: ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ (ಎಸ್‌ಬಿಐ) ಇಂದು ಹಬ್ಬದ ಈ ಋತುವಿನಲ್ಲಿ ತನ್ನ ಗ್ರಾಹಕರಿಗಾಗಿ ವಿವಿಧ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ. ಗ್ರಾಹಕರು ಈಗ ಆಕರ್ಷಕ, ಅಗ್ಗದ ದರ ಸಾಲವನ್ನು ಹೆಚ್ಚುವರಿ ಅನುಕೂಲಗಳೊಂದಿಗೆ ಪಡೆಯಬಹುದು. ಸಂಸ್ಕರಣಾ ಶುಲ್ಕ ಇಲ್ಲ. ಪೂರ್ವ ಅನುಮೋದಿತ ಡಿಜಿಟಲ್ ಲೋನ್, ಕಡಿಮೆ ಬಡ್ಡಿ ದರದ ಸಾಲ ಸೇರಿ ವಿವಿಧ ಸೌಲಭ್ಯಗಳು ಇಲ್ಲಿವೆ.

ಎಸ್‌ಬಿಇಐ ಈ ಹಬ್ಬದ ಋತುವಿನ ಕೊಡುಗೆ ಅವಧಿಯಲ್ಲಿ ಕಾರು ಖರೀದಿ ಸಾಲಗಳ ಮೇಲೆ ಸಂಸ್ಕರಣ ಶುಲ್ಕ ವಿಧಿಸುವುದಿಲ್ಲ. ಕಡಿಮೆ ಬಡ್ಡಿ ದರದಲ್ಲಿ ಅಂದರೆ ಶೆ 8.70ರಿಂದ ಆರಂಭಗೊಂಡಂತೆ ಗ್ರಾಹಕರಿಗೆ ಕಾರು ಖರೀದಿ ಲೋನ್ ಒದಗಿಸಲಿದೆ. ಲೋನ್‌ಗಾಗಿ ಆನ್‌ಲೈನ್ ಮೂಲಕ ಬ್ಯಾಂಕ್‌ನ ಡಿಜಿಟಲ್ ವೇದಿಕೆ ಯೊನೊ/ಬ್ಯಾಂಕ್ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸುವ ಗ್ರಾಹಕರಿಗಾಗಿ ಬ್ಯಾಂಕ್ ಬಡ್ಡಿ ದರದಲ್ಲಿ ಶೇ 25 ಬಿಬಿಎಸ್ ರಿಯಾಯಿತಿ ನೀಡಲಿದೆ. ವೇತನದಾರ ಗ್ರಾಹಕರು ಆನ್ ರೋಡ್ ದರದ ಮೇಲೆ ಶೇ 90ರವರೆಗೆ ಸಾಲ ಪಡೆಯಬಹುದು.

ಭವಿಷ್ಯದಲ್ಲಿ ಡೆಬಿಟ್ ಕಾರ್ಡ್‌ಗಳ ಬಳಕೆಯೂ ಸ್ಥಗಿತ: ಎಸ್‌ಬಿಐ ಇಂಗಿತಭವಿಷ್ಯದಲ್ಲಿ ಡೆಬಿಟ್ ಕಾರ್ಡ್‌ಗಳ ಬಳಕೆಯೂ ಸ್ಥಗಿತ: ಎಸ್‌ಬಿಐ ಇಂಗಿತ

ಗ್ರಾಹಕರಿಗೆ ಹೆಚ್ಚಿನ ಸಂಭ್ರಮವನ್ನು ನೀಡುವ ಕ್ರಮವಾಗಿ ಎಸ್‌ಬಿಇಐ ವೈಯಕ್ತಿಕ ಸಾಲವನ್ನು ರೂ. 20ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ನೀಡಲಿದೆ. ಆರಂಭಿಕ ಬಡ್ಡಿ ದರ ಶೇ 10.75ರಷ್ಟು ಇದ್ದು, ಮರುಪಾವತಿ ಅವಧಿಯು 6 ವರ್ಷಗಳವರೆಗೂ ಇದೆ. ಇಎಂಐ ಹೊರೆಯೂ ಕುಗ್ಗಲಿದೆ. ಹೆಚ್ಚುವರಿಯಾಗಿ ವೇತನದಾರ ಗ್ರಾಹರು ಡಿಜಿಟಲ್ ಲೋನ್ ಅನ್ನು 5 ಲಕ್ಷದವರೆವಿಗೆ ಯೊನೊ ಮೂಲಕ ಕೇವಲ ನಾಲ್ಕು ಕ್ಲಿಕ್‌ಗಳ ಮೂಲಕ ಪಡೆಯಬಹುದು.

SBI announces festive cheer for retail customers

ಬ್ಯಾಂಕ್ ಆಕರ್ಷಕವಾದ ಬಡ್ಡಿ ದರದಲ್ಲಿ ಶಿಕ್ಷಣ ಸಾಲವವನ್ನು ನೀಡಲಿದೆ. ಬಡ್ಡಿದರ ಶೇ ೮.೨೫ರಷ್ಟಿದೆ. ಸಾಲದ ಮೊತ್ತ ಭಾರತದಲ್ಲಿ ಕಲಿಕೆಗೆ ರೂ. 50ಲಕ್ಷದವರೆಗೂ, ವಿದೇಶದಲ್ಲಿ ಕಲಿಕೆಗಾಗಿ ರೂ. 1.5 ಕೋಟಿವರೆಗೂ ಲಭ್ಯವಿದೆ. ಗ್ರಾಹಕರಿಗೆ ಮರುಪಾವತಿ ಅವಧಿಯು 15 ವರ್ಷಗಳವರೆಗೂ ಇದ್ದು, ಇಎಂಐ ಹೊರೆಯೂ ಕಡಿಮೆ ಆಗಲಿದೆ.

ಇತ್ತೀಚೆಗೆ ಎಸ್‌ಬಿಐ ಗೃಹ ಸಾಲದ ಮೇ ಎಂಸಿಎಲ್‌ಆರ್ ಅನ್ನು ೧೫ ಬಿಪಿಎಸ್‌ಗಳಿಂದ ತಗ್ಗಿಸಿದೆ. ಏಪ್ರಿಲ್ 2019ರಿಂದ ಇಲ್ಲಿಯವರೆಗೆ ಒಟ್ಟಾರೆ 35 ಬಿಪಿಎಸ್ ಅಷ್ಟನ್ನು ಇಳಿಸಿದಂತಾಗಿದೆ. ಈಗ ಅತಿ ಕಡಿಮೆ ದರದ ಅಂದರೆ, ಶೇ 8.05ರ ದರದಲ್ಲಿ ಗೃಹಸಾಲ ಲಭ್ಯವಿದ್ದು, ಗೃಹ ಸಾಲಕ್ಕೆ ರೆಪೊ ದರ ಜೋಡಣೆ ಮಾಡಲಾಗಿರುತ್ತದೆ. ಇದು, ಸೆಪ್ಟೆಂಬರ್ 1, 2019ರಿಂದ ಜಾರಿಗೆ ಬರುವಂತೆ ಹಾಲಿ ಇರುವ ಮತ್ತು ಎಲ್ಲ ನೂತನ ಸಾಲಗಳಿಗೆ ಅನ್ವಯವಾಗಲಿದೆ.

English summary
State Bank of India (SBI) announces bouquet of special offerings in this festive season for retail banking customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X