ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಳಿತಾಯ ಮಾಡಿ ನಿಮ್ಮ ಹಣ ದ್ವಿಗುಣಗೊಳಿಸುವ ಯೋಜನೆ ಬಗ್ಗೆ ತಿಳಿಯಿರಿ

|
Google Oneindia Kannada News

ನವದೆಹಲಿ, ಜೂ.26: ಹಣ ಉಳಿತಾಯ ಮಾಡೋದು ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ಉಳಿತಾಯದ ಜೊತೆ ಅದೇ ಹಣ ಕೆಲವೇ ವರ್ಷಗಳಲ್ಲಿ ದ್ವಿಗುಣವಾಗುತ್ತದೆ ಅಂದ್ರೆ ಅದು ಇನ್ನೂ ಒಳ್ಳೆಯದೇ ಅಲ್ಲವಾ, ನಿಮ್ಮ ಹಣಕ್ಕೆ ಭದ್ರತೆ ಜೊತೆ ಉಳಿತಾಯದ ಹಣಕ್ಕೆ ಉತ್ತಮ ಬಡ್ಡಿ ಕೊಡುವ ಯೋಜನೆ ಭಾರತೀಯ ಅಂಚೆಯಲ್ಲಿದೆ.

ಭಾರತೀಯ ಅಂಚೆ ಇಲಾಖೆಯಡಿಯಲ್ಲಿ, ತಮ್ಮ ಹಣವನ್ನು ಉಳಿಸಲು ಅಥವಾ ಸುರಕ್ಷಿತ ಯೋಜನೆಯಲ್ಲಿ ಇರಿಸಲು ಬಯಸುವ ವ್ಯಕ್ತಿಗಳಿಗೆ ಹಲವಾರು ಹೂಡಿಕೆ ಅವಕಾಶಗಳನ್ನು ನೀಡುತ್ತದೆ. ಹೆಚ್ಚಿನ ಅಪಾಯವನ್ನು ಇಷ್ಟಪಡದ ಮತ್ತು ಷೇರು ಮಾರುಕಟ್ಟೆಯಲ್ಲಿ ತಮ್ಮ ಹಣವನ್ನು ಹೂಡಿಕೆ ಮಾಡುವ ಬಗ್ಗೆ ಭಯಪಡುವ ಜನರಿಗೆ ಅಂಚೆ ಇಲಾಖೆ ಯೋಜನೆಗಳು ಉತ್ತಮ ಉಳಿತಾಯ ಆಯ್ಕೆಯಾಗಿದೆ.

ಜುಲೈ 1ರಿಂದ ಹೊಸ ಡೆಬಿಟ್ ಕಾರ್ಡ್ ನಿಯಮ: ವಿವರಗಳು ಇಲ್ಲಿವೆಜುಲೈ 1ರಿಂದ ಹೊಸ ಡೆಬಿಟ್ ಕಾರ್ಡ್ ನಿಯಮ: ವಿವರಗಳು ಇಲ್ಲಿವೆ

ಭಾರತೀಯ ಅಂಚೆ ನೀಡುವ ಯೋಜನೆಗಳನ್ನು ಲಾಭದಾಯಕ ಆಯ್ಕೆಯನ್ನಾಗಿ ಮಾಡುವುದು ಸರ್ಕಾರದಿಂದ ಬೆಂಬಲಿತವಾಗಿದೆ, ಆದ್ದರಿಂದ ಇಲ್ಲಿ ಸುರಕ್ಷತೆ ಯಾವ ಮೋಸವೂ ಇಲ್ಲ. ಮತ್ತೊಂದು ಪ್ರಯೋಜನವೆಂದರೆ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುವುದು. ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳ ಅಡಿಯಲ್ಲಿ ಲಭ್ಯವಿರುವ ಹಲವಾರು ಯೋಜನೆಗಳಿಗೆ ಹೂಡಿಕೆದಾರರು ಹಣ ಹಾಕಬಹುದು.

ಅಂತಹ ಒಂದು ಯೋಜನೆಯ ವಿವರವಾದ ನೋಟ ಇಲ್ಲಿದೆ. ಕಿಸಾನ್ ವಿಕಾಸ್ ಪತ್ರ ಇದನ್ನು ಮೊದಲು 1988 ರಲ್ಲಿ ಪ್ರಾರಂಭಿಸಲಾಯಿತು ಈ ಯೋಜನೆ ಕುರಿತಾದ ಮಾಹಿತಿ.

ಡಿಜಿಟಲ್ ಯುಗದಲ್ಲಿ ಹೊಸದಾಗಿ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆಡಿಜಿಟಲ್ ಯುಗದಲ್ಲಿ ಹೊಸದಾಗಿ ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ

ಉಳಿತಾಯದ ಮೇಲೆ ಉತ್ತಮ ಬಡ್ಡಿ

ಉಳಿತಾಯದ ಮೇಲೆ ಉತ್ತಮ ಬಡ್ಡಿ

ಈ ಉಳಿತಾಯ ಯೋಜನೆಯಲ್ಲಿ, ಬಡ್ಡಿ ದರವು 6.9 ಪ್ರತಿಶತವಾಗಿದ್ದು, ಇದನ್ನು ವಾರ್ಷಿಕವಾಗಿ ಸಂಯೋಜಿಸಲಾಗುತ್ತದೆ. ಹೂಡಿಕೆ ಮಾಡಿದ ಮೊತ್ತವು 10 ವರ್ಷ ಮತ್ತು 4 ತಿಂಗಳುಗಳಲ್ಲಿ ದ್ವಿಗುಣಗೊಳ್ಳುತ್ತದೆ. ಖಾತೆಯನ್ನು ತೆರೆಯಲು ಅಗತ್ಯವಿರುವ ಕನಿಷ್ಠ ಮೊತ್ತವು 1,000 ರೂ ಮತ್ತು ಗರಿಷ್ಠ ಎಷ್ಟು ಹಣ ಬೇಕಾದರೂ ಹೂಡಿಕೆ ಮಾಡಬಹುದು.

ಯಾರಿಗೆಲ್ಲಾ ಖಾತೆ ತೆರೆಯಲು ಅವಕಾಶ

ಯಾರಿಗೆಲ್ಲಾ ಖಾತೆ ತೆರೆಯಲು ಅವಕಾಶ

ಅರ್ಹ ಹೂಡಿಕೆದಾರರು: ಎಲ್ಲಾ ವಯಸ್ಕರು ಈ ಯೋಜನೆಯಡಿ ಖಾತೆ ತೆರಯಬಹುದು. 3 ಜನ ಒಟ್ಟಿಗೆ ಜಂಟಿ ಖಾತೆ ತೆರೆಯಲು ಕೂಡ ಅನುಮತಿ ಇದೆ. ಅಪ್ರಾಪ್ತರು, ಮಾನಸಿಕ ಅಸ್ವಸ್ತ ವ್ಯಕ್ತಿಯ ಪರವಾಗಿ ಕೂಡ ಖಾತೆ ತೆರೆಯಬಹುದು. 10 ವರ್ಷಕ್ಕಿಂತ ಮೇಲ್ಪಟ್ಟವರು ಅವರ ಸ್ವಂತ ಹೆಸರಿನಲ್ಲಿ ಖಾರೆ ತೆರೆಯಲು ಅವಕಾಶ ಇದೆ. ಯೋಜನೆಯ ಅಡಿಯಲ್ಲಿ ಒಬ್ಬ ವ್ಯಕ್ತಿ ಎಷ್ಟು ಖಾತೆಗಳನ್ನು ಬೇಕಾದರೂ ತೆರೆಯಲು ಅವಕಾಶವಿದೆ.

ಹಿಂಪಡೆಯುವ ಅವಧಿ

ಹಿಂಪಡೆಯುವ ಅವಧಿ

ಠೇವಣಿಯು ಠೇವಣಿ ದಿನಾಂಕದಂದು ಅನ್ವಯವಾಗುವಂತೆ ಕಾಲಕಾಲಕ್ಕೆ ಹಣಕಾಸು ಸಚಿವಾಲಯವು ಸೂಚಿಸಿದ ಮುಕ್ತಾಯದ ಅವಧಿಯಲ್ಲಿ ಪಕ್ವವಾಗುತ್ತದೆ. ಯೋಜನೆಯು 124 ತಿಂಗಳುಗಳಲ್ಲಿ ಮುಕ್ತಾಯವಾಗುತ್ತದೆ, ಲಾಕ್-ಇನ್ ಅವಧಿ 30 ತಿಂಗಳು.

ಕೆಲವು ಷರತ್ತುಗಳಿಗೆ ಒಳಪಟ್ಟು ಮೆಚ್ಯುರಿಟಗೆ ಮೊದಲು ಯಾವುದೇ ಸಮಯದಲ್ಲಿ ಕೆವಿಪಿ (KVP) ಖಾತೆಯನ್ನು ಅಕಾಲಿಕವಾಗಿ ಮುಚ್ಚಬಹುದು.

ಖಾತೆ ಹೊಂದಿರು ವ್ಯಕ್ತಿ ಮರಣಿಸಿದಾಗ ಅಥವಾ ಜಂಟಿ ಖಾತೆಯಲ್ಲಿರುವ ಓರ್ವ ವ್ಯಕ್ತಿ ಅಥವಾ ಎಲ್ಲಾ ಖಾತೆದಾರರು ಮರಣಿಸಿದಾಗ. ಗೆಜೆಟ್ ಅಧಿಕಾರಿಯಾಗಿರುವ ಪ್ರತಿಜ್ಞೆಯಿಂದ ಮುಟ್ಟುಗೋಲು ಹಾಕಿಕೊಂಡ ಮೇಲೆ. ನ್ಯಾಯಾಲಯ ಆದೇಶ ನೀಡಿದಾಗ. ಠೇವಣಿ ಮಾಡಿದ ದಿನಾಂಕದಿಂದ 2 ವರ್ಷಗಳು ಮತ್ತು 6 ತಿಂಗಳ ನಂತರ ಕೆವಿಪಿ ಖಾತೆಯನ್ನು ಮುಚ್ಚಲು ಅವಕಾಶವಿದೆ.

ಖಾತೆ ವರ್ಗಾವಣೆಗೂ ಅವಕಾಶವಿದೆ

ಖಾತೆ ವರ್ಗಾವಣೆಗೂ ಅವಕಾಶವಿದೆ

ಕಿಸಾನ್ ವಿಕಾಸ್ ಪತ್ರ (KVP) ಅನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಕೆಲವು ಷರತ್ತುಗಳ ಮೇಲೆ ಮಾತ್ರ ವರ್ಗಾಯಿಸಬಹುದು.

ಖಾತೆದಾರನ ಮರಣದ ನಂತರ ನಾಮಿನಿ/ಕಾನೂನು ಉತ್ತರಾಧಿಕಾರಿಗಳಿಗೆ ವರ್ಗಾವಣೆ ಮಾಡಬಹುದು. ಖಾತೆದಾರನ ಮರಣದ ಮೇಲೆ ಜಂಟಿ ಖಾತೆದಾರರು. ನ್ಯಾಯಾಲಯದ ಆದೇಶದ ಮೇರೆಗೆ ಕೂಡ ಖಾತೆ ವರ್ಗಾವಣೆ ಮಾಡಬಹುದು. ನಿರ್ದಿಷ್ಟಪಡಿಸಿದ ಪ್ರಾಧಿಕಾರಕ್ಕೆ ಖಾತೆಯನ್ನು ವಾಗ್ದಾನ ಮಾಡಿದ ಮೇಲೆ ಖಾತೆ ವರ್ಗಾವಣೆಗೆ ಅವಕಾಶವಿದೆ.

ಈ ಯೋಜನೆಯಲ್ಲಿ ಹೂಡಿಕೆದಾರರು ತಮ್ಮ ಕೆವಿಪಿ (KVP) ಪ್ರಮಾಣಪತ್ರವನ್ನು ಆಧಾರ ಅಥವಾ ಭದ್ರತೆಯಾಗಿ ಸುರಕ್ಷಿತ ಸಾಲಗಳನ್ನು ಪಡೆಯಲು ಬಳಸಬಹುದು. ಅಂತಹ ಸಾಲಗಳಿಗೆ ಬಡ್ಡಿ ದರ ಕಡಿಮೆ ಇರುತ್ತದೆ

English summary
India Post, under the Department of Posts, offers numerous investment opportunities to individuals who are looking to save their money in a safe scheme. Post Office is one of the best places to invest your money. it's Gives Maximum safety and a good interest rate for savings amount.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X