ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲಾನ್ ಮಸ್ಕ್ ಟ್ವಿಟ್ಟರ್ ಖರೀದಿ ಯತ್ನಕ್ಕೆ ಸೌದಿ ರಾಜಕುಮಾರ ವಿರೋಧ

|
Google Oneindia Kannada News

ದುಬೈ, ಏ. 15: ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರು ಟ್ವಿಟ್ಟರ್ ಖರೀದಿಸಲು ಮುಂದಾಗಿರುವುದಕ್ಕೆ ಸೌದಿ ರಾಜಕುಮಾರ ವಿರೋಧಿಸಿದ್ದಾರೆ. ಟ್ವಿಟ್ಟರ್‌ನಲ್ಲೇ ಇಲಾನ್ ಮಸ್ಕ್ ಅವರನ್ನ ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ಸೌದಿ ರಾಜಕುಮಾರ ಅಲ್ವಲೀದ್ ಬಿನ್ ತಲಾಲ್ ಅವರು, ಇಲಾನ್ ಮಸ್ಕ್ ಕೊಟ್ಟಿರುವ ಆಫರ್ ತೃಪ್ತಿಕರವಲ್ಲ. ಟ್ವಿಟ್ಟರ್‌ನ ಪ್ರಮುಖ ಷೇರುದಾರನಾಗಿ ನಾನು ಈ ಆಫರ್ ತಿರಸ್ಕರಿಸುತ್ತೇನೆ ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಇಲಾನ್ ಮಸ್ಕ್ ಅವರು ಸೌದಿ ಪ್ರಿನ್ಸ್‌ಗೆ ಎರಡು ಪ್ರಶ್ನೆ ಕೂಡ ಹಾಕಿದ್ದಾರೆ.

ಇಲಾನ್ ಮಸ್ಕ್ ಅವರು ಮೊದಲಿಗೆ ಟ್ವಿಟ್ಟರ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಪ್ರಯತ್ನ ಮಾಡಿದ್ದಾರೆ. ಆದರೆ, ಅದನ್ನ ತಿರಸ್ಕರಿಸಲಾಯಿತು. ಅದಾದ ಬಳಿಕ ಮಸ್ಕ್ ಅವರು ಟ್ವಿಟ್ಟರ್ ಕಂಪನಿಯನ್ನೇ 43 ಬಿಲಿಯನ್ ಡಾಲ್ ಹಣಕ್ಕೆ (3.28 ಲಕ್ಷ ಕೋಟಿ ರೂಪಾಯಿ) ಖರೀದಿಸುವ ಆಫರ್ ಮುಂದಿಟ್ಟಿದ್ದಾರೆ. ಟ್ವಿಟ್ಟರ್‌ನ ಪ್ರತೀ ಷೇರನ್ನೂ 54.20 ಡಾಲರ್‌ಗೆ (ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ರೂಪಾಯಿ) ಕೊಳ್ಳುವುದಾಗಿ ಅವರು ಟ್ವಿಟ್ಟರ್ ಛೇರ್ಮನ್ ಬ್ರೆಟ್ ಟೇಲರ್ ಅವರಿಗೆ ಆಫರ್ ಕೊಟ್ಟು ಟ್ವೀಟ್ ಮಾಡಿದ್ದರು.

ಎಲಾನ್ ಮಸ್ಕ್ ಆಫರ್‌ಗೆ ಟ್ವಿಟ್ಟರ್ ಹೇಳಿದ್ದೇನು? ಎಲಾನ್ ಮಸ್ಕ್ ಆಫರ್‌ಗೆ ಟ್ವಿಟ್ಟರ್ ಹೇಳಿದ್ದೇನು?

ಇಲಾನ್ ಮಸ್ಕ್ ಅವರು ಟ್ವಿಟ್ಟರ್‌ನ ಟೀಕಾಕಾರರಲ್ಲಿ ಒಬ್ಬರು. ಟ್ವಿಟ್ಟರ್ ಮುಕ್ತ ವಾಕ್‌ಸ್ವಾತಂತ್ರ್ಯದ ವಾತಾವರಣ ಹೊಂದಿಲ್ಲ ಎಂಬುದು ಅವರ ಪ್ರಮುಖ ಆಕ್ಷೇಪ. ಈಗ ಅವರು ಟ್ವಿಟ್ಟರ್ ಅನ್ನು ಖರೀದಿಸಿ ಅದನ್ನು ಮಾದರಿ ಕಂಪನಿಯಾಗಿಸುತ್ತೇನೆ ಎಂಬರ್ಥದಲ್ಲಿ ಮಸ್ಕ್ ಹೇಳಿದ್ದಾರೆ.

As Saudi Prince Rejects Offer, Elon Musk Asks 2 Questions

ಇದೀಗ ಸೌದಿ ರಾಜಕುಮಾರ್ ಅಲ್ವಲೀದ್ ಬಿನ್ ತಲಾಲ್ ಅವರು ಎಲಾನ್ ಮಸ್ಕ್ ಅವರ ಆಫರನ್ನು ತಿರಸ್ಕರಿಸಿರುವುದಾಗಿ ತಿಳಿಸಿದ್ದಾರೆ. ಅಂದಹಾಗೆ ತಲಾಲ್ ಅವರು ಟ್ವಿಟ್ಟರ್‌ನ ಪ್ರಮುಖ ಷೇರುದಾರರಾಗಿದ್ದಾರೆ. ಜೊತೆಗೆ ಅದರೊಂದಿಗೆ ದೀರ್ಘಾವಧಿ ಸಂಬಂಧ ಹೊಂದಿದ್ದಾರೆ.

Elon Musk : ಟ್ವಿಟರ್ ಮಂಡಳಿಗೆ ಸೇರುವುದಿಲ್ಲ ಟೆಸ್ಲಾ ಸಿಇಓ ಎಲೋನ್ ಮಸ್ಕ್ Elon Musk : ಟ್ವಿಟರ್ ಮಂಡಳಿಗೆ ಸೇರುವುದಿಲ್ಲ ಟೆಸ್ಲಾ ಸಿಇಓ ಎಲೋನ್ ಮಸ್ಕ್

ಟ್ವಿಟ್ಟರ್ ಕಂಪನಿಯಲ್ಲಿ ನಮ್ಮ ಪಾಲನ್ನು ಶೇ 5.2ಕ್ಕೆ ಹೆಚ್ಚಿಸಿದ್ದೇವೆ. ಇದರೊಂದಿಗೆ ಕಂಪನಿಯಲ್ಲಿರುವ ನಮ್ಮ ಪಾಲಿನ ಮೌಲ್ಯವು 3.75 ಬಿಲಿಯನ್ ರಿಯಾಲ್ಸ್ ಮೊತ್ತವಾಗಿದೆ ಎಂದು ತಾನು ಈ ಹಿಂದೆ ಮಾಡಿದ್ದ ಟ್ವೀಟನ್ನು ಉಲ್ಲೇಖಿಸಿ ಅಲ್ವಲೀದ್ ತಲಾಲ್ ಅವರು, ಎಲಾನ್ ಮಸ್ಕ್ ಟ್ವೀಟ್‌ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. "ಟ್ವಿಟ್ಟರ್‌ನ ಬೆಳವಣಿಗೆ ಸಾಧ್ಯತೆಯನ್ನ ಪರಿಗಣಿಸಿದರೆ ಇಲಾನ್ ಮಸ್ಕ್ ಅವರ ಪ್ರತೀ ಷೇರಿಗೆ 54.20 ಡಾಲರ್ ಹಣದ ಆಫರ್ ಸಮರ್ಪಕ ಎನಿಸುವುದಿಲ್ಲ. ಟ್ವಿಟ್ಟರ್‌ನ ಅತಿದೊಡ್ಡ ಹಾಗೂ ದೀರ್ಘಾವಧಿ ಷೇರುದಾರರಲ್ಲೊಬ್ಬರಾಗಿರುವ ನಾನು ಮತ್ತು ಸೌದಿ ಸಂಸ್ಥಾನ ಈ ಆಫರ್ ಅನ್ನು ತಿರಸ್ಕರಿಸುತ್ತೇವೆ" ಎಂದು ತಲಾಲ್ ಟ್ವೀಟ್ ಮಾಡಿದ್ದಾರೆ.

As Saudi Prince Rejects Offer, Elon Musk Asks 2 Questions

ಮಸ್ಕ್ ಎರಡು ಪ್ರಶ್ನೆ:
ಸೌದಿ ರಾಜಕುಮಾರನ ಟ್ವೀಟ್‌ಗೆ ಜಗ್ಗದ ಎಲಾನ್ ಮಸ್ಕ್ ಎರಡು ಜಾಣ್ಮೆಯ ಪ್ರಶ್ನೆಗಳನ್ನ ಹಾಕಿದ್ದಾರೆ. ಪರೋಕ್ಷವಾಗಿ ಮತ್ತು ನೇರವಾಗಿ ಟ್ವಿಟ್ಟರ್‌ನಲ್ಲಿ ಸಂಸ್ಥಾನದ ಪಾಲು ಎಷ್ಟು ಇದೆ ಎಂಬುದು ಒಂದು ಪ್ರಶ್ನೆ. ಪತ್ರಕರ್ತರ ವಾಕ್ ಸ್ವಾತಂತ್ರ್ಯದ ಬಗ್ಗೆ ಸಂಸ್ಥಾನದ ಅನಿಸಿಕೆ ಏನು ಎಂಬುದು ಮಸ್ಕ್ ಅವರ ಮತ್ತೊಂದು ಪ್ರಶ್ನೆ.

As Saudi Prince Rejects Offer, Elon Musk Asks 2 Questions

ಕುತೂಹಲ ಎಂದರೆ ಟ್ವಿಟ್ಟರ್‌ನಲ್ಲಿ ಸೌದಿ ರಾಜಕುಮಾರ್ ಅಲ್ವಲೀದ್ ತಲಾಲ್ ಮತ್ತು ಸೌದಿ ಸಂಸ್ಥಾನದ ಪಾಲು ಶೇ. 52 ಇದೆ. ಆದರೆ, ಇಲಾನ್ ಮಸ್ಕ್ ಅವರು ಶೇ. ೯ರಷ್ಟು ಪಾಲನ್ನು ಹೊಂದಿದ್ದಾರೆ. ಇಷ್ಟು ಪಾಲು ಹೊಂದಿದ್ದರೂ ಮಸ್ಕ್ ಅವರಿಗೆ ಟ್ವಿಟ್ಟರ್ ಬೋರ್ಡ್ ಸದಸ್ಯ ಸ್ಥಾನವನ್ನು ನಿರಾಕರಿಸಲಾಗಿರುವುದು ಅಚ್ಚರಿ ಮೂಡಿಸಿದೆ.

ಟ್ವಿಟ್ಟರ್ ಅನ್ನು ಖರೀದಿಸುವ ತಮ್ಮ ಆಫರ್ ತಿರಸ್ಕಾರವಾದರೆ ಷೇರುದಾರನಾಗಿ ತನ್ನ ಸ್ಥಾನವನ್ನು ಮರುಪರಿಶೀಲಿಸಬೇಕಾಗಬಹುದು ಎಂದು ಎಲಾನ್ ಮಸ್ಕ್ ಎಚ್ಚರಿಕೆ ನೀಡಿದ್ದಾರೆ. ಅಂದರೆ ಷೇರುಗಳನ್ನ ಹಿಂದಿರುಗಿಸಿಬಿಡುವ ಆಲೋಚನೆಯಲ್ಲಿದ್ದಾರೆ ವಿಶ್ವದ ಪ್ರಮುಖ ಉದ್ಯಮಿ.

(ಒನ್ಇಂಡಿಯಾ ಸುದ್ದಿ)

English summary
Saudi Prince Alwaleed bin Talal rejected Elon Musk's $43 billion all-cash offer to Twitter chairman Bret Taylor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X