ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆ್ಯಪಲ್ ಮೀರಿಸಿ ಮೋಸ್ಟ್ ವ್ಯಾಲುವಬಲ್ ಕಂಪನಿ ಎನಿಸಿದೆ ಸೌದಿ ಅರಾಮ್ಕೋ

|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೋ, ಮೇ 12: ಸೌದಿ ಅರೇಬಿಯಾದ ತೈಲ ಉತ್ಪನ್ನ ಸಂಸ್ಥೆ ಸೌದಿ ಅರಾಮ್ಕೋ (Saudi Aramco) ಈಗ ವಿಶ್ವದಲ್ಲೇ ಅತಿ ಮೌಲ್ಯಯುತ ಕಂಪನಿ (MVC- Most Valuable Company) ಆಗಿದೆ. ಐಫೋನ್ ತಯಾರಕ ಆ್ಯಪಲ್ ಸಂಸ್ಥೆಯನ್ನೂ ಸೌದಿ ಅರಾಮ್ಕೋ ಹಿಂದಿಕ್ಕಿದೆ. ಇದು ಷೇರುಪೇಟೆಗಳಲ್ಲಿ ಕಂಪನಿಗಳ ಒಟ್ಟಾರೆ ಷೇರು ಮತ್ತು ಅದರ ಮೌಲ್ಯ ಇವುಗಳನ್ನ ಆಧರಿಸಿ ಮೋಸ್ಟ್ ವ್ಯಾಲುಬಲ್ ಕಂಪನಿ ಯಾವುದು ಎಂದು ನಿರ್ಧರಿಸಲಾಗುತ್ತದೆ. ಉಕ್ರೇನ್ ಯುದ್ಧ ಮತ್ತಿತರ ಕಾರಣದಿಂದ ತೈಲ ಬೆಲೆ ಹೆಚ್ಚಳವಾಗಿದ್ದು ಸೌದಿ ಅರಾಮ್ಕೋ ಷೇರುಗಳಿಗೆ ಒಳ್ಳೆಯ ಬೇಡಿಕೆ ಸೃಷ್ಟಿಯಾಗುತ್ತಿದೆ. ಇತ್ತೀಚಿನ ದಿನಗಳಿಂದ ಆ ಕಂಪನಿಯ ಷೇರುಗಳ ಮೌಲ್ಯ ಗಣನೀಯವಾಗಿ ಹೆಚ್ಚುತ್ತಿದೆ. ಅತ್ತ, ಆ್ಯಪಲ್ ಕಂಪನಿಯ ಷೇರು ಮೌಲ್ಯ ಕಳೆದ ಒಂದು ತಿಂಗಳಲ್ಲಿ ಇಳಿಕೆ ಕಾಣುತ್ತಿದೆ. ಇದು ಸೌದಿ ಅರಾಮ್ಕೋ ವಿಶ್ವದ ಮೋಸ್ಟ್ ವ್ಯಾಲುವಬಲ್ ಕಂಪನಿ ಎಂಬ ಪಟ್ಟ ಗಿಟ್ಟಿಸಲು ಕಾರಣವಾಗಿದೆ.

ವರದಿ ಪ್ರಕಾರ, ನಿನ್ನೆ ಷೇರು ಮಾರುಕಟ್ಟೆ ವ್ಯವಹಾರ ಮುಗಿದಾಗ ಸೌದಿ ಅರಾಮ್ಕೋ ಕಂಪನಿಯ ಒಟ್ಟಾರೆ ಷೇರುಗಳ ಒಟ್ಟು ಮೌಲ್ಯ 2.42 ಟ್ರಿಲಿಯನ್ ಡಾಲರ್ (187 ಲಕ್ಷಕೋಟಿ ರೂಪಾಯಿ) ಎಂದು ಹೇಳಲಾಗಿದೆ. ಅದೇ ವೇಳೆ, ಆ್ಯಪಲ್ ಕಂಪನಿಯ ಒಟ್ಟು ಷೇರು ಮೌಲ್ಯ 2.37 ಟ್ರಿಲಿಯನ್ ಡಾಲರ್ (183 ಲಕ್ಷಕೋಟಿ ರೂಪಾಯಿ) ಆಗಿರುವುದು ತಿಳಿದುಬಂದಿದೆ.

ಭಾರತದ ಷೇರುಪೇಟೆ ಸ್ತಂಭನ; ರೂಪಾಯಿ ಮೌಲ್ಯ ಪ್ರಪಾತಕ್ಕೆ ಭಾರತದ ಷೇರುಪೇಟೆ ಸ್ತಂಭನ; ರೂಪಾಯಿ ಮೌಲ್ಯ ಪ್ರಪಾತಕ್ಕೆ

ಸೌದಿ ಅರಾಮ್ಕೋ ಮುನ್ನಡೆ:
ಸೌದಿ ಅರೇಬಿಯಾದ ಸರಕಾರಿ ಸ್ವಾಮ್ಯದ ಸೌದಿ ಅರಾಮ್ಕೋ ಕಚ್ಛಾ ತೈಲ ರಫ್ತು ಮಾಡುವ ಅಗ್ರಮಾನ್ಯ ಸಂಸ್ಥೆಯಾಗಿದೆ. ಕಳೆದ ವರ್ಷ ಇದರ ತೈಲ ಘಟಕದ ಮೇಲೆ ಯೆಮೆನ್ ಬಂಡುಕೋರರು ದಾಳಿ ಮಾಡಿದಾಗ ಬೆಂಕಿ ಹೊತ್ತುಕೊಂಡು ತೈಲ ಉತ್ಪಾದನೆ ತಾತ್ಕಾಲಿಕವಾಗಿ ಸ್ಥಗಿತಗೊಂಡ ಬೆಳವಣಿಗೆ ಮಧ್ಯೆಯೂ ಸೌದಿ ಅರಾಮ್ಕೋ ಗರಿಗೆದರಿ ನಿಂತಿದೆ. ಕೋವಿಡ್ ಸಾಂಕ್ರಾಮಿಕ ಸ್ಥಿತಿ ಕಡಿಮೆ ಆದ ಬಳಿಕ ಪೆಟ್ರೋಲ್‌ಗೆ ಬೇಡಿಕೆ ಹೆಚ್ಚಿದೆ. ಈಗ ರಷ್ಯಾ ಉಕ್ರೇನ್ ಯುದ್ಧವಾಗುತ್ತಿರುವುದರಿಂದ ಸೌದಿ ಅರಾಮ್ಕೋದ ತೈಲಕ್ಕೆ ವಿಪರೀತ ಬೇಡಿಕೆ ಬರುತ್ತಿದೆ. ಇದರಿಂದ ತೈಲ ಉತ್ಪಾದನೆ ಹೆಚ್ಚಿಸಬೇಕಾದ ಒತ್ತಡ ಒಂದೆಡೆಯಾದರೆ, ಅದರಿಂದ ಸಿಗುತ್ತಿರುವ ಲಾಭವೂ ಅರಾಮ್ಕೋದ ಕೈಹಿಡಿಯುತ್ತಿದೆ.

ರಷ್ಯಾದಿಂದ ಇಂಧನ ಸ್ವಾತಂತ್ರ್ಯಕ್ಕಾಗಿ ಯುರೋಪ್ ರಾಷ್ಟ್ರಗಳಿಂದ 195 ಬಿಲಿಯನ್ ಡಾಲರ್ ಖರ್ಚುರಷ್ಯಾದಿಂದ ಇಂಧನ ಸ್ವಾತಂತ್ರ್ಯಕ್ಕಾಗಿ ಯುರೋಪ್ ರಾಷ್ಟ್ರಗಳಿಂದ 195 ಬಿಲಿಯನ್ ಡಾಲರ್ ಖರ್ಚು

Saudi Aramco Overtakes Apple To Become Most Valuable Company

ಆ್ಯಪಲ್ ಕಂಪನಿ ಷೇರು ಕುಸಿತಕ್ಕೆ ಕಾರಣ?
ಆ್ಯಪಲ್ ಕಂಪನಿಯ ಉತ್ಪನ್ನಗಳಿಗೆ ಒಳ್ಳೆಯ ಬೇಡಿಕೆ ಇದೆ. ಕಂಪನಿ ಒಳ್ಳೆಯ ವ್ಯವಹಾರವನ್ನೂ ನಡೆಸುತ್ತಿದೆ. ಈ ವರ್ಷ ಜನವರಿಯಿಂದ ಮಾರ್ಚ್‌ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಆ್ಯಪಲ್ ಕಂಪನಿ ನಿರೀಕ್ಷಿತ ಮಟ್ಟಕ್ಕಿಂತ ತುಸು ಹೆಚ್ಚೇ ಲಾಭ ಮಾಡಿಕೊಂಡಿದೆ. ಆದರೂ ಕಳೆದ ಒಂದು ತಿಂಗಳಿಂದ ಅದರ ಷೇರು ಬೆಲೆ ಇಳಿಕೆಯಾಗುತ್ತಿರುವುದು ಅನೇಕ ಮಂದಿಗೆ ಅಚ್ಚರಿ ಹುಟ್ಟಿಸಿದೆ. ಇದಕ್ಕೆ ಕಾರಣ ಚೀನಾದ ಕೋವಿಡ್ ಲಾಕ್ ಡೌನ್ ಪರಿಸ್ಥಿತಿ ಎಂದು ವಿಶ್ಲೇಷಿಸಲಾಗುತ್ತಿದೆ.

Saudi Aramco Overtakes Apple To Become Most Valuable Company

ಆ್ಯಪಲ್ ಕಂಪನಿಯ ಉತ್ಪನ್ನಗಳು ಚೀನಾದಲ್ಲಿ ತಯಾರಾಗುತ್ತವೆ. ಈಗ ಚೀನಾದಲ್ಲಿ ಕೋವಿಡ್ ಸೋಂಕಿನ ಭಯಕ್ಕೆ ಲಾಕ್ ಡೌನ್ ಮಾಡಲಾಗಿದೆ. ಇದರಿಂದ ಆ್ಯಪಲ್ ಕಂಪನಿಯ ಉತ್ಪನ್ನಗಳ ಸರಬರಾಜು ಸರಪಳಿಗೆ (Supply Chain) ಧಕ್ಕೆ ಅಗಿದೆ. ಜೂನ್ ಅಂತ್ಯದ ತ್ರೈಮಾಸಿಕ ಅವಧಿಯಲ್ಲಿ ಲಾಭ ಕಡಿಮೆ ಆಗಬಹುದು ಎಂದು ಆ್ಯಪಲ್ ಸಂಸ್ಥೆ ಎಚ್ಚರಿಸಿತ್ತು. ಅದರ ಪರಿಣಾಮವಾಗಿ ಷೇರುಪೇಟೆಯಲ್ಲಿ ಆ ಕಂಪನಿಗೆ ತುಸು ಹಿನ್ನಡೆ ಆಗುತ್ತಿರಬಹುದು ಎಂದು ಹೇಳಲಾಗುತ್ತಿದೆ.

(ಒನ್ಇಂಡಿಯಾ ಸುದ್ದಿ)

Recommended Video

Ashwin ಭಾರತ ತಂಡಕ್ಕೆ ವಿಶ್ವಕಪ್ ಆಡೇ ಆಡ್ತಾರೆ | Oneindia Kannada

English summary
Saudi Aramco on Wednesday dethroned Apple as the world's most valuable company as surging oil prices drove up shares and tech stocks slumped.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X