ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ಅರೇಬಿಯಾದಿಂದ ಭಾರತದಲ್ಲಿ $ 100 ಬಿಲಿಯನ್ ಹೂಡಿಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 29: ಜಗತ್ತಿನ ಅತಿ ದೊಡ್ಡ ತೈಲ ರಫ್ತು ಮಾಡುವ ದೇಶ ಸೌದಿ ಅರೇಬಿಯಾವು ಭಾರತದಲ್ಲಿ $ 100 ಬಿಲಿಯನ್ (7 ಲಕ್ಷ ಕೋಟಿ ರುಪಾಯಿ) ಹೂಡಿಕೆ ಮಾಡಲಿದೆ. ಪೆಟ್ರೋ ಕೆಮಿಕಲ್ಸ್, ಮೂಲಸೌಕರ್ಯ, ಗಣಿಗಾರಿಕೆ ಮತ್ತಿತರ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲಿದೆ. ಭಾರತದ ಪ್ರಗತಿಯ ಸಾಮರ್ಥ್ಯವನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರ ಮಾಡಿದೆ.

ಸೌದಿ ರಾಯಭಾರಿ ಡಾ. ಸೌದ್ ಬಿನ್ ಮೊಹ್ಮದ್ ಅಲ್ ಸದಿ ಮಾತನಾಡಿ, ಸೌದಿ ಅರೇಬಿಯಾ ಪಾಲಿಗೆ ಭಾರತವು ಹೂಡಿಕೆಗೆ ಅತ್ಯಾಕರ್ಷಕವಾಗಿದೆ. ತೈಲ, ಅನಿಲ ಹಾಗೂ ಗಣಿಗಾರಿಕೆಗೆ ಸಂಬಂಧಿಸಿದಂತೆ ಮುಖ್ಯ ಕ್ಷೇತ್ರಗಳಲ್ಲಿ ಭಾರತದ ಜತೆಗೆ ದೀರ್ಘಾವಧಿ ಸಹಯೋಗವನ್ನು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ.

Saudi Aramco ತೈಲ ಕಂಪೆನಿ: ಅರಬ್ಬರ ದೇಶದ ಕುಬೇರನ ಸಂಪತ್ತುSaudi Aramco ತೈಲ ಕಂಪೆನಿ: ಅರಬ್ಬರ ದೇಶದ ಕುಬೇರನ ಸಂಪತ್ತು

ವಿದ್ಯುತ್, ರೀಫೈನಿಂಗ್, ಪೆಟ್ರೋ ಕೆಮಿಕಲ್ಸ್, ಮೂಲಸೌಕರ್ಯ, ಕೃಷಿ, ಖನಿಜ ಹಾಗೂ ಗಣಿಗಾರಿಕೆ ಕ್ಷೇತ್ರದಲ್ಲಿ $ 100 ಬಿಲಿಯನ್ ನಷ್ಟು ಹೂಡಿಕೆ ಮಾಡಲು ಸೌದಿ ಅರೇಬಿಯಾ ಎದುರು ನೋಡುತ್ತಿದೆ ಎಂದು ಅಲ್ ಸದಿ ಅವರು ಪಿಟಿಐ ಸುದ್ದಿ ಸಂಸ್ಥೆ ಜತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ.

Saudi Arabia

ಸೌದಿ ಅರೇಬಿಯಾದ ಅತಿ ದೊಡ್ಡ ಕಂಪೆನಿ ಅರಾಮ್ಕೋದಿಂದ ರಿಲಯನ್ಸ್ ಇಂಡಸ್ಟ್ರಿ ಜತೆಗೆ ಸಹಯೋಗಕ್ಕೆ ಪ್ರಸ್ತಾವ ಮಾಡಲಾಗಿದೆ. ಇದು ಭಾರತ ಹಾಗೂ ಸೌದಿ ಅರೇಬಿಯಾ ಮಧ್ಯದ ವ್ಯೂಹಾತ್ಮಕ ಇಂಧನ ನಂಟು ಹೆಚ್ಚಳ ಆಗುತ್ತಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದ್ದಾರೆ.

English summary
Saudi Arabia ambassador said, Saudi will invest $ 100 billion in India. Here is the complete details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X