ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿಯ PIFನಿಂದ ರಿಲಯನ್ಸ್‌ನಲ್ಲಿ 9,555 ಕೋಟಿ ಹೂಡಿಕೆ

|
Google Oneindia Kannada News

ಮುಂಬೈ, ನವೆಂಬರ್ 5: ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ (PIF)ನಿಂದ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಲ್ಲಿ (RRVL) ₹ 9,555 ಕೋಟಿ ರುಪಾಯಿ (ಅಂದಾಜು $1.3 ಬಿಲಿಯನ್) ಹೂಡಿಕೆ ಮಾಡಲಿದೆ. ಈ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಲ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಗುರುವಾರ ಘೋಷಿಸಿದೆ. RRVL ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ.

ಈ ಹೊಸ ಹೂಡಿಕೆಯು ರಿಲಯನ್ಸ್ ರೀಟೇಲ್ ಪ್ರೀ ಮನಿ ಈಕ್ವಿಟಿ ಮೌಲ್ಯವನ್ನು 4.587 ಲಕ್ಷ ಕೋಟಿ ರುಪಾಯಿ (ಅಂದಾಜು $62.4 ಬಿಲಿಯನ್) ಮಾಡಿದೆ. ಇಷ್ಟು ಮೊತ್ತಕ್ಕೆ ರಿಲಯನ್ಸ್ ರೀಟೇಲ್ ವೆಂಚರ್ಸ್ ನ 2.04% ಈಕ್ವಿಟಿ ಪಾಲು ಖರೀದಿಯನ್ನು PIF ಮಾಡಿದಂತಾಗುತ್ತದೆ.

ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ 9ನೇ ಸ್ಥಾನಕ್ಕೆ ಕುಸಿತ ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ್ 9ನೇ ಸ್ಥಾನಕ್ಕೆ ಕುಸಿತ

ಇದಕ್ಕೂ ಮುನ್ನ PIFನಿಂದ ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆಯಲ್ಲಿ ಜಿಯೋ ಪ್ಲಾಟ್ ಫಾರ್ಮ್ಸ್ ನಲ್ಲಿ 2.32% ಷೇರಿನ ಪಾಲು ಖರೀದಿ ಮಾಡಿತ್ತು. ಭಾರತದ ರೀಟೇಲ್ ವಲಯವು ಜಗತ್ತಿನ ಅತಿ ದೊಡ್ಡದರಲ್ಲಿ ಒಂದು. ದೇಶದ ಒಟ್ಟಾರೆ ಜಿಡಿಪಿಯಲ್ಲಿ ಹತ್ತು ಪರ್ಸೆಂಟ್ ಗೂ ಹೆಚ್ಚು ಅದರಿಂದಲೇ ಬರುತ್ತದೆ. ಬೆಳವಣಿಗೆಗೆ ಅಪಾರ ಅವಕಾಶ ಇದೆ.

ಮುಕೇಶ್ ಅಂಬಾನಿ ಮಾತನಾಡಿ

ಮುಕೇಶ್ ಅಂಬಾನಿ ಮಾತನಾಡಿ

ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಮಾತನಾಡಿ, "ಸೌದಿ ಅರೇಬಿಯಾ ಜತೆಗೆ ರಿಲಯನ್ಸ್ ದೀರ್ಘಾವಧಿ ಸಂಬಂಧ ಇದೆ. ಸೌದಿ ಅರೇಬಿಯಾದ ಆರ್ಥಿಕ ಬದಲಾವಣೆ ಮುಂಚೂಣಿಯಲ್ಲಿ ಪಿಐಎಫ್ ಇದೆ. ರಿಲಯನ್ಸ್ ರೀಟೇಲ್ ನಲ್ಲಿ ಗೌರವಾನ್ವಿತ ಸಹಭಾಗಿಗಳಾಗಿ ಪಿಐಎಫ್ ಸ್ವಾಗತಿಸುತ್ತೇನೆ. ಮತ್ತು ಸುಸ್ಥಿರ ಅಭಿವೃದ್ಧಿ ಹಾಗೂ ಮಾರ್ಗದರ್ಶನವನ್ನು ಎದುರು ನೋಡುತ್ತೇವೆ. ಭಾರತದ ರೀಟೇಲ್ ವಲಯದಲ್ಲಿ ನೂರಾ ಮೂವತ್ತು ಕೋಟಿ ಭಾರತೀಯರು ಹಾಗೂ ಲಕ್ಷಾಂತರ ಸಣ್ಣ ವರ್ತಕರಿಗೆ ಬದಲಾವಣೆಗಾಗಿ ನಮ್ಮ ಮಹತ್ವಾಕಾಂಕ್ಷಿ ಪಯಣದಲ್ಲಿ ಮುಂದುವರಿದಿದ್ದೇವೆ" ಎಂದಿದ್ದಾರೆ.

ರಿಲಯನ್ಸ್ ಸಂಸ್ಥೆಗೆ 400 ದಶಲಕ್ಷಕ್ಕೂ ಹೆಚ್ಚು ಮೊಬೈಲ್ ಚಂದಾದಾರರುರಿಲಯನ್ಸ್ ಸಂಸ್ಥೆಗೆ 400 ದಶಲಕ್ಷಕ್ಕೂ ಹೆಚ್ಚು ಮೊಬೈಲ್ ಚಂದಾದಾರರು

PIF ಗವರ್ನರ್ ಯಾಸೀರ್ ಅಲ್- ರುಮಾಯ್ಯನ್

PIF ಗವರ್ನರ್ ಯಾಸೀರ್ ಅಲ್- ರುಮಾಯ್ಯನ್

PIF ಗವರ್ನರ್ ಯಾಸೀರ್ ಅಲ್- ರುಮಾಯ್ಯನ್ ಮಾತನಾಡಿ, " ಭಾರತದ ಅತ್ಯಂತ ಮುಖ್ಯವಾದ ವಲಯದ ಅತಿ ಮುಖ್ಯ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಜತೆಗೆ ನಮ್ಮ ವಿಶ್ವಾಸಾರ್ಹ ಸಹಭಾಗಿತ್ವ ವಿಸ್ತರಣೆ ಆಗಿರುವುದಕ್ಕೆ ಸಂತೋಷ ಆಗುತ್ತಿದೆ. ಪಿಐಎಫ್ ನ ಈ ವ್ಯವಹಾರವು ಹೂಡಿಕೆ ಬದ್ಧತೆಯನ್ನು ಹಾಗೂ ದೀರ್ಘಾವಧಿಯಲ್ಲಿ ವಿಶ್ವದಾದ್ಯಂತ ಆಯಾ ವಲಯದಲ್ಲಿ ವ್ಯವಹಾರಗಳ ಆವಿಷ್ಕಾರಕ್ಕೆ ಸಹಭಾಗಿತ್ವವನ್ನು ವಹಿಸುವುದನ್ನು ತೋರುತ್ತದೆ."

"ಈ ಹೂಡಿಕೆ ಮೂಲಕ ಸೌದಿ ಜನರಿಗೆ ರಿಟರ್ನ್ಸ್ ದೊರಕಿಸಲು ಪಿಐಎಫ್ ಬದ್ಧವಾಗಿದೆ ಮತ್ತು ಸೌದಿ ಅರೇಬಿಯಾದ ಆರ್ಥಿಕ ವೈವಿಧ್ಯಕ್ಕೆ ಇದು ದಾರಿಯಾಗುತ್ತದೆ,"ಎಂದಿದ್ದಾರೆ.

 ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ

ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ

ರಿಲಯನ್ಸ್ ರೀಟೇಲ್ ಲಿಮಿಟೆಡ್ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ಅಂಗಸಂಸ್ಥೆ. ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಮತ್ತು ಲಾಭದಾಯಕವಾದ ಉದ್ಯಮ. ದೇಶದಾದ್ಯಂತ 12 ಸಾವಿರ ಮಳಿಗೆಗಳನ್ನು ಹೊಂದಿದೆ. ಭಾರತದ ರೈತರು, ಎಂಎಸ್ ಎಂಇ ವಲಯ ಬಲಪಡಿಸುವ ಮೂಲಕ ಲಕ್ಷಾಂತರ ಗ್ರಾಹಕರಿಗೆ ಸೇವೆ ಸಲ್ಲಿಸುವ ಉದ್ದೇಶ RRVLಗೆ ಇದೆ.

1Gbpsಗೂ ಹೆಚ್ಚಿನ ವೇಗದ ಸಾಧಿಸಿದ ಜಿಯೋ ಮತ್ತು ಕ್ವಾಲ್1Gbpsಗೂ ಹೆಚ್ಚಿನ ವೇಗದ ಸಾಧಿಸಿದ ಜಿಯೋ ಮತ್ತು ಕ್ವಾಲ್

ಕಳೆದ ತ್ರೈಮಾಸಿಕ ವರದಿ

ಕಳೆದ ತ್ರೈಮಾಸಿಕ ವರದಿ

ಸೆಪ್ಟೆಂಬರ್ 30, 2020ಕ್ಕೆ ಅಂತ್ಯವಾದ ಆರ್ಥಿಕ ವರ್ಷ 2020-21ರ ಎರಡನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ 10,602 ರೂ. ನಿವ್ವಳ ಲಾಭವಾಗಿದ್ದು, ಕಳೆದ ತ್ರೈಮಾಸಿಕದ ಹೋಲಿಕೆಯಲ್ಲಿ (ಎಕ್ಸೆಪ್ಷನಲ್ ಐಟಮ್‌ಗೆ ಮೊದಲು) ಇದು ಶೇ. 28ರಷ್ಟು ಏರಿಕೆ ಕಂಡಿದೆ. ಆದರೆ ವರ್ಷದಿಂದ ವರ್ಷಕ್ಕೆ ಹೋಲಿಕೆಯಲ್ಲಿ ನಿವ್ವಳ ಲಾಭ ಶೇ 15ರಷ್ಟು ಕುಸಿತವಾಗಿದೆ. ಕಳೆದ ವರ್ಷ 11,352 ಕೋಟಿ ರು ಗಳಿಕೆಯಾಗಿತ್ತು. ಈ ಅವಧಿಯಲ್ಲಿ ಸಂಸ್ಥೆಯ ಒಟ್ಟು ಆದಾಯ 128,385 ಕೋಟಿ ರೂ.ಗಳಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 165,228 ಕೋಟಿ ರು ಆದಾಯ ಬಂದಿತ್ತು. ಬಡ್ಡಿ, ತೆರಿಗೆ, ಡಿಪ್ರಿಸಿಯೇಶನ್ ಹಾಗೂ ಅಮಾರ್ಟೈಸೇಶನ್‌ಗಳ ಮೊದಲಿನ ಆದಾಯವು (EBITDA) ಈ ತ್ರೈಮಾಸಿಕದಲ್ಲಿ 23,299 ಕೋಟಿ ರೂ.ಗಳಷ್ಟಿದೆ.

English summary
Billionaire Mukesh Ambani-led Reliance Industries Ltd’s retail arm on Thursday raised ₹9,555 crore from Public Investment Fund (PIF) of Saudi Arabia, taking total fundraise in last two months to ₹47,265 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X